ಮಧ್ಯಮುಕ್ತ ಗ್ರಾಮಕ್ಕೆ ಒತ್ತಾಯ
ಪ್ರೀತಿ, ವಿಶ್ವಾಸದಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ – ನಿಖಿಲ್ ಬಿ.
e-ಸುದ್ದಿ ಮಸ್ಕಿ
ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ ಎಂದು ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.
ತಾಲ್ಲೂಕಿನ ಬುದ್ದಿನ್ನಿ (ಎಸ್) ಗ್ರಾಮದಲ್ಲಿ ಶುಕ್ರವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಜಗಳ ಎಲ್ಲಿ ಇರುತ್ತೋ ಅಲ್ಲಿ ಪ್ರೀತಿ ಇರುತ್ತದೆ. ಆದರೆ ಜಗಳ ವಿಕೋಪಕ್ಕೆ ಹೋಗಿ ಸಮಾಜದ ಅಶಾಂತಿಗೆ ಕಾರಣವಾಗಬಾರದು. ಪ್ರತಿಯೊಬ್ಬರು ಪರಸ್ಪರ ಸ್ನೇಹ, ಪ್ರೀತಿಯಿಂದ ಬಾಳುವೆ ಮಾಡುವ ಮೂಲಕ ಗ್ರಾಮದ ಶಾಂತಿಗೆ ಕಾರಣರಾಗಬೇಕು ಎಂದರು.
ಜಿಲ್ಲೆಯಲ್ಲಿ ೧೩ ತುರ್ತು ವಾಹನಗಳು ಕೆಲಸ ಮಾಡುತ್ತಿವೆ. ೧೧೨’ ನಂ ಗೆ ಕರೆ ಮಾಡಿದರೆ ವಾಹನ ೨೦ ರಿಂದ ೨೫ ನಿಮಿಷಗಳಲ್ಲಿ ನೀವಿರುವ ಸ್ಥಳಕ್ಕೆ ಬರುತ್ತದೆ. ಗಲಾಟೆ, ಅಪಘಾತ, ಬೆಂಕಿ ಬಿದ್ದಿದ್ದರೆ,ಅಕ್ರಮ ಚಟುವಟಿಕೆಗಳು ನಡೆದಾಗ ನಾಗರಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ. ಫಕೀರಪ್ಪ ಸೇರಿದಂತೆ ಇತರರು ಬುದ್ದಿನ್ನಿ ಗ್ರಾಮವನ್ನು ಮಧ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದರು.
ಗ್ರಾಮದ ಹಿರಿಯ ಮುಖಂಡ ಶ್ರೀನಿವಾಚಾರ್ ಜ್ಯೋಷಿ ಕಾರ್ಯಕ್ರಮ ಉದ್ಘಾಟಿಸಿದರು.
ನಾಗರೆಡ್ಡಿ ದೇವರಮನಿ ಪ್ರಸ್ಥಾವಿಕವಾಗಿ ಮಾತನಾಡಿದರು. ಸಿಪಿಐ ಸಂಜೀವ್ ಬಳಿಗಾರ, ಅಂಕುಶದೊಡ್ಡಿ ಪಂಚಾಯಿತಿ ಅಧ್ಯಕ್ಷೆ ಚನ್ನಬಸ್ಸಮ್ಮ, ಶರಣಯ್ಯ ಸ್ವಾಮಿ, ಮುಖ್ಯ ಶಿಕ್ಷಕ ದುರಗಣ್ಣ, ಸಬ್‌ಇನ್‌ಸ್ಪೆಕ್ಟರ್ ಸಿದ್ದರಾಮ ಬಿದರಾಣಿ ಇತರರು ಇದ್ದರು.
ಇದಕ್ಕೂ ಮೊದಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಾದವ ತೀರ್ಥರ ಮೂಲ ವೃಂದಾವನಕ್ಕೆ ತೆರಳಿ ದರ್ಶನ ಪಡೆದರು. ಗ್ರಾಮದ ವಿವಿಧ ಶಾಲೆಗಳಿಗೆ ಬೇಟಿ ಮಾಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.