ವಿಶ್ವಕರ್ಮರ ಕೌಶಲ್ಯ ಮತ್ತು ಆರ್ಥಿಲ ಅಭಿವೃದ್ಧಿಯ ಚಿಂತನೆಗಳು
e-ಸುದ್ದಿ ಮಸ್ಕಿ
ಉತ್ತರ ಕರ್ನಾಟಕ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ ಕಮಲಾಪುರ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ ಮತ್ತು ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಡಾ.ವೀರೇಶ ಬಡಿಗೇರ ಇವರ ಪರಿಕಲ್ಪನೆಯಲ್ಲಿ ಹೇಳತೆನ ಕೇಳ 103 ನೇ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಲಿದೆ.
ವಿಶ್ವಕರ್ಮರ ಕೌಶಲ್ಯ ಮತ್ತು ಆರ್ಥಿಕ ಅಭಿವೃದ್ಧಿಯ ಚಿಂತನೆಗಳ ಕುರಿತು ದಿನಾಂಕ 19-06-2022 ಭಾನುವಾರ ಸಂಜೆ 5 ಗಂಟೆಗೆ ವಿಶೇಷ ಉಪನ್ಯಾಸ ನಡೆಯಲಿದೆ. ಸಂಪನ್ಮೂಲ ವ್ಯಕ್ತಿ ಗಳಾಗಿ ವಿಜಯಕುಮಾರ ಕಮ್ಮಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಮಾಳಿಗಾಚಾರ ವಹಿಸಲಿದ್ದಾರೆ. ಪ್ರಸ್ತಾವಿಕವಾಗಿ ಡಾ.ಲಕ್ಷ್ಮೀಕಾಂತ ಪಾಂಚಾಳ ಮಾತಾಡಲಿದ್ದಾರೆ.
ಆಸಕ್ತರು ಪೋಸ್ಟರ್ ಲಿಂಕ್ ಬಳಸಿ ಕಾರ್ಯಕ್ರಮ ವಿಕ್ಷೀಸಬಹುದು.