ಹುಡುಕಾಟ
ಶಾಂತಿಯನು ಅರಸಿ
ಹೊರಟದಾರಿಗೆ ಸಿಕ್ಕವದೆಷ್ಟೋ
ತಾಣಗಳು….
ದೇವಮಂದಿರದ
ಧ್ಯಾನದೋಳಗೊಮ್ಮೆ
ಮುಳುಗದ…
ಚರ್ಚಿನ
ಗಂಟೆಯೊಳಗೊಮ್ಮ
ಲೀನವಾಗದ……
ಮಸಿದಿಯ
ಪ್ರಾರ್ಥನೆಯಲ್ಲಿ
ತಲ್ಲೀನವಾಗದ ……
ಮನವು
ಬಯಸುವ ಶಾಂತಿ
ಕೊಂಡು ಕೊಳ್ಳಲಾಗದು
ಬೆಲೆಗೆ ಸಿಗದು….!!
ಮನಸೊಳಗೆಲ್ಲೊ
ಕಳೆದುಹೊಗಿರು
ಅರಿವು ನಮಗಿಲ್ಲ…
ಮನಸೊಳಗೆ
ಅತಿಯಾಗಿತುಂಬಿರವ
ಅರಿಷಡ್ವರ್ಗಗಳನು ಒಂದಿಷ್ಟು
ಆಚೆನೂಕಬೇಕಿದೆ….
ಹಸನಾದ ವಿಚಾರಗಳನೊಂದಿಷ್ಟು
ಹುಲುಸಾಗಿ ಬೆಳೆಯಲು
ಜಾಗ ಬೇಕಿದೆ….
ಪ್ರೀತಿ ಪ್ರೇಮ
ಬೆಳೆಯಬೇಕಿದೆ
ಕರುಣೆಯ ಹೂ ಅರಳಬೇಕಿದೆ….
ಮನದ ಮಿಡಿತಕು
ಹೃದಯ ಬಡಿತಕು
ಬೆಸುಗೆ ಕೂಡಬೇಕಿದೆ….
ಧ್ಯಾನದೊಳಗೊಮ್ಮೆ ಬುಧ್ದ ನಾದದೊಳಗೊಮ್ಮೆ ಏಸು
ಗಾನದೊಳಗೊಮ್ಮೆ ಅಲ್ಲಾನನು
ಕಾಣಬೇಕಿದೆ….!
ನಿಲ್ಲಲಿಲ್ಲ ನಡಿಗೆ
ನಡಿಯುತ್ತಲೇ ಇದ್ದೆನೆ
ಅರಿವು ಮೂಡಿಸುವ ಕೆಲಸಕ್ಕೆ
ನಾನು ರಾಯಭಾರಿ ಯಾಗಿದ್ದೇನೆ….!
✍ ಡಾ. ನಿರ್ಮಲಾ ಬಟ್ಟಲ