ಗಜಲ್

ಗಜಲ್

ಅಪ್ಪನ ನೆರಳು ಮರಕ್ಕಿಂತಲೂ ದೊಡ್ಡದಾಗಿತ್ತು ಮರೆಯಲಾರೆ
ಅವ್ವನ ಪ್ರೀತಿಯೇ ಅವನಿಗೆ ಅಸರೆಯಾಗಿತ್ತು ಮರೆಯಲಾರೆ

ಕಷ್ಟಗಳು ಬಂದಾಗ ಕಲ್ಲಿನಂತಿದ್ದು ಗಟ್ಟಿಯಾಗಿ ಎದುರಿಸಲೇಬೇಕು
ಕಷ್ಟದಲ್ಲಿದ್ದವರಿಗೆ ಅವನ ಮನಸ್ಸು ಬೇಗನೆ ಕರಗುತ್ತಿತ್ತು .ಮರೆಯಲಾರೆ

ಬಿರು ಬಿಸಿಲಿಗೂ ಲೆಕ್ಕಿಸದೆ ಮಾರುದ್ದ ಹೊತ್ತುಕೊಂಡು ನಡೆದಿದ್ದನು
ಬೆವರು ನದಿಯಾಗಿ ಹರಿದರೂ ದುಡಿತವೇ ಅಸ್ತಿಯಾಗಿತ್ತು ಮರೆಯಲಾರೆ

ಅನಕ್ಷರನಿದ್ದರೂ ಅಕ್ಷರ ಕಲಿಸಬೇಕೆಂದು ತುಂಬಾ ಒದ್ದಾಡಿದ್ದನು
ಮಗ ಮಾಸ್ತರನಾದಾಗ ಅವನ ಕಣ್ಣಲ್ಲಿ ಕಣ್ಣೀರು ಜಿನುಗಿತ್ತು ಮರೆಯಲಾರೆ

ಈಶ್ವರ ! ಋಣವಿದ್ದಷ್ಟು ಇಲ್ಲಿದ್ದು ಎದ್ದು ಹೋಗಲೇಬೇಕು ಒಂದು ದಿನ
ಅಪ್ಪನ ಅಂತಿಮ ದಿನದಂದು ನನ್ನ ಮನಸ್ಸೂ ಕುಸಿದಿತ್ತು ಮರೆಯಲಾರೆ


ಈಶ್ವರ ಮಮದಾಪೂರ , ಗೋಕಾಕ.
೧೯/೦೬/೨೦೨೨

Don`t copy text!