ಗಜಲ್
ಸುತ್ತಲೂ ಮೋಸದ ಜಾಲವಡಗಿದೆ ಧೃತಿಗೆಡಬೇಡ ನೀನು
ಧರೆಯಲ್ಲೂ ತೆರೆಗಳ ಅಬ್ಬರವೆದ್ದಿದೆ ಅಂಜಬೇಡ ನೀನು
ನಂಬಿಗಸ್ಥರಂತೆ ನಟಿಸಿ ಪ್ರಪಾತಕ್ಕೆ ತಳ್ಳುವರಲ್ಲಾ ಸಭ್ಯರನ್ನು
ಸವಿ ಮಾತಿನಲ್ಲಿ ಮೋಸವಡಗಿದೆ ಮರೆಯಬೇಡ ನೀನು
ನಗುವಿನ ಹಿಂದೆಯೇ ಸಹಿಸದ ನೋವು ಕಾಡುತ್ತಿದೆಯಲ್ಲಾ
ಸೆಳೆವ ನೋಟದಲ್ಲಿಯೇ ಸಂಚಡಗಿದೆ ಕಂಗೆಡಬೇಡ ನೀನು
ನಡೆ ನುಡಿಯಲ್ಲಿ ಹೊಂದಾಣಿಕೆ ಏಕೋ ಕಾಣುತ್ತಿಲ್ಲವಲ್ಲ
ನಂಬಿಕೆಯ ಬೇರಿನಲ್ಲಿ ಸಡಿಲುಂಟಾಗಿದೆ ಜಾರಬೇಡ ನೀನು
ಈಶ್ವರ ! ರವಿ ಕಿರಣಕ್ಕೂ ಕಪ್ಪು ಕಾಡಿಗೆ ಅಂಟಿದೆಯೆ
ಬಣ್ಣದ ಕನ್ನಡಕದಲ್ಲಿ ವರ್ಮವಡಗಿದೆ ಕಣ್ಮುಚ್ಚಬೇಡ ನೀನು
– ಈಶ್ವರ ಮಮದಾಪೂರ,ಗೋಕಾಕ.