ಹೆಣ್ಣು ಮಕ್ಕಳ ಗೋಳು
ಹೆಣ್ಣು ಮಕ್ಕಳ ಗೋಳು
ದುಡಿಯುವ ಗಾಣದ ಬಾಳು
ಸುಖವಿರದ ಹೋಳು
ಸುಖ ದುಃಖ ಮನ ಮಾತು ಕೇಳು
ಕನಸು ಬಯಕೆ ಭರವಸೆ ಏಳು
ಸೋಲಿನ ಪ್ರಪಾತ ಬೀಳು
ಸಮಸ್ಯೆಗಳ ನಿರಂತರ ಕಡಿತ ಚೇಳು
ಸಾಹಿತ್ಯ ಸಂಗೀತ ನನ್ನ ಗೀಳು
ಕುಚ್ಚ ಬೇಕು ಅಡುಗೆ ಕಾಳು
ಮನೆ ತುಂಬ ಕೆಲಸ ಗೋಳು
ಹೆಣ್ಣಿನ ಜೀವನ ಬರಿ ಗೋಳು
-ರೂಪಾ ಪಟ್ಟಣಶೆಟ್ಟಿ ರಾಮದುರ್ಗ