ಕೃತಿ: ಜಂಗಮ ಜ್ಯೋತಿ.
ಲೇಖಕರು: ಶ್ರೀಮತಿ. ಕವಿತಾ
ಮಳಗಿ. ಗುಲ್ಬರ್ಗ
ಶ್ರೀಮತಿ. ಕವಿತಾಂಬಾ ಅವರ ನನ್ನ ಪರಿಚಯವಾದದ್ದು ಈಗ ಒಂದು ವರ್ಶದಿಂದ ವಾಟ್ಸಪ್ ಮೂಲಕ. ಯಾವಾಗಲೂ ನಾವಿ
ಬ್ಬರೂ ಫೋನನಲ್ಲಿ ಮಾತನಾ ಡುತ್ತಿದ್ದೆವು. ಹೀಗಾಗಿ ನಮ್ಮಿಬ್ಬ ರಲ್ಲಿಸಾಹಿತ್ಯದ ಬಂಧನದ ಜೊತೆ ಗೆ ಒಂದು ರೀತಿಯಲ್ಲಿ ರಕ್ತ ಸಂಬಂಧಕ್ಕಿಂತಲೂ ಶ್ರೇಷ್ಠವಾದ
ಒಂದು ಆತ್ಮೀಯತೆಯ ತಾಯಿ ಮಗಳ ಸಂಬಂಧ ಬೆಳೆಯಿತು. ಅವಳ ಸರಳ ಸ್ವಭಾವ, ಮಾತಿನ ಚಾಣಾಕ್ಷತೆ, ಅವಳ ಸಂಘಟನಾ ಶಕ್ತಿ ಎಲ್ಲವೂ ನನ್ನ ಅವಳ ಸ್ನೇಹ ಕ್ಕೆ ನಾಂದಿಯಾದವು. ಅವಳ ನೈಪುಣ್ಯತೆಯಲ್ಲಿ ವೈವಿಧ್ಯತೆ ಇದೆ. ಅವಳು ಕವಿಯಿತ್ರಿಯೂ ಹೌದು, ಪತ್ರಕರತೆಯೂ ಹೌದು, ಲೇಖಕಿಯೂ ಹೌದು. ಅವಳ ವಿವಿಧತೆಯ ಜೊತೆಗೆ ಮೆಚ್ಚಗೆ ಯಾಗುವ ಇನ್ನೊಂದು ಅಂಶ ವೆಂದರೆ ಅವಳ ಹಸನ್ಮುಖ. ಒಂದು ಸಲ ನಾನು ಗುಲ್ಬರ್ಗಾ ಕ್ಕೆ ನಮ್ಮ ತಂಗಿಯ ಮನೆಗೆ ಹೋಗಿದ್ದೆ. ಆಗ ಅವಳಿಗೆ ಅಲ್ಲಿ ಬರಲು ಹೇಳಿದ್ದೆ. ನನ್ನ ಮತ್ತು ಅವಳದು ಅದೇ ಮೊದಲನೇ ಯ ಭೇಟಿ. ಆದರೂ ಕೂಡ ಅದು ನಮ್ಮಿಬ್ಬರಿಗೆ ಅನ್ನಿಸಿದ್ದು ತುಂಬಾ ದಿನಗಳಿಂದ ಪರಿಚಯ ವಿದ್ದ ಹಾಗಿತ್ತು. ನನಗೆ ಅಮ್ಮ ಅಂತ ಪ್ರೀತಿಯಿಂದ ಕರೆದಾಗ ನನಗೂ ಅಷ್ಟೇ ಖುಷಿಯಾಗುತ್ತೆ.
ನಮ್ಮಿಬ್ಬರಲ್ಲಿ ವಯಸ್ಸಿನ ಅಂತ ರ ಬಹಳವಿದ್ದರೂ, ಮಾನಸಿಕ ಭಾವನೆಗಳಲ್ಲಿ ಅಂತರವಿಲ್ಲ. ಅವಳು ನನ್ನನ್ನು ಬೆಟ್ಟಿಯಾಗಲು ಬಂದಾಗ ನನಗೆ ತಾನು ಬರೆದ
“ಜಂಗಮ ಜ್ಯೋತಿ” ಎಂಬ ಕಾದOಬರಿಯನ್ನು ಉಡುಗರೆಯಾಗಿ ಕೊಟ್ಟಳು. ಈ ಪುಸ್ತಕದ ಬಗ್ಗೆ ನನಗೆ ಅನ್ನಿಸಿದ ಭಾವನೆಗಳನ್ನು
ಇಲ್ಲಿ ವ್ಯಕ್ತ ಪಡಿಸಿದ್ದೇನೆ.
ಇದನ್ನು ಬರೆಯಲು ಶುರು ಮಾಡುವ ಮೊದಲು ನಾನು “ಪ್ರವಚನ ಪಿತಾಮಹ” ರೆಂದೇ ಖ್ಯಾತಿವೆತ್ತ ಪರಮಪೂಜ್ಯ ಶ್ರೀ.
