ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ
ಹಳ್ಳೂರ ಎಸ್ ಆರ್ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ
e-ಸುದ್ದಿ ಹಳ್ಳೂರ (ಬೆಳಗಾವಿ)
2021_22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಹಳ್ಳಿಯ ಮಕ್ಕಳು ಸಿಟಿ ಮಕ್ಕಳನ್ನು ಮೀರಿ ಸಾಧನೆ ಮಾಡಿದ್ಧು ತುಂಬಾ ಸಂತೋಷ ಎಂದು -ಪ್ರಾಚಾರ್ಯರಾ ದ ಶ್ರೀಮತಿ ಎಸ್ ಎಮ್ ಕಮಲಾಪೂರ ಅವರು ಹೇಳಿದರು.
ವಾಣಿಜ್ಯ ವಿಭಾಗದಲ್ಲಿ ಕುಮಾರಿ ಪೂರ್ಣಿಮಾ ಅಂಗಡಿ 600ಕ್ಕೆ 586 ಅಂಕ ಪಡೆದು ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ ಪ್ರಥಮ ಸ್ಥಾನ ಬಂದರೆ ಕಲಾ ವಿಭಾಗದಲ್ಲಿ ಕುಮಾರಿ ಸವಿತಾ ಬ ಕೌಜಲಗಿ 600 ಕ್ಕೆ 579 ಅಂಕ ಪಡೆದು ಶೈಕ್ಷಣಿಕ ಜಿಲ್ಲೆಗೆ ತೃತೀಯ ಸ್ಥಾನ ಬಂದು ಇಬ್ಬರು ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿಯನ್ನು ಜಿಲ್ಲೆಯಾದ್ಯಂತ ಬೆಳಗಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಹಾಗೂ ಎಲ್ಲಾ ಉಪನ್ಯಾಸಕರನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರು ಆದ ಶ್ರೀ ಬಾಲಚಂದ್ರಣ್ಣ ಜಾರಕಿಹೊಳಿ ಅವರು ಉಪಾಧ್ಯಕ್ಷರಾದ ಶ್ರೀ ಉಮೇಶ್ ಸಂತಿ ಹಾಗೂ ಊರಿನ ಶಿಕ್ಷಣ ಪ್ರೇಮಿಗಳು ಗಣ್ಯಮಾನ್ಯರೂ ಕೂಡಾ ಮಕ್ಕಳ ಸಾಧನೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.