ವನ ದೇವತೆ
ಕಪ್ಪು ಮೋಡ ದಂತೆ ಕೇಶ
ವಪ್ಪು ವಂತ ರೂಪ ರಾಸಿ
ತಪ್ಪ ದಂತ ಗಿಡುಗ ನೋಟ ವಪ್ಪು ತಿರುವುದು
ತಪ್ಪು ಮಾಡ ದಂತೆ ಮನುಜ
ತೆಪ್ಪ ಗಿದ್ದು ಬದುಕ ನೆಡೆಸು
ಮುಪ್ಪುಬರುವ ಮುನ್ನಮರಣ ವಪ್ಪ ಬೇಡವೊ//
ಗಿಡುಗ ಕುಳಿತ ಟೊಂಗೆ ಸಣ್ಣ
ನಡುಗು ವಂತ ನೋಟ ಕಣ್ಣ
ತಡವಿ ನೋಡು ಸೀಳಿ ಬಿಡು ವೆ ಚಿರತೆರೂಪದಿ
ನಾಡಿ ನಿಂದ ಬಂದ ಮನುಜ
ಕಾಡು ನಾಶ ಮಾಡ ಬೇಡ
ಯಡವಿ ದೇವಿ ತಡವಿದಾಗ ಬದುಕು ನರಕವು//
ಕಾಡ ದೇವಿ ಸಲಹು ತಿರಲು
ನಾಡ ಜನರ ತಾಯಿ ಯಂತೆ
ಬೇಡುಬಿಟ್ಟುವನವನಾಶಮಾಡಬೇಡವೊ
ನಾಡಿ ಮಿಡಿತ ವಿರಲು ಬೇಕು
ಕಾಡು ಹಸಿರ ಗಿಡವು ನಮಗೆ
ಕೂಡಿ ನೆಡೆಸು ಬದುಕು ಮನುಜ ಕಾಡನುಳಿಸುತ//
ಡಾ-ಸುಧಾ.ಚ.ಹುಲಗೂರ