ಸಂಗೀತ ಮಾಂತ್ರಿಕ ಭೀಮರಾಯ ಭಜಂತ್ರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು
e-ಸುದ್ದಿ ಲಿಂಗಸುಗೂರು
ಲಿಂಗಸುಗೂರು ತಾಲ್ಲೂಕಿನ ಗೌಡೂರು ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸಂಗೀತ ಮಾಂತ್ರಿಕ ಭೀಮರಾಯ ಭಜಂತ್ರಿಯವರಿಗೆ ಗ್ರಾಮಸ್ಥರಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಗುರುರಾಜ ನಾಯಕ ಅವರ ನೆತೃತ್ವದಲ್ಲಿ ನಡೆಸಲಾಯಿತು.
ಕಳೆದ ಕೆಲವು ದಿನಗಳ ಹಿಂದಷ್ಟೇ ಭೀಮರಾಯ ಭಜಂತ್ರಿಯವರ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಭೀಮರಾಯ ಭಜಂತ್ರಿ ಯವರು ಸಂಗೀತ ಕಲೆಯನ್ನೇ ಉಸಿರಾಗಿಸಿಕೊಂಡಿದ್ದರು. ಅವರು ಅಪಾರ ಕಲಾ ಅಭಿಮಾನಿಗಳು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೋರಾಟಗಾರ ಆರ್. ಮಾನಸಯ್ಯ ಅವರು ಕಲಾವಿದ ಭಿಮರಾಯ ಭಜಂತ್ರಿಯವರ ಕಲಾ ಸೇವೆಯನ್ನು ಮೆಚ್ಚಿ ಗ್ರಾಮದ ಅಪಾರ ಅಭಿಮಾನಿಗಳು ಈ ಒಂದು ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅವರ ಕಲಾ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದಿನ ದಿನಮಾನದಲ್ಲಿ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸೇವೆಯನ್ನು ಮೆಚ್ಚಿ ಅವರ ಜಿವಂತ ಇರುವಾಗಲೇ ಪ್ರಶಸ್ತಿ ಪುರಸ್ಕಾರಗಳನ್ನು ನಿಡಬೇಕಾಗಿತ್ತು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಗುರುರಾಜ ನಾಯಕ ಅವರು ಸಂಗೀತ ಲೋಕದ ಸಾಧಕ, ಶಹನಾಯಿ, ಕ್ಲಾರಿಯೋನೆಟ್, ಹಾರ್ಮೊನಿಯಂ, ಕ್ಯಾಸಿನೊ ನುಡಿಸುವ ಪರಿಣಿತ, ಹಾಡುಗಾರ ಸಂಗೀತ ಕ್ಷೇತ್ರ ದೈತ್ಯ ಪ್ರತಿಭೆ, ಸಾವಿರಾರು ಕಿರ್ತನೆ, ಪ್ರವಚನ, ನಾಟಕ, ಲೆಕ್ಕವಿಲ್ಲದಷ್ಟು ಸಭೆ ಸಮಾರಂಭಗಳಿಗೆ ಜೋಗುಳದ ನಾಂದಿಯ ಮೂಲಕ ಸಮಾರಂಭಕ್ಕೆ ಶುಭ ಕೋರುತ್ತಿದ್ದರು. ಸಂಗೀತವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ಪಾಂಡಿತ್ಯವನ್ನು ಪಡೆದಿದ್ದರು. ನೂರಾರು ಗ್ರಾಮಗಳಲ್ಲಿ ತಮ್ಮ ಮೇರು ಸಂಗೀತದ ಮೂಲಕ ಜನ ಮಾನಸದಲ್ಲಿ ಅಚ್ಚು ಒತ್ತಿದ್ದರು. ಇಂತಹ ಅದ್ಭುತ ಕಲಾವಿದರನ್ನು ಕಳೆದುಕೊಂಡು ಗೌಡೂರು ಗ್ರಾಮ ಸಂಗೀತ ಕ್ಷೇತ್ರದಲ್ಲಿ ತುಂಬಲಾರದ ನಷ್ಟಕ್ಕೆ ಇಡಾಗಿದೆ. ಕಲೆ ಜೊತೆಗೆ ಸೌಮ್ಯ ಗುಣದ ಮೂಲಕ ಜನರ ಒಡನಾಡಿಯಾಗಿದ್ದ ಭೀಮರಾಯ ಅವರನ್ನು ಜನ ಪೇಟಿ ಮಾಸ್ತರ್ ಎಂದೇ ಕರೆಯುವತ್ತಿದ್ದರು ಎಂದು ಭಾವುಕರಾದರು.
ವಿವಿಧ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ಕಲಾವಿದರ ತಂಡಗಳಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ರಾಜಾ ಶೇತುರಾಮ್ ನಾಯಕ,ರಾಜಾ ಲಕ್ಷಣ ನಾಯಕ, ರಾಚಯ್ಯ ಸ್ವಾಮಿ ಗಣಾಚಾರಿ,ವಿರಭದ್ರಯ್ಯ ಸ್ವಾಮಿ,ಯೋಧ ಲಕ್ಷಣ ಹುದ್ದಾರ್,ಗಂಗಾಧರ.ಎಂ R.C.F ಸೇರಿದಂತೆ ಕೇಲ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು, ಮಕ್ಕಳು ಹಾಜರಿದ್ದರು.