ಮನಸೆಳೆವ ಕುಸುಮ
ನಿನ್ನಂದದ ಮುಂದೆ ಹೂವೊಂದು ಸಮವೆ
ಹೂವಿನ ಮಕರಂದದಂತೆ ಸಿಹಿಜೇನು ನೀನು
ಘಮಘಮಿಪ ಪರಿಮಳದ ಕುಸುಮ ನೀನು
ಮೊದಲ ಮಳೆಯ ಸಿಂಚನದ ತಂಪನೀವ ಕಂಪು ನೀನು ||
ಇಂಚಿಂಚು ಸಂಚುಮಾಡುವ
ಮಿಂಚಿನ ಸಂಚಾರ ನೀನು
ಕುಂಚದಿ ತಿದ್