ಲಿಂಗಾನಂದ ಸ್ವಾಮೀಜಿ (ಅಪ್ಪಾಜಿ) ಅವರ ಪಾದರವಿoದ
ಗಳಿಗೆ ನನ್ನ ಭಕ್ತಿಪೂರ್ವಕವಾದ ನಮನಗಳನ್ನು ಸಮರ್ಪಿಸಿ ಬರೆ ಯುತ್ತಿದ್ದೇನೆ. ಇದಕ್ಕೆ ನನ್ನಲ್ಲಿ ಒಂದು ಮಮತೆಯ, ಭಕ್ತಿಯ
ಕಾರಣವೂ ಇದೆ. ನಾನು ಬಾಗಲ ಕೋಟೆಯ ಬಸವೇಶ್ವರ ಕಾಲೇ ಜಿನಲ್ಲಿ puc ಓದುತ್ತಿರುವಾಗ (1962) ಸ್ವಾಮೀಜಿಯವರು
ಪ್ರವಚನಕ್ಕೆಂದು ಅಲ್ಲಿಗೆ ಬಂದಿ ದ್ದರು. ಅದೇ ಕಾಲೇಜಿನ ಮೈದಾ
ನದಲ್ಲಿ ಪ್ರತಿದಿನ ಸಾಯಂಕಾಲ ಅವರ ಪ್ರವಚನ ನಡೆಯುತ್ತಿತ್ತು.
ನಾನೂ ಕೂಡ ನನ್ನ ಕುಟುoಬ ದವರೊಡನೆ ಪ್ರತಿದಿನ ಪ್ರವಚನ ಕೇಳಲು ಹೋಗುತ್ತಿದ್ದೆ. ಅವರ ಪ್ರವಚನ ಕೇಳುವದೆಂದರೆ ಒಂದು ಸಂಭ್ರಮ. ಮೈದಾನ ದಲ್ಲಿ ಎಷ್ಟೋ ಸಾವಿರ ಜನರು
ಕುಳಿತಿದ್ದರೂ ಕೂಡ ಒಂದು ಸೂಜಿ ಬಿದ್ದರೂ ಸಪ್ಪಳ ಕೇಳುವಷ್ಟು ಗದ್ದಲವಿಲ್ಲದೆ ಏಕಚಿತ್ತದಿಂದ ಎಲ್ಲರೂ ಕೇಳುತ್ತಿದ್ದರು. ಅವರ ಪ್ರವಚನದ ಶೈಲಿ, ಕಂಚಿನ ಕಂಠ ಎಲ್ಲರನ್ನೂ ಮಂತ್ರಮುಗ್ಧರನ್ನಾ
ಗಿಸುತ್ತಿತ್ತು.
ಶರಣ ಸಾಹಿತ್ಯದ ಅರಿವಿಲ್ಲದ ನಾನು ಅವರ ಪ್ರವ
ಚನದಿಂದ ಎಷ್ಟು ಪ್ರಭಾವಿತಳಾಗಿದ್ದೆಯೆಂದರೆ, ಅವರಲ್ಲಿ ನಾನು
ಬಸವಣ್ಣನನ್ನೇ ಕಾಣುತ್ತಿದ್ದೆ. ಪ್ರವಚನ ಮುಗಿದ ಮೇಲೆ ಅವ
ರೊಡನೆ ಅಂದಿನ ವಿಷಯ ಚರ್ಚಿಸುತ್ತಿದ್ದೆ. ಅವರೂ ನನ್ನನ್ನು
ಮಗಳೇ ಎಂದು ಕರೆದಾಗ ಅಂತಹ ಮಹಾಪುರುಷನಿಂದ ಮಗಳೇ ಎಂದೆನಿಸಿಕೊಂಡ ಹೆಮ್ಮೆ ನನ್ನದಾಗುತ್ತಿತ್ತು. ಪ್ರವಚನದ ಕೊನೆಯ ದಿನ, ಯಾರೂ ತಮ್ಮ ಅಭಿಪ್ರಾಯವನ್ನು ಹೇಳ ಬಹುದು ಎಂದರು. ನನ್ನ ತಮ್ಮ ಆಗಿನ್ನೂ 3ನೆಯ ಕ್ಲಾಸನಲ್ಲಿ ಓದುತ್ತಿದ್ದ. ಅವನು ಎದ್ದು ನಿಂತು ಮಾತನಾಡಿದ. ಎಲ್ಲರ ಕರತಾಡನದ ಜೊತೆಗೆ, ಸ್ವಾಮಿಜಿಯವರು ತುಂಬಾ ಖುಷಿಯಾಗಿ,
ತಮ್ಮ ಕೊರಳಲ್ಲಿಯ ಹಾರವನ್ನು ತೆಗೆದು ಅವನಿಗೆ ‘ನೀನು ಸರಸ್ವತಿಯ ಪುತ್ರ, ಕೀರ್ತಿವಂತನಾಗುತ್ತಿ’
ಎಂದು ಹೇಳಿ ಅವನಿಗೆ ಅದೇ ಹಾರವನ್ನು ಹಾಕಿ, ಆಶೀರ್ವಾದ ಮಾಡಿದರು.
