ಆರೋಗ್ಯ ವೃದ್ಧಿಗೆ ಯೋಗ ದಿವ್ಯ ಔಷಧ- ಶ್ರೀವರರುದ್ರಮುನಿ ಶಿವಾಚಾರ್ಯರು

 

ಆರೋಗ್ಯ ವೃದ್ಧಿಗೆ ಯೋಗ ದಿವ್ಯ ಔಷಧ- ಶ್ರೀವರರುದ್ರಮುನಿ ಶಿವಾಚಾರ್ಯರು

e-ಸುದ್ದಿ ಮಸ್ಕಿ

ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಉಚಿತವಾದ ದಿವ್ಯ ಔಷಧವಾಗಿದೆ ಎಂದು ಗಚ್ಚಿನಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶಾರದ ಪ್ರೌಢಶಾಲೆಯಲ್ಲಿ ಶುಕ್ರವಾರ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಅಗ್ನಿಹೋತ್ರ ಹೋಮ ಕುಂಡಕ್ಕೆ ಅಗ್ನಿ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೇ ನೀಡಿದರು.
ಆಧುನಿಕ ಕಾಲದಲ್ಲಿ ಮನುಷ್ಯನ ಜೀವನ ಶೈಲಿ ಬದಲಾಗಿದೆ. ಒತ್ತಡದ ಬದಕು ನಡೆಸುತ್ತಿರುವದರಿಂದ ದೇಹ ಬಹುಬೇಗನೆ ಬಳಲಿ ಅನೇಕ ರೋಗಗಳಿಗೆ ಆಸ್ಪದ ಕೊಡುವಂತಾಗಿದೆ. ಹಾಗಾಗಿ ಪ್ರತಿಯೊಬ್ಬರು ಯೋಗವನ್ನು ನಿಯಮಿತವಾಗಿ ಮಾಡುವದರಿಂದ ಅನೇಕ ರೋಗಗಳಿಂದ ಮುಕ್ತರಾಗಬಹುದು ಎಂದರು.
ಕಾರ್ಯಕ್ರಮವನ್ನು ಪತಂಜಲಿ ಯೋಗ ಸಮಿತಿ, ಪತಂಜಲಿ ಮಹಿಳಾ ಸಮಿತಿ, ಲಯನ್ಸ್ ಕ್ಲಬ್, ಸ್ವಾಮಿವಿವೇಕಾನಂದ ಮತ್ತು ರಾಮಕೃಷ್ಣ ಆಶ್ರಮ, ಆರ್‌ಎಸ್ ಎಸ್ ಸಂಘಟನೆ, ಕಿರಾಣಿ ವರ್ತಕರ ಸಂಘ, ಎಂಪಾಯರ್ ರಿಕ್ರಿಯೇಷನ್ ಮಲ್ಟಿ ಜಿಮ್ ಸೆಂಟರ್.  ಸಹಯೋಗದಲ್ಲಿ ಆಯೋಜಿಸಿದ್ದರು.
ಐದು ದಿನಗಳ ಕಾಲ ಉಚಿತವಾಗಿ ಯೋಗವನ್ನು ಆನಂದ ಪತ್ತಾರ ಗುರುಗಳು ನೀಡುವುದಾಗಿ ತಿಳಿಸಿದರು. ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಸುಕಮುನಿಯಪ್ಪ ನಾಯಕ, ಮಹಿಳಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ಧಲಿಂಗಯ್ಯ ಸೊಪ್ಪಿವ್ಮಠ, ರಾಮಕೃಷ್ಣ ಆಶ್ರಮದ ಸಿದ್ದು ಗೂರುಜಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಿವರಾಜ ಯಂಬಲದ, ಶಿವಪ್ರಸದಾ ಕ್ಯಾತ್ನಟ್ಟಿ ಇದ್ದರು.

Don`t copy text!