ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವಾ!

ಮನೆಯಲ್ಲಿ ಯಾರಾದರೂ ಇದ್ದರೆ ಆ ಮನೆಯು ಸ್ವಚ್ಛ ಶುದ್ಧವಾಗಿರುತ್ತದೆ.ಮನೆಗೆ ಯಾರೇ ಬಂದೂ ನೋಡಿದರೆ ಓ ಈ ಮನೆಯಲ್ಲಿ ಒಡೆಯ ನಿರುವನು ಎನ್ನುವುದು ಮನೆಯನ್ನು ನೋಡಿದ ಕೂಡಲೇ ಗೊತ್ತಾಗುತ್ತದೆ.
ಹಾಗೆಯೇ ಬಸವಣ್ಣನವರು ಮನೆಯನ್ನು ಮನಸ್ಸು (ಶರೀರಕ್ಕೆ) ಹೋಲಿಸಿರುವರು.
ಒಬ್ಬ ವ್ಯಕ್ತಿಯನ್ನುನೋಡಿದ ಕೂಡಲೇ ಆ ವ್ಯಕ್ತಿಯ ಮನೆ ಎಂಬ ಮನಸ್ಸು/ಶರೀರ ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತೇವೆ

ನಾವು ವಾಸಿಸುವ ಭೂಮಿ ನಮ್ಮ ಸರಿಸರ ಹಾಗೂ ನಮ್ಮ ಮನೆ ನಮ್ಮ ಮನೆಯ ಸುತ್ತ ಮುತ್ತ ಲೂ ಸ್ವಚ್ಛ ಸುಂದರ ಹಾಗೂ ಹಚ್ಚ ಹಸಿರು ಹೂ ಕುಸುಮ ಇವುಗಳನ್ನುಬೆಳೆಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತೇವೆ

ದಿನ ಧಿನವೂ ನಮ್ಮ ಮನೆಯನ್ನು ಕಸ ಗೂಡಿಸಿ ಶುದ್ಧ ,ಸ್ವಚ್ಛ, ನಿರ್ಮಲ ವಾಗಿಟ್ಟುಕೊಳ್ಳುತ್ತೇವೆ.ಆ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಧೂಳು ಕೊಳೆ ಬಾಗಿಲು ಮತ್ತು ಅಂಗಳದಲ್ಲಿ ಕಸ ಕಡ್ಡಿ ಹುಲ್ಲು ಎಲ್ಲವೂ ಬೆಳೆದಿರುತ್ತದೆ .

ಇದು ನಮ್ಮದೇ ಮನೆ ಎಂದು ತಿಳಿದುಕೊಂಡುಅತ್ಯಂತ ಉತ್ಸಾಹದಿಂದ ಕಾರ್ಯತತ್ಪರಾಗುತ್ತೇವೆ.
ಕಸವಿದ್ದರೆ ಗೂಡಿಸಿ ಹೊರಗೆ ಹಾಕುತ್ತೇವೆ .ಹೇಗೆ ಮನೆ ಯನ್ನು ದಿನ ದಿನವೂ ಕಸಗೂಡಿಸಿ ಹೊರಗೆ ಹಾಕುತ್ತೇವೆಯೋ ಹಾಗೆಯೇ

ನಮ್ಮತನು ಅಂದರೆ ಶರೀರ ಮನದಲ್ಲಿ ತುಂಬಿರುವ ಬಾಹ್ಯ ಭಕ್ತಿಯನ್ನು ಹೊರಹಾಕಬೇಕು.ಧೃಢವಾದ ಸತ್ಯ ಶುದ್ಧವಾದ ಆಡಂಬರವಿಲ್ಲದ ನಿರ್ಮಲವಾದ ಮನಸ್ಸಿನಿಂದ ಭಗವಂತನನ್ನುವಲಿಸಿಕೊಳ್ಳಬೇಕು
ನಾನು ದಿನದಿನವೂ ಒಳ್ಳೆಯವನಾಗುತ್ತಿದ್ದೇನೆ ಎಂಬ ನಂಬಿಗೆ ನಮ್ಮಲ್ಲಿರಬೇಕು. ಈ ನಂಬಿಗೆಯೇ ನಮಗೆ ಸಾಧನಾ ಪಥದಲ್ಲಿ ನಿರಂತರ ಮುನ್ನಡೆಯುವುದಕ್ಕೆ ಪ್ರೇರಣೆ ನೀಡುತ್ತದೆ. ನಮ್ಮ ತನು, ಮನ, ಬುದ್ಧಿ ಶುದ್ಧವಾದರೆ ಕಾರ್ಯ ಸಿದ್ಧಿಯಾದಂತೆಯೇ. ಅದಕ್ಕಾಗಿ ನಾವು ನಮ್ಮ ಅಂತರಂಗವನ್ನು, ಮನಸ್ಸನ್ನು ಆಗಾಗ ಅವಲೋಕಿಸಬೇಕು,ಪ್ರಶ್ನಿಸಿಕೊಳ್ಳಬೇಕು.ಈ ದೇಹ ಎಂಬ ಬಂಡಿಯನ್ನು ಆಗಾಗ ತೊಳೆದುಕೊಳ್ಬಬೇಕು.ಸ್ವಚ್ಛಗೊಳಿಸಿಕೊಳ್ಳಬೇಕು ಪರಿಶೋಧಿಸಬೇಕು. ಅಲ್ಲಿ ರುವ ಕೊಳೆ ಕಲ್ಮಶಗಳನ್ನು ಹೊರಗೆ ಹಾಕುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಪ್ರಾರ್ಥಿಸಬೇಕು. ಅಂತರಂಗ ಬಹಿರಂಗ ಶುದ್ಧಿಗಾಗಿ ಶರಣರು ಅದೆಷ್ಟು ಮಹತ್ವ ಕೊಟ್ಟಿದ್ದಾರೆನ್ನುವುದಕ್ಕೆ ಶರಣರ ವಚನಗಳೇ ನಮಗೆ ಪ್ರೇರಣೆ.
ಸಂಸ್ಕೃತಿ ಸಂಸ್ಕಾರ ವ್ಯಕ್ತಿಯ ಸಾಧನೆಗೆ ರನ್ನ ಗನ್ನಡಿಯಿದ್ದಂತೆ .
ನೀರಿಗೆ ಸಂಸ್ಕಾರ ವದಗಿಸಿದರೆ ತೀರ್ಧವಾಗುತ್ತದೆ.ಆಹಾರಕ್ಕೆ ಸಂಸ್ಕಾರ ವದಗಿಸಿದರೆ ಪ್ರಸಾದವಾಗುತ್ತದೆ. ಶಬ್ದಕ್ಕೆ ಸಂಸ್ಕಾರ ವದಗಿಸಿದರೆ ಮಂತ್ರವಾಗುತ್ತದೆ ಸೆಗಣಿಗೆ ಸಂಸ್ಕಾರ ವದಗಿಸಿದರೆ ವಿಭೂತಿಯಾಗುತ್ತದೆ ಹಾಗೇಯೇ ಭವ ಬಂಧನದಲ್ಲಿರುವ ವ್ಯಕ್ತಿಗೆ ಸಂಸ್ಕಾರ ವದಗಿಸಿದರೆ ಮಹಾತ್ಮನಾಗುತ್ತಾನೆ.

ಒಟ್ಟಿನಲ್ಲಿ ಬಸವಣ್ಣವರ ಈ ಒಂದು ವಚನವು ವ್ಯಕ್ತಿಯ ಬಾಹ್ಯ ಹಾಗೂ ಆಂತರಿಕ ಸತ್ಯ ಶುದ್ಧ ನಿರ್ಮಲವಾದ ಭಕ್ತಿಯ ಭಾವವನ್ನು ತಿಳಿಸುತ್ತದೆ.

ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ

Don`t copy text!