ರಾಜಕೀಯದಲ್ಲಿ ಸತತ 8 ಬಾರಿ ಗೆಲುವು ಸಾಧಿಸಿ ಧಾಖಲೆ ನಿರ್ಮಿಸಿದ ಬಸವರಾಜ ಹೊರಟ್ಟಿ

ರಾಜಕೀಯದಲ್ಲಿ ಸತತ 8 ಬಾರಿ ಗೆಲುವು ಸಾಧಿಸಿ ಧಾಖಲೆ ನಿರ್ಮಿಸಿದ ಬಸವರಾಜ ಹೊರಟ್ಟಿ

e-ಸುದ್ದಿ ಬೆಳಗಾವಿ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು,ಬಹು ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಪ್ರಥಮ ಪ್ರಾಶಸ್ತ್ಯದ ಭಾರಿ ಅಂತರದ ಮತಗಳೊಂದಿಗೆ ಭರ್ಜರಿ ಜಯಭೇರಿ ಭಾರಿಸುವದರೊಂದಿಗೆ ದೇಶದಲ್ಲೇ ಪ್ರಥಮ ಮಾದರಿಯ ಸತತ 8ನ ಬಾರಿ ಐತಿಹಾಸಿಕ ಗೆಲುವನ್ನು ತಮ್ಮದಾಗಿಸಿಕೊಂಡು ಹೊಸ ಇತಿಹಾಸವನ್ನೇ ಬರೆದಿದ್ದಾರೆ.

ಇಲ್ಲಿನ ಜ್ಯೋತಿ ಪಿಯು ಕಾಲೇಜ್‍ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪೋಲಿಸ್ ಬಿಗಿ ಭದ್ರತೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮೊದಲ ಸುತ್ತಿನ ಮತ ಎಣಿಕೆಯಲ್ಲೇ 11000 ಮತಗಳ ಪೈಕಿ 6451 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಸಮೀಪದ ಅಭ್ಯರ್ಥಿ ಕಾಂಗ್ರೆಸ್‍ನ ಬಸವರಾಜ ಗುರಿಕಾರಗೆ 3307 ಹಾಗೂ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿಗೆ 205 ಮತಗಳು ಪ್ರಾಪ್ತವಾಗಿದ್ದವು, ಅಂತಿಮ ಸುತ್ತಿನಲ್ಲಿ ಹೊರಟ್ಟಿ ಅವರಿಗೆ 900ಕ್ಕೂ ಅಧಿಕ ಮತಗಳು ಲಭಿಸಿ ಒಟ್ಟು ಚಲಾವಣೆಯಾದ ಮತಗಳ ಪೈಕಿ 9266 ಮತಗಳನ್ನು ಪಡೆಯುವ ಮೂಲಕ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ.

ಸಮೀಪದ ಪ್ರತಿ ಸ್ಫರ್ಧಿ ಕಾಂಗ್ರೆಸ್‍ನ ಬಸವರಾಜ ಗುರಿಕಾರ ಅವರಿಗೆ 4596 ಮತಗಳು ಲಭಿಸುವದರೊಂದಿಗೆ ವಿಜೇತ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು 4869 ಮತಗಳ ಅಂತರದಿಂದ ಜಯದ ನಗೆ ಬೀರಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಅವರ ಪರ ಕೇವಲ 271 ಮತಗಳು ಚಲಾವಣೆಯಾಗುವದರೊಂದಿಗೆ ಅವರು ಪರಾಭವಗೊಂಡು ಠೇವಣಿ ಕಳೆದುಕೊಂಡಿದ್ದಾರೆ.

