ಲಿಂಗಸೂಗೂರು ಶ್ರೀ ಈಶ್ವರ ದೇವಸ್ಥಾನದ ರಜತ ಮಹೋತ್ಸವ,   ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಲಿಂಗಸೂಗೂರು ಶ್ರೀ ಈಶ್ವರ ದೇವಸ್ಥಾನದ ರಜತ ಮಹೋತ್ಸವ,   ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

 

e-ಸುದ್ದಿ ಲಿಂಗಸುಗೂರು

ದಿ.೨೫-೦೬-೨೦೨೨ ಶನಿವಾರ ಸಂಜೆ ೭-೩೦ಕ್ಕೆ ಲಿಂಗಸೂಗೂರಿನ ಶ್ರೀ ಈಶ್ವರ ದೇವಸ್ಥಾನದ ಸಮಿತಿ ವತಿಯಿಂದ ೨೫ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ ೨೦೧೯-೨೦, ೨೦೨೦-೨೧ ಹಾಗೂ ೨೦೨೧-೨೨ ರಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ದಿವ್ಯ ಸಾನಿಧ್ಯ ವಹಿಸಿದ ಕಾಶಿ ಪೀಠದ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಮ್ಮ ಅಮೃತ ಹಸ್ತದಿಂದ ಶಾಲು ಹೊದಿಸಿ, ಪ್ರಶಸ್ತಿ ಪತ್ರ ಮತ್ತು ಶಿಷ್ಯ ಕಾಣಿಕೆಯನ್ನು ನೀಡಿ ಪುರಸ್ಕರಿಸಿ ಸನ್ಮಾನಿಸಿದರು.

ಯಾವುದೇ ಧರ್ಮ ಜಾತಿ ಮತ ಭೇದವಿಲ್ಲದೆ ಎಲ್ಲ ವರ್ಗದ ಪ್ರತಿಭಾವಂತ ಮಕ್ಕಳನ್ನು ಕರೆಸಿ ಸನ್ಮಾನಿಸಿದ್ದು ಶ್ರೀ ಈಶ್ವರ ದೇವಸ್ಥಾನ ಸಮಿತಿಯವರ ಸಾಮಾಜಿಕ ಕಳಕಳಿ, ಮಕ್ಕಳ ಬಗ್ಗೆ ಪ್ರೇರಣೆ ತುಂಬಿದ ಕಾಳಜಿ ಮತ್ತು ಇಡೀ ಮಾನವ ಕುಲ ಒಂದು ಎಂಬ ಸಂದೇಶ ಎದ್ದು ಕಾಣುತ್ತಿತ್ತು.

ಕಾಶಿ ಪೀಠದ  ಶ್ರೀಗಳ ಆಶೀರ್ವಾದ ಮಕ್ಕಳಿಗೆ ಲಭಿಸಿದ್ದು ಸುದೈವದ ಸಂಗತಿಯಾಗಿತ್ತು. ಇದಕ್ಕೆ ಅವಕಾಶ ಮಾಡಿಕೊಟ್ಟ ಲಿಂಗಸೂಗೂರು ಶ್ರೀ ಈಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲ ಸದ್ಭಕ್ತರಿಗೆ ಇದರ ಶ್ರೇಯ ಸಲ್ಲಬೇಕು.

ಕಾಶಿ ಪೀಠದ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ ೨೦೧೮-೧೯ ರಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಪುರಸ್ಕರಿಸಿದರಲ್ಲದೆ , ‘ಮಾನವ ಧರ್ಮ ಒಂದು’ಆಶೀರ್ವದಿಸಿದರು.

ಕಾಶಿ ಪೀಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಿರೇಭೂಪೂರು ಮಠದ ಶ್ರೀ ಗುರುಗಜದಂಡ ಶ್ರೀಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀರಶೈವ ಸಮಾಜದ ಮುಖಂಡರಾದ ಡಾ.ಎನ್.ಎಲ್.ನಡುವಿನಮನಿ, ಮಲ್ಲಣ್ಣ ವಾರದ, ಬಿ.ಎ.ನಂದಿಕೊ

Don`t copy text!