ರೋಹಿತ ಚಕ್ರತೀರ್ಥರನ್ನು ಬಂಧಿಸಲು ಒತ್ತಾಯ

 

ರೋಹಿತ ಚಕ್ರತೀರ್ಥರನ್ನು ಬಂಧಿಸಲು ಒತ್ತಾಯ

e- ಸುದ್ದಿ ಮಸ್ಕಿ

ರಾಜ್ಯ ಸರ್ಕಾರದ ಪಠ್ಯಪರಿಷ್ಕರಣಾ ಸಮಿತಿ ಮುಖ್ಯಸ್ಥ ರೋಹಿತ್ ಚಕ್ರವರ್ತಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕರವೇ ತಾಲ್ಲೂಕು ಘಟಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ರೋಹಿತ್ ಚಕ್ರವರ್ತಿ ಕನ್ನಡ ವಿರೋಧಿಯಾಗಿದ್ದಾರೆ. ಡಾ. ಅಂಬೇಡ್ಕರ್, ಬಸವಣ್ಣ, ಕುವೆಂಪು ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ತಿರುಚುವ ಮೂಲಕ ದ್ರೋಹ ಎಸಗುವ ಮೂಲಕ ನಾಡಿನ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರನ್ನು ಸಮಿತಿಯಿಂದ ವಜಾ ಮಾಡಿದರೆ ಸಾಲದು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮುರಾರಿ ಒತ್ತಾಯಿಸಿದರು.
ಈಗಾಗಲೇ ಪಠ್ಯಪುಸ್ತಕರದಲ್ಲಿ ಸೇರ್ಪಡೆಯಾಗಿರುವ ಹೊಸ ವಿಷಯಯಗಳನ್ನು ಕೈಬಿಟ್ಟು ಹಿಂದಿನ ಪಠ್ಯಗಳನ್ನೇ ಮುಂದುವರೆಸಲು ಸರ್ಕಾರಕ್ಕೆ ಆಗ್ರಹಿಸಿದರು.
ತಹಶೀಲ್ದಾರ್ ಕವಿತಾ ಆರ್.ಮನವಿ ಸ್ವೀಕರಿಸಿದರು. ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ, ರಾಜು ಛಲುವಾದಿ, ರಾಘು ಬಿಲ್ಲಿ, ಪ್ರದೀಪ್, ಮರಿಸ್ವಾಮಿ ಹಂಚಿನಾಳ, ರಿಯಾಜ್ ಅಹ್ಮದ್, ಶಿವಕುಮಾರ, ಬಾಬಾ, ಮೆಹಬೂಬ, ನಿಜಾಜ್ ಅಹ್ಮದ್ ಸೇರಿದಂತೆ ಕಾರ್ಯಕರ್ತರು ಇದ್ದರು.

Don`t copy text!