ಪ್ರಥಮ ಪ್ರಾಶಸ್ತ್ಯದ 7181 ಮತಗಳು ಹೊರಟ್ಟಿ ಅವರಿಗೆ ಸಲೀಸಾಗಿ ಲಭಿಸಿವೆ.
ಪ್ರಜ್ಞಾವಂತ ಶಿಕ್ಷಕ ಮತದಾರರೇ ಇಲ್ಲಿ ಮತಚಲಾಯಿಸಿದರೂ ಸಹ 1223 ಮತಗಳು ತಿರಸ್ಕಾರಗೊಂಡಿದ್ದು, ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿ ಪರ ಚಲಾವಣೆಗೊಂಡಿದ್ದವು ಎನ್ನಲಾಗಿದೆ. ಹೊರಟ್ಟಿಯವರ ಲೀಡ್ ಅಲ್ಪ ಕುಸಿತಕ್ಕೆ ಇದು ಕೂಡಾ ಕಾರಣವಾಗಿದೆ.

ಧಾರವಾಡ ,ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಇಷ್ಟುದಿನ ಜೆಡಿಎಸ್‍ನಿಂದ ಸ್ಪರ್ಧಿಸುತ್ತಿದ್ದ ಬಸವರಾಜ ಹೊರಟ್ಟಿ ಅವರು ಇದೇ ಪ್ರಥಮ ಬಾರಿಗೆ ಇತ್ತೀಚೆಗಷ್ಟೇ ಜೆ.ಡಿ.ಎಸ್ ತೊರೆದು ಬಿ.ಜೆ.ಪಿ ಸೇರ್ಪಡೆಗೊಂಡು ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದರು.ಕಾಂಗ್ರೆಸ್ ಪಕ್ಷ ಸಹ ಶಿಕ್ಷಕರ ಸಂಘಟನೆ , ಅವರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಸವರಾಜ ಗುರಿಕಾರ ಅವರನ್ನು ಕಣಕ್ಕಿಳಿಸಿತ್ತು, ಹೊರಟ್ಟಿ ಅವರ ಶಿಷ್ಯರ ಬಳಗದಲ್ಲಿದ್ದ ಶ್ರೀಶೈಲ ಗಡದಿನ್ನಿ ಅವರನ್ನು ಜೆಡಿಎಸ್ ತಮ್ಮ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲುವಿನ ಹುರುಪಿನಲ್ಲಿತ್ತು, ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಲ್ಲ ನಿರೀಕ್ಷೆಗಳೂ ಹುಸಿಯಾಗಿ ಬಸವರಾಜ ಹೊರಟ್ಟಿ ಅವರು ಈ ಕ್ಷೇತ್ರದಲ್ಲಿ ಸೋಲಿಲ್ಲದ ಸರ್ದಾರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿ ತೋರಿಸಿದಂತಾಗಿದೆ.

 

ನನ್ನ ನಿರೀಕ್ಷೆಯಂತೆಯೇ ಫಲಿತಾಂಶ ಬಂದಿರುವದು ತೃಪ್ತಿ ತಂದಿದೆ, ಇದು ನನ್ನ ಗೆಲುವಲ್ಲ ಇಡೀ ಕ್ಷೇತ್ರದ ಶಿಕ್ಷಕ ಸಮುದಾಯದ ಗೆಲುವು, ಸತ್ಯದ ಪರ ಗೆಲುವು, ಈ ಬಾರಿ ಹಿಂದೆಂದಿಗಿಂತ ನನ್ನ ವಿರುದ್ದ ಸಾಕಷ್ಟು ಅಪ ಪ್ರಚಾರ ನಡೆಸಲಾಯಿತು, ಆದರೆ ಶಿಕ್ಷಕ ಮತದಾರರು ಯಾವುದಕ್ಕೂ ಕಿವಿ ಗೊಡದೆ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ.ಶಿಕ್ಷಕರ ಪರ ಹೋರಾಟ ನಿರಂತರವಾಗಿ ಮುಂದುವರೆಸುವೆ, ಬಿಜೆಪಿಯವರು ಸಾಮೂಹಿಕವಾಗಿ ನನ್ನ ಗೆಲುವಿಗೆ ಕಂಕಣಬದ್ದರಾಗಿ ಶ್ರಮಿಸಿದ್ದಾರೆ.ಇದಕ್ಕೆ ಅವರಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ಇದು ಚುನಾವಣೆ ಫಲಿತಾಂಶ ಪ್ರಕಟಗೊಂಡ ತಕ್ಷಣ ಇಂದುಸಂಜೆ ಪತ್ರಿಕೆಯೊಂದಿಗೆ ಮಾತನಾಡಿ ಹೊರಟ್ಟಿ ಅವರು ಪ್ರತಿಕ್ರಿಯಿಸಿದ ಪರಿ ಇದು.
-ಬಸವರಾಜ ಹೊರಟ್ಟಿ ,ವಿಜೇತ ಬಿಜೆಪಿ ಅಭ್ಯರ್ಥಿ

