ಕಟ್ಟ ಬನ್ನಿ ಭಾರತ

ಕಟ್ಟ ಬನ್ನಿ ಭಾರತ

ಭೂಮಿಯೊಂದೆ ಭಾನು ಒಂದೆ ಹರಿಯುತ್ತಿರುವ

ರಕ್ತ ಒಂದೇ ಮನದಲ್ಲೇಕೆ
ದುಗುಡವೂ ದ್ವೇಷ ಅಸೂಯೆ ಸುಟ್ಟು ಹಾಕಿ
ಮೂಢ ನಂಬಿಕೆ ಏಕೆ ಬೇಕು
ಬಡತನವ ದೂಕಬೇಕು
ಬಾಳ ಪಯಣಸಾಗಬೇಕು
ಕನಸು ಹೊತ್ತ ಮಕ್ಕಳೇ
ಕಟ್ಟ ಬನ್ನಿ ಭಾರತ
ಪ್ರೀತಿ ಕರುಣೆ ಬೀಜ ಬಿತ್ತಿ
ಮಮತೆಯಿಂದ ಕಸವಕಿತ್ತಿ
ಬೆಳೆಯಬೇಕು ಸಮಾನತೆ
ಭಾವದಲ್ಲಿದೇ ಐಕ್ಯತೆ
ಶರಣ ಸಂತರು ಹಾಡಿ ಹೊಗಳಿದ ರಾಜ ಋಷಿಗಳ
ವೀರ ಕುಡಿಗಳ ಭವ್ಯ ಭಾರತ ನಮ್ಮದು
ದೇಶದ್ರೋಹ ನಾಶ ಗೊಳಿಸಿ
ಗಲ್ಲಿ ಗಲ್ಲಿ ಯ ಪ್ರೀತಿ ಬೆರಸಿ
ನ್ಯಾಯ ನೀತಿಯ ದಾರಿ
ತೋರಿಸಿ ಕಟ್ಟಿ ಸತ್ಯದ ಭಾರತ
ವರ್ಗ ವರ್ಣ ಭೇದ ಬೇಡ
ಕೋಪ ತಾಪಗಳಿಲ್ಲಿ ಬೇಡ
ಹಮ್ಮು ಬಿಮ್ಮು ಕಿತ್ತೊಗೆದು
ಕಟ್ಟ ಬನ್ನಿ ಉತ್ಕೃಷ್ಟ ಭಾರತ


-ಡಾ. ಶರಣಮ್ಮ ಗೊರೆಬಾಳ

Don`t copy text!