ಆಕಾಶವೇ ನನ್ನಪ್ಪ…
ಅಪ್ಪ ಎಂದರೆ ಆಕಾಶದಂತೆ
ಎಂದರು ಎಲ್ಲರೂ..
ಆಕಾಶವೇ ಅಪ್ಪ..ನನಗೆ
ಆಗಸದ ನೀಲಿ ಬಣ್ಣ
ಬೆಳ್ಮೋಡಗಳ ಮೆತ್ತೆ
ಬೆಳಗುವ ಕೆಂಪು ಸೂರ್ಯ
ಹಾಲ್ಬೆಳದಿಂಗಳು ಸುರಿವ ಚಂದ್ರ
ಮಿನುಗುವ ತಾರೆಗಳು
ಅಸಂಖ್ಯಾತ ಕ್ಷೀರಪಥಗಳು
ನಿಗೂಢ ಆಕಾಶ ಕಾಯಗಳು…
ಎಲ್ಲವೂ ಆಕಾಶದ ಒಡಲಲ್ಲಿ..
ಇದೆಲ್ಲವೂ ನನ್ನಪ್ಪನೇ…!
ನಾ ಹುಟ್ಟಿದ ಬಳಿಕ
ಆಕಾಶದಲ್ಲಿ ಲೀನವಾದವ
ನಾನೆಂದೂ ನೋಡದ ನನ್ನಪ್ಪ
ಆಕಾಶವೇ ನನ್ನಪ್ಪ…
–ಹಮೀದಾ ಬೇಗಂ ದೇಸಾಯಿ ಸಂಕೇಶ್ವರ