—————-

ಬಸವರಾಜ ಹೊರಟ್ಟಿ ಅವರ ಗೆಲುವು ನಮ್ಮ ಪಕ್ಷಕ್ಕೆ ಮತ್ತಷ್ಟು ಟಾನಿಕ್ ನೀಡಿದಂತಾಗಿದೆ, ಪ್ರತಿಪಕ್ಷಗಳವರ ಇಲ್ಲಸಲ್ಲದ ಎಷ್ಟೋ ಅನಗತ್ಯ ಆರೋಪ ಮಾಡಿದರೂ ಸಹ ಪ್ರಜ್ಞಾವಂತ ಶಿಕ್ಷಕ ಮತದಾರರು ಅಂತಹ ಆರೋಪಗಳಿಗೆ ಕ್ಯಾರೇ ಎನ್ನದೆ ಹೊರಟ್ಟಿ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಿರುವದು ಹೊರಟ್ಟಿ ಅವರ ಕರ್ತೃತ್ವ ಶಕ್ತಿಯನ್ನು ಮತ್ತೆ ಸಾಬೀತು ಪಡಿಸಿದೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು

—++————-

*ಬಿಜೆಪಿ ಬೇರು ಆಳವಾಗಿ ಬೇರೂರಿದೆ. ಶಿಕ್ಷಕ ಮತದಾರರು ವಿವಿಧ ಆಮಿಷಗಳಿಗೆ ಬಲಿಯಾಗದೆ ತಮ್ಮ ಸಮಸ್ಯೆಗಳಿಗೆ ಸದಾ ಧ್ವನಿಯಾಗುವ* *ಬಸವರಾಜ ಹೊರಟ್ಟಿ ಅವರಂತಹ ಹೋರಾಟಗಾರರನ್ನು ಮರು ಆಯ್ಕೆ ಮಾಡಿರುವದು ಅವರ ಹಿತಾಸಕ್ತಿಗೆ ಅತ್ಯಂತ ಅನುಕೂಲವಾಗಿದೆ.
-ಜಗದೀಶ ಶೆಟ್ಟರ್  ಮಾಜಿ ಮುಖ್ಯಂಮತ್ರಿಗಳು, ಹಾಲಿ ಶಾಸಕರು, ಹು-ಧಾ ಸೆಂಟ್ರಲ್ ಕ್ಷೇತ್ರ

ಪಶ್ಚಿಮ ಶಿಕ್ಷಕರ ಕ್ಷೇತ್ರ
ಅಭ್ಯರ್ಥಿಗಳು ಪಡೆದ ಮತ ವಿವರ ಈ ರಿತಿಯಾಗಿದೆ.
ಬಸವರಾಜ ಹೊರಟ್ಟಿ -9266
ಬಸವರಾಜ ಗುರಿಕಾರ-4597
ಶ್ರೀಶೈಲ ಗಡದಿನ್ನಿ-273
ಎಂ.ಪಿ ಕರಬಸಪ್ಪ -60
ಕೃಷ್ಣವಾಣಿ-58
ಪ್ರೊ. ಎಫ್.ವಿ ಕಲ್ಲನಗೌಡರ-27
ಗೋವಿಂದಗೌಡರ ರಂಗನಗೌಡ-79 ಆಗಿದೆ‌.

Don`t copy text!