ಅವರ ಆಶೀರ್ವಾದದಿಂದ ಇವತ್ತು ನನ್ನ ತಮ್ಮ
ಡಾ. ರಾಜೇಂದ್ರ ಚೆನ್ನಿ, ಈಗ ಹೆಸರಾಂತ ಸಾಹಿತಿ, ವಿಮರ್ಶಕ ನಾಗಿದ್ದಾನೆ. ನಾನು ಇಂದಿಗೂ ಪ್ರತಿದಿನ ಅವರನ್ನು ಅಪ್ಪಾಜಿ ಎಂದೆ ಸ್ಮರಿಸುತ್ತೇನೆ. ಇಂತಹ ನನ್ನ ಮೆಚ್ಚಿನ ಪರಮಪೂಜ್ಯ ಶ್ರೀ. ಲಿಂಗಾನಂದ ಸ್ವಾಮೀಜಿಯ ವರ ಬಗ್ಗೆ ಕವಿತಾಂಬಾ ಅವರು
ಅವರ ‘ಜಂಗಮ ಜ್ಯೋತಿ’ ಕೃತಿಗೆ ನನ್ನ ವಿಮರ್ಶೆ ಬರೆದು ಕೊಡಿ ಅಮ್ಮ ಎಂದು ಕೇಳಿದಾಗ ನನಗೆ ತುಂಬಾ ಖುಷಿಯಾಯಿತು. ಇಂತಹ ಮಹಾಪುರುಷರ ಬದುಕಿನ ದಿವ್ಯ ವ್ಯಕ್ತಿತ್ವದ ಬಗ್ಗೆ ಬರೆದ ಕೃತಿಗೆ ನನಗೆ ವಿಮರ್ಶೆ ಮಾಡ ಲು ಮುಜುಗರವಾಗಿ, ನನ್ನ ಅನ ಸಿಕೆಗಳನ್ನು ವ್ಯಕ್ತ ಪಡಿಸುತ್ತಿದ್ದೇನೆ
ಒಬ್ಬ ವ್ಯಕ್ತಿಯ ಜೀವನ ವೃತ್ತಾoತವನ್ನು, ಅದೂ ಮಹಾ ಪುರುಷರ ಬಗ್ಗೆ, ಕಾದಂಬರಿಯ ರೂಪದಲ್ಲಿ ಬರೆಯುವದೆಂದರೆ ಸಾಮಾನ್ಯವಾದ ವಿಷಯವಿಲ್ಲ. ಈ ಜಂಗಮ ಜ್ಯೋತಿ ಕೃತಿಯನ್ನು ಓದುತ್ತ ಹೋದಂತೆ ನಮ್ಮನ್ನು ನಾವೇ ಮರೆತು ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸುವಂತೆ ಭಾಸವಾಗುತ್ತದೆ.
ಕವಿತಾಂಬಾ ಅವರೇ ಬರೆದ ತಮ್ಮ ಸಮರ್ಪಣೆಯಲ್ಲಿ,ಕ್ರಾಂತಿ
ಹಾಗೂ ಕಾಂತಿಯ ಸಂಗಮ ಶ್ರೀಲಿಂಗಾನಂದ ಅಪ್ಪಾಜಿಯವರ
ಜೀವನ. ಅವರ ಬದುಕೊಂದು ದುರ್ಗಮ ಬೆಟ್ಟ. ಇಂತಹ ಗುರು
ಗಳು ಎಂದೆಂದೂ ಯಾರಿಗೂ ದೊರೆಯದ ‘ ಅನರ್ಘ್ಯ ರತ್ನ’
ಎಂದು ಅವರ ಬಗ್ಗೆ ಭಕ್ತಿ ಭಾವದಿಂದ ಬರೆದದ್ದನ್ನು ಲೇಖಕರಿಗೆ ಅವರ ಬಗ್ಗೆ ಇರುವ ಶೃದ್ಧೆಯ ಅರ್ಥವಾಗುತ್ತದೆ.
ಈ ಕೃತಿಯಲ್ಲಿ ಕವಿತಾಂಬೆ ಯವರು ಅಪ್ಪಾಜಿಯವರ
ಜೀವನ ವೃತ್ತಾಂತದ ಬಗ್ಗೆ ಬರೆಯುವಾಗ, ಸದ್ಗುರುಣಿ ಮಾತೆ
ಮಹಾದೇವಿಯವರಿಂದ, ಅವರನ್ನು ಬಲ್ಲವರಿಂದ, ಭಕ್ತರ ಬಾಯಿ ಯಿಂದ ಕೇಳಿ ತಿಳಿದುಕೊಂಡು,ಅಪ್ಪಾಜಿಯವರ ಹುಟ್ಟಿನಿಂದ ಹಿಡಿದು, ಲಿಂಗೈಕ್ಯದವರೆಗೆ ಅವರ ಜೀವನದ ಒಳ, ಹೊರ ಹೊಕ್ಕು ಎಲ್ಲವನ್ನೂ ಬರೆದದ್ದನ್ನು ಕಣ್ಣಿಗೆ ಕಟ್ಟುವ ಹಾಗೆ ಬರೆದದ್ದ ನ್ನು ನೋಡಿದರೆ ಲೇಖಕರ ಅಭ್ಯಾಸದ ಆಳ, ಅವರ ಜಾಣ್ಮೆ
ನಮಗೆ ಅರಿವಾಗದೇ ಇರದು.
ಅಪ್ಪಾಜಿಯವರ ಬಾಲ್ಯದ ಬಗ್ಗೆ ಬರೆಯುವಾಗ, ಅಪ್ಪಾಜಿ ಯವರು ತಾವು ಜನ್ಮಿಸುವ ಮೊದಲೇ ಅವರ ತಾಯಿಗೆ ಲಿಂಗ ಸ್ವರೂಪದಲ್ಲಿ ಕಂಡ ಮಹಾಪುರುಷರು ಎಂದು ಬರೆದಿದ್ದಾರೆ. ಅವರ ತಂದೆಯವರಿಗೆ ಮೂಢ ನಂಬಿಕೆ ಇತ್ತು. ಇವರಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ. ಓದುವಾಗ ಇವರು ‘ಸರ್ವರಿಗೂ
ಸಮಪಾಲು’ ಎಂದು ಹೇಳುವ ಕಮ್ಯುನಿಸ್ಟ್ ಗೆ ಮಾರು ಹೋಗಿ ದ್ದರು. ಕಾಲೇಜಿನಲ್ಲಿ ಅವರ ಗುರುಗಳು ಒಂದು ಸಲ ದೇವರ ಇರುವಿಕೆಯ ಬಗ್ಗೆ ಮಾತನಾಡು ಇವರೊಡನೆ ಮಾತನಾಡುವಾಗ, “ದೇವರನ್ನು ನಂಬುವದು, ಬಿಡುವದು ಅವರವರ ಇಷ್ಟ. ನಾನಂ ತೂ ಎಲ್ಲರಲ್ಲಿ ದೇವರನ್ನು ಕಾಣುತ್ತೇನೆ.” ಎಂದು ಹೇಳಿದ ಮಾತು ಇವರ ಮನಸ್ಸಿಗೆ ತುoಬಾ ನಾಟಿತು.
ಒಂದು ಸಲ ಗುರುಗಳ ಮನೆಗೆ ಇವರು ಹೋದಾಗ ಅಲ್ಲಿ ಬಸ ವಣ್ಣನವರ ಫೋಟೋ ನೋಡಿ ಅದರ ಬಗ್ಗೆ ಗುರುಗಳಿಗೆ ಕೇಳಿ ದಾಗ “ಇವರು ಲಿಂಗವಂತ ಧರ್ಮದ ರೂವಾರಿಗಳು. ಇಡೀ ವಿಶ್ವ, ಪಾತಾಳ, ಬ್ರಹ್ಮಾಂಡದ ತುಂಬೆಲ್ಲ ಆವರಿಸಿದ್ದ ಭವ್ಯ ನಿಲುವನ್ನು ಇಷ್ಟಲಿಂಗ ರೂಪದಲ್ಲಿ ನಮ್ಮ ಅಂಗೈಯಲ್ಲಿ ತಂದು ಕೊಟ್ಟ ಮಹಾಪುರುಷ ಬಸವಣ್ಣ ನವರು” ಎಂದು ಹೇಳಿ ಅವರ ವಚನಗಳನ್ನು ವಿಶ್ಲೇಷಣೆ ಸಹಿತವಾಗಿ ಹೇಳಿದರು. ಆಗ ಅಪ್ಪಾಜಿ ಯವರು ಈ ಬಸವ ತತ್ವಕ್ಕೆ ಮಾರು ಹೋಗಿ, ಕ್ರಾಂತಿ ಯಿಂದಲೇ ನ್ಯಾಯವೆಂದು ತಿಳಿದ ನನಗೆ ಶಾಂತಿ ಸಾಗರವನ್ನೇ ತೋರಿದಿರಿ.
ಶಾಂತಿ, ನ್ಯಾಯ, ಧರ್ಮದಿಂದಲೂ ಅನ್ಯಾಯ, ಆಕ್ರಮಣ ಸಹಿಸದೇ ಬದುಕಬಹುದು ಎಂಬುದೇ ಬಸವ ಧರ್ಮ ಎಂದು ಅರಿತರು. ಈ ಘಟನೆ ಅವರ ಜೀವನದಲ್ಲಿ ದೊಡ್ಡ ತಿರುವನ್ನೇ ತಂದಿತು. ಅಂದಿ ನಿಂದ ನಾಸ್ತಿಕರಾದ ಅವರು
” linga is the gate pass of the dining hall” ಎಂದು ಹೇಳುತ್ತಿದ್ದ ಅವರು ” linga is the gate pass to the king dom of god” ಎನ್ನುವಷ್ಟರ ಮಟ್ಟಿಗೆ ಪರಿವರ್ತಿತರಾದರು
ಎಂಬುದನ್ನು ಈ ಒಂದೇ ಒಂದು ಮಾತಿನಲ್ಲಿ ವರ್ಣಿಸಿದ್ದು ಲೇಖಕ ರ ಸಾಹಿತ್ಯದ ಹಿಡಿತಕ್ಕೆ ಹಿಡಿದ ಕನ್ನಡಿಯಾಗಿದೆ.
ದಿ. 16.11. 1956 ರoದು
ಧಾರವಾಡದ ದಿವ್ಯ ಬಸವಗಿರಿ
ಶೃoಗಕ್ಕೆ ಹೋಗಿ, ಆಲ್ಲಿ ಧ್ಯಾನಸ್ಥರಾಗಿ ನಂತರ ಕಾವಿವಸ್ತ್ರಗಳನ್ನು
ಧರಿಸಿ, ವಿಭೂತಿ, ರುದ್ರಾಕ್ಷಿ ಧರಿಸಿ, ಸಂಗಮೇಶನ ಸಂಗಕಳೆದು ಸಂಗನ ಬಸವನ ಕರುಣೆಯ ಕಂದರಾಗಿ, ” ಸ್ವಾಮಿ ಲಿಂಗಾನಂದ” ರಾದರು. ನಂತರ ಎಲ್ಲ ಕಡೆಗೆ ತಿರುಗಾಡುತ್ತ ಅಲ್ಲಿ ಯ ಜನರೊಂದಿಗೆ ಬೆರೆತು ಬಸವ ತತ್ವದ, ಸಮಾತಾವಾದದ
ಅಸ್ತ್ರವಿಡಿದು ಓರ್ವರೇ ಹರಿತ ಕ್ರಾಂತರಾಗಿ ತತ್ವಭರಿತವಾದ ಪ್ರವಚನಗಳಿಂದಜನರಲ್ಲಿಯ ಅಂಧಕಾರದ ಕತ್ತಲೆಯನ್ನು ಹೊಡದೋಡಿಸಿ, ಬೌದ್ಧಿಕ, ಹಸಿವನ್ನು ನೀಗಿಸಿ ಜ್ಞಾನದ ಹಸಿ ವನ್ನು ನೀಗಿಸಿ, ಜ್ಞಾನದ ಜ್ಯೋತಿ ಯನ್ನು ಬೆಳಗಿಸಲು ಮುನ್ನು ಗ್ಗುತ್ತ ಸಾಗಿದರು ಎಂದು ಬರೆದಿ ದ್ದನ್ನು ನೋಡಿದರೆ ಲೇಖಕರ ಲ್ಲಿಯ ಬೌದ್ಧಿಕತೆ, ಸಾಹಿತ್ಯಾಭಿ ರುಚಿ ನೋಡಿದರೆ, ಒಂದು ರೀತಿ ಯಲ್ಲಿ ಪ್ರವಚನವನ್ನೇ ಕೇಳಿದಂತಾಗುತ್ತದೆ. ದಿನದಿಂದ ದಿನಕ್ಕೆ ಬೆಳೆಯುತ್ತ ನಾದಿನಾದ್ಯಂತ ಅಕ್ಕನ ಪ್ರವಚನ ನೀಡುತ್ತಾ ಅದನ್ನೇ ಓಟ್ಟುಗೂಡಿಸಿ ಅಕ್ಕನ ಪ್ರವಚನ ಕೃತಿಯಾಗಿ ನೀಡಿದರು
ನಂತರ ‘ಇಷ್ಟಲಿಂಗ’ ಕುರಿತು ಪ್ರವಚನಗಳನ್ನು ನೀಡಿದರು. ಅವರ ಪ್ರವಚನದ ಬಗ್ಗೆ ಬರೆಯುವಾಗ ಲೇಖಕರು ಉದಾಹರಿಸಿದ ವಚನಗಳು, ಅವುಗಳ ವಿಶ್ಲೇಷಣೆಗಳೊಂದಿಗೆ ವಿವರಿಸಿದ್ದಾರೆ.
ಈ ಕೃತಿಯಲ್ಲಿ ‘ ಮಾತೆಯ ಆಗಮನ’ ಎಂಬ ಅಧ್ಯಾಯ ದಲ್ಲಿ ರತ್ನ (ಮಾತೆ ಮಹಾದೇವಿ)ಳು ಕೇಳಿದ ಕೆಲವು ಪ್ರಶ್ನೆಗಳಿಗೆ ಸ್ವಾಮೀಜಿಯವರು ನೀಡಿದ ಸಮಂಜಸವಾದ ಉತ್ತರಗ
ಳನ್ನು ಕವಿತಾ ಅವರು ಸವಿಸ್ತಾ ರವಾಗಿ ವಿವರಿಸಿದ್ದನ್ನು ನೋಡಿ ದಾಗ ಅವರಲ್ಲಿರುವ ಶರಣ ಸಾಹಿತ್ಯದ ಅರಿವು, ಹರವು
ಓದುಗನಿಗೆ ಅಚ್ಚರಿಗೊಳಿಸದೆ ಇರದು. ಅಪ್ಪಾಜಿಯವರ ಪ್ರವ ಚನಗಳಿಂದ ಪ್ರಭಾವಿತಳಾಗಿ, ರತ್ನಳು ಅವರಿಂದ ದೀಕ್ಷೆಯನ್ನು ಪಡೆಯುತ್ತಾಳೆ. ‘ ಅಪ್ಪಾಜಿಯವರು ಅವಳಲ್ಲಿ ಅಕ್ಕಮಹಾ ದೇವಿಯ ಸ್ವರೂಪವನ್ನು ಕಂಡು
ಅತ್ಯಂತ ಭಕ್ರಿಭಾವದಿಂದ “ನಾನು ಇಲ್ಲಿಯವರೆಗೆ ಆಧ್ಯಾತ್ಮ ತಾಯಿ ಇಲ್ಲದೇ ತಬ್ಬಲಿ ಯಾಗಿದ್ದೆ. ಇಂದಿನಿಂದ ನೀನು
ನನ್ನ ಆಧ್ಯಾತ್ಮ ತಾಯಿ”. ನಾನು ಲೋಕದ ಕಣ್ಣಲ್ಲಿ ಗುರುವಾ
ದರೂ, ಅoತರಂಗದಲ್ಲಿ ನಿಮ್ಮ ನೆಚ್ಚಿನ ಶಿಶು; ಕಾರುಣ್ಯದ ಹಾಲು ಕುಡಿಸಿ, ಮಹಾಂತನನ್ನಾಗಿ ಮಾಡಿ, ಉದ್ಧರಿಸಿ: ಅಮ್ಮಾ ನೀವು ಅಕ್ಕನೆಂದು ನನ್ನ ಮನ ಉಲಿಯುತ್ತಿದೆ ಎಂದು ಬರೆದಿ
ದ್ದನ್ನು ಓದುವಾಗ ನಾವು ಕೇವಲ ಪುಸ್ತಕವನ್ನು ಓದುತ್ತಿಲ್ಲ, ಈ ದೃಶ್ಯದ ಒಂದು ನಾಟಕವನ್ನು ನೋಡುತ್ತಿದ್ದೇವೆ ಎನ್ನುವಷ್ಟರ ಮಟ್ಟಿಗೆ ಅದು ಮನಸ್ಸಿನಲ್ಲಿ ಅಚ್ಚೊತ್ತುವಂತಿದೆ ಲೇಖಕರ ಬರವಣಿಗೆಯ ಶೈಲಿ. ಹೀಗೆ ರತ್ನಳು ಸ್ವಾಮೀಜಿಯವರ ಕಡೆ ಯಿಂದ ದೀಕ್ಷೆ ಪಡೆದು ಕೇವಲ ಗುರುವಿನ ಶಿಷ್ಯಳಾಗಿ ಹೋಗದೇ ಗುರುವಿನ ತಾಯಿಯಾಗಿ ತಾಯ್ತ ನದ ಅನುಭವವನ್ನು ಪಡೆದು ಕೊಂಡಳು ಎನ್ನುವಲ್ಲಿ ಅವರು ತಾಯ್ತನದ ವರ್ಣನೆ ಮಾಡಿ ದ್ದಾರೆ.
ರತ್ನ ಯೋಗಿರತ್ನವಾಗಿದ್ದು ಎಂಬ ಅಧ್ಯಾಯದಲ್ಲಿ ಕ್ರಿ. ಶ.5.4. 1966 ರಂದು ಅಪ್ಪಾಜಿ ಯವರು ರತ್ನಳಿಗೆ ಕೆಲವು ಪ್ರತಿ ಜ್ಞಾ ವಿಧಿಗಳೊಂದಿಗೆ ಜಂಗಮ ದೀಕ್ಷೆ ನೀಡಿದರು. ಅಂದಿನಿಂದ
ರತ್ನಳು ಮಾತೆ ಮಹಾದೇವಿ’ಎಂಬ ನಾಮಕರಣದೊಂದಿಗೆ ಮರುಜನ್ಮ ಪಡೆಯುತ್ತಾಳೆ. ನಂತರ ಮಾತೆಯವರು ತಮ್ಮ ಅತ್ಯoತ ಸರಳ ವ್ಯಕ್ತಿತ್ವ, ಬೌದ್ಧಿಕ ಸಾಹಿತ್ಯಿಕ ಬೋಧಕ ಪ್ರತಿಯೊಂ ದರಲ್ಲಿಯೂ ಕೂಡ ತಮ್ಮದೇ ಆದ ಪ್ರತಿಭೆಯಿಂದ ಶೋಭಿಸಿ, ಮನೆ ಮನೆಗೂ ಹೋಗಿ ಬಸವಜ್ಯೋತಿ ಬೆಳಗಿಸುತ್ತಾರೆ. ರತ್ನಳು ರತ್ನಯೋಗಿಯಾದ ಬಗ್ಗೆ ಅತ್ಯಂತ ಭಾವುಕತೆಯಿಂದ ಹೇಳಿದ್ದಾರೆ.
ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಅಧ್ಯಾಯದಲ್ಲಿ ಕ್ರಿ, ಶ. 21.4. 1970 ರಂದು ಅಕ್ಕನ ಜಯಂತಿಯ ಶುಭದಿನ ಇರುವದರಿಂದ ‘ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವಾದ ‘ ಜಗನ್ಮಾತಾ ಅಕ್ಕ ಮಹಾದೇವಿ ಅನುಭವ ಪೀಠ’ ಹೆಸರಿನಿಂದ ಸ್ಥಾಪಿಸಿದ್ದನ್ನು ಬರೆಯುತ್ತ ಅದಕ್ಕೆ ಸಮಾಜದಿಂದ ಬಂದ ಪರ, ವಿರೋಧಗಳ ಬೌದ್ಧಿಕ ಚರ್ಚೆಗಳ ಬಗ್ಗೆಯೂ ಕೂಲಂಕುಷವಾಗಿ ಬರೆದಿದ್ದಾರೆ.
ಮಾತೆ ಮಹಾದೇವಿಯವರು ಪೀಠಾಧಿಕಾರಿಯಾದ ಮೇಲೆ ಅನೇಕ ಕಡೆಗೆ ಪೂಜ್ಯದ್ವಯರು ಸೇರಿ ಪ್ರವಚನ ಮಾಡುತ್ತ ಬಸವ ಸೇವೆಯಲ್ಲಿ ನಿರುತರಾದರು. ವರ್ಷಗಳು ಕಳೆದಂತೆ
ಸಂಸ್ಥೆಯು ದಿನದಿಂದ ದಿನಕ್ಕೆ ಎತ್ತರವಾಗಿ ಬೆಳೆಯುತ್ತ ಅಂತರ್ ರಾಷ್ಟದಲ್ಲಿಯೂ ಕೂಡಬಸವ ಪತಾಕೆಯನ್ನು ಹಾರಿಸಿದ
ಕೀರ್ತಿಯು ಮಾತೆ ಮಹಾದೇವಿಯವರಿಗೆ ಸಲ್ಲುತ್ತದೆ. ಅಪ್ಪಾಜಿ ಯವರು ಹಗಲಿರಳು ಎನ್ನದೇ ಪ್ರವಚನಗಳ ಮೂಲಕ ಬಸವ ಬೆಳಗನ್ನು ಎಲ್ಲೆಡೆ ಬಿತ್ತುತ್ತ ಚಲನಾಶೀಲ ಜಂಗಮರೆನಿಸಿಕೊಂ ಡರು. ನಂತರ 8.10.1978 ರಂದು ‘ಬಸವ ಗಂಗೋತ್ರಿ’ ಯ ಉದ್ಘಾಟನೆಯನ್ನು ಮಾಡುತ್ತಾರೆ. ಓದು, ಬರಹ ಬರದ ಜನರಿಗೂ ಬಸವ ಧರ್ಮದ ಅರಿ ವಾಗಲೆಂದು”ಕ್ರಾಂತಿಯೋಗಿ” ಎಂಬ ಚಲನಚಿತ್ರಕ್ಕೆ ಮಾತಾಜಿ ಯವರೇ ಸಾಹಿತ್ಯ, ಸಂಭಾಷಣೆ ಬರೆದು ಕೊಟ್ಟು ಚಿತ್ರ ಮಾಧ್ಯಮದ ಮೂಲಕವೂ ಬಸವ ಪ್ರಚಾರ ಕೈಕೊಂಡಿದ್ದನ್ನೂ ಇಲ್ಲಿ ನೆನಪಿಸಿ ದ್ದಾರೆ.
ಅಪ್ಪಾಜಿಯವರ 50 ನೆಯ ವರ್ಷಕ್ಕೆ ಕಾಲಿಡುತ್ತಿರುವ ಹುಟ್ಟು ಹಬ್ಬದ ಸಂಭ್ರಮವನ್ನು ಭಕ್ತರೆ ಲ್ಲರೂ ಅತೀ ವಿಜ್ರಂಭಣೆಯಿಂದ “ರಾಷ್ಟ್ರೀಯ ಬಸವ ದಳ ಸಂಸ್ಥಾಪನಾ ದಿನ” ವನ್ನಾಗಿ
ಆಚರಿಸುತ್ತಾರೆ. ಅಪ್ಪಾಜಿಯವರು, ಮಾತೆ ಮಹಾದೇವಿ ಹಾಗೂ ಭಕ್ತ ಶರಣ ರೆಲ್ಲರೂ ಸೇರಿ ಶರಣಮೇಳ ವನ್ನು ಮಾಡುವದರ ಬಗ್ಗೆ ಚರ್ಚಿಸಿ, ಅದನ್ನು ಕೂಡಲ ಸಂಗಮದಲ್ಲಿ ಜನೆವರಿ 11 ರಿಂದ 15 ರ ವರೆಗೆ ಮಾಡುವ ದಾಗಿ ನಿರ್ಧಾರಿಸುತ್ತಾರೆ.ಕ್ರಿ.ಶ. 1987 ರಲ್ಲಿ ಕೂಡಲ ಸಂಗಮದಲ್ಲಿ ‘ಬಸವ ಧರ್ಮ ಪೀಠ ಟ್ರಸ್ಟ್’ ಎಂಬ ವಿಶ್ವ ಸಂಸ್ಥೆ ಯನ್ನು 30.7. 1987 ರ ಶ್ರಾವಣ ಶುದ್ಧ ಪಂಚಮಿ ಯಂದು ಸ್ಥಾಪಿಪಿಸಿದರು.ಪೂಜ್ಯ ಲಿಂಗಾನಂದಸ್ವಾಮೀಜಿಯವರು ಪೀಠವನ್ನು ಆರೋಹಣ ಮಾಡಿದರು.
ಭಕ್ತರೆಲ್ಲರೂ ಅಪ್ಪಾಜಿ ಯವರ ನೇತೃತ್ವದಲ್ಲಿ ಪ್ರಥಮ ಶರಣ ಮೇಳವನ್ನು 13, 14,15 ಜನೆವರಿ 1988 ರಲ್ಲಿ ಅತ್ಯಂತ ಅದ್ಧುರಿಯಾಗಿ ನಡೆಸಿದರು. ವಿಶ್ವ ವಿದ್ಯಾಲಯಗಳಲ್ಲಿ ವಚನ ಸಾಹಿತ್ಯವು ಪುಸ್ತಕ ರೂಪದಲ್ಲಿ ಎಷ್ಟೇ ಇದ್ದರೂ, ಅಪ್ಪಾಜಿಯ
ವರು ಅಬಾಲ ವೃದ್ಧರಿಂದ ಹಿಡಿ ದು ಅನಕ್ಷರಸ್ಥರ ವರೆಗೆ ಎಲ್ಲ ರಿಗೂ ಅರ್ಥವಾಗುವಂತೆ ಬಸವ ಧರ್ಮದ ತತ್ವಗಳನ್ನು ಪ್ರವಚನ ರೂಪದಲ್ಲಿ ಹೇಳಿ “ಪ್ರವಚನಪಿತಾಮಹ” ರೆನ್ನಿಸಿಕೊಂಡರು.
ಲಿಂಗವಂತ ಸಮಾಜಕ್ಕೆ ಸೂತ್ರಗಳು ಇಲ್ಲದ ಕೊರತಯನ್ನು ಗುರ್ತಿಸಿ, ಮೊದಲ ಶರಣ ಮೇಳದಲ್ಲಿ ಸೂತ್ರಗಳ ಬಗ್ಗೆ ತಿಳಿಸಿದರು.
ಹಿರಿಯುರಿನಲ್ಲಿ 30.6. 1995 ರoದು ತಮ್ಮ ದಿನ ನಿತ್ಯದ ಕಾರ್ಯಕ್ರಮವಾದ ಪ್ರವಚನದಲ್ಲಿ ದೇವರ ಬಗ್ಗೆ ಹೇಳುತ್ತಿರುವಾಗ ಹಾಗೆಯೇ ಬಿಕ್ಕಳಿಸುತ್ತ ತಮ್ಮ ಮುಂದಿಟ್ಟ ನೀರನ್ನು ಕುಡಿದು ಸ್ವಲ್ಪು ಕೆಮ್ಮಿ ದರು. ಅಲ್ಲಿಯೇ ಪಕ್ಕದಲ್ಲಿದ್ದ ಬಸವ ತಂದೆಯ ಭಾವಚಿತ್ರ ವನ್ನು ನೋಡುತ್ತಾ,ನೆನೆಯುತ್ತ ಮತ್ತೊಮ್ಮೆ ಕೆಮ್ಮುತ್ತಿರುವಾಗಲೇ ಈ ಬಸವ ಚೇತನವು ವಿಶ್ವ ಚೇತನದಲ್ಲಿ ಲೀನವಾಗಿ ಹೋಗಿತ್ತು. ಭಕ್ತರು ಅವರ ಕೈ ಮುಟ್ಟಿ ನೋಡಿದಾಗಲೇ, ಇವರು ಇಹಲೋಕ ತ್ಯಜಿಸಿ, ಪರಾತ್ಪರದಲ್ಲಿ ಬೆರೆತಿರುವ ವಿಷಯ ಗೊತ್ತಾಗಿದ್ದು. ಭಕ್ತರ ರೋಧನ ಮುಗಿಲು ಮುಟ್ಟಿತ್ತು.
ಬಸವ ತಂದೆಯ ತಪೋಭೂಮಿ ಯಾದ ಕೂಡಲ ಸಂಗಮದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ಮಾಡುತ್ತಾರೆ. ಕಾಯಕವೇ ಕೈಲಾಸವೆಂದು ನಂಬಿದ ಅಪ್ಪಾಜಿಯವರು ತಮ್ಮ ಕೊನೆಯ ಉಸಿರು ಇರುವ ವರೆಗೂ ಪ್ರವಚನ ಮಾಡುತ್ತಾ ಅಲ್ಲಿಯೇ ಬಸವ ತಂದೆಯ ಪಾದಕ್ಕೆ ಸೇರಿ ಕೊಂಡರು.
ಜನರಿಗೆ ಜ್ಞಾನ ದಾಸೋಹ, ಬಸವ ತತ್ವ ಪ್ರಚಾರವನ್ನು ಪ್ರಯಾಣದ ಅನುಕೂಲತೆ ಇಲ್ಲವಾದ ಆ ಸಮಯದಲ್ಲಿ ಮನೆ ಮನೆಗೂ ಹೋಗಿ ಬಸವ ಜ್ಯೋತಿ ಬೆಳಗಿಸಿದ ಮಹಾನ
ಜ್ಯೋತಿಯಾದರು.
ಈ ಕೃತಿಯ ಕೊನೆಯ ಅಧ್ಯಾಯವಾದ ‘ಚೈತನ್ಯ ವಿಶ್ವ ಚೈತನ್ಯದಲ್ಲಿ ಲೀನ’ ವನ್ನು ಓದು ವಾಗ ನಮಗರಿಯದಂತೆಯೇ
ಕಣ್ಣೀರು ಹರಿದು ಅಪ್ಪಾಜಿಯ ವರಿಗೆ ನಮ್ಮ ಭಕ್ತಿಯನ್ನು ತೋರಿಸಿರಲು ಸಾಕು. ಒಂದೊಂದು ಶಬ್ದ ಓದುವಾಗಲೂ, ಭಾವನೆಗಳಿಗೆ ತಕ್ಕಂತೆ ಪದಗಳ ಜೋಡಣೆ, ಪದಗಳ ಜೋಡಣೆಯ ಜೊತೆಗೆ ಮಿಶ್ರಿತವಾದ ಭಕ್ತಿಭಾವ, ಭಾವ
ಕ್ಕೆ ತಕ್ಕಂತೆ ಅರ್ಥೈಸಿದ ರೀತಿ
ಎಲ್ಲವೂ ಅವರ ಅದ್ಭುತ ಸಾಹಿ ತ್ಯಕ್ಕೆ ಸಾಕ್ಷಿಯಾಗಿವೆ.
ಈ ಕೃತಿಗೆ ಆಶೀರ್ವಚನ ಬರೆದು ಮಾತೃ ಮಮತೆಯ ನೀಡಿದ ಮಹಾ ಜಗದ್ಗುರು ಮಾತೆ ಮಹಾದೇವಿಯವರಿಗೂ ಹಾಗೂ ಮುಂಚೂಣಿಯಲ್ಲಿ ನಿಂತು ಮುನ್ನಡಿಯನ್ನು ಬರೆದು ಕೊಟ್ಟು ಮುನ್ನಡೆಯಲು ಪ್ರೋತ್ಸಾಹಿಸಿದ ಚೇತನ
ಪ್ರೊ. ಶಿವರಾಜ ಪಾಟೀಲ ಗುರುಗಳಿಗೆ ನನ್ನ ಶರಣು ಶರಣಾರ್ಥಿಗಳು.
ಈ ಕೃತಿಗೆ ನನ್ನ ಅನಸಿಕೆಗಳನ್ನು ಬರೆದು ನಾನೂ ಕೂಡ ನನ್ನ ಮೆಚ್ಚಿನ ಅಪ್ಪಾಜಿಯವರಿಗೆ
ನನ್ನ ಅಶ್ರುತರ್ಪಣವನ್ನು ಅಕ್ಷರ
ಮಾಲೆಯನ್ನು ಸಮರ್ಪಿಸಿದೆ ನೆಂಬ ನೆಮ್ಮದಿ ಸಿಕ್ಕಿದೆ.
ಕವಿತಾಂಬಾ ಅವರು ಒಳ್ಳೆಯ ಸಾಹಿತಿಗಳಾಗಿದ್ದು ಇನ್ನೂ ಅನೇಕ ಕಥೆ ಕಾದಂಬರಿ ಕವನ ಗಳನ್ನು ಬರೆದು ಸರಸ್ವತಿ ಗೆ ಅರ್ಪಿಸಿದ್ದಾರೆ. ಅವರಿoದ ಇನ್ನೂ ಅನೇಕ ಕೃತಿಗಳು ಸಾಹಿತ್ಯದೇವಿಯ ಮುಡಿ ಸೇರಲಿ. ದೇವರು ಅವರಿಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ನನ್ನ ಇಷ್ಟ ದೈವ ಬಸವಣ್ಣನಲ್ಲಿ ಪ್ರಾರ್ಥಿಸಿ ಆಶೀರ್ವದಿಸುತ್ತೇನೆ.
ಡಾ. ಸರೋಜಿನಿ. ಭದ್ರಾಪೂರ.
ಪುಣೆ.
ಮೊ. ನಂ. 9480325033.
Imail: sarojinibhadrapur@
Gmail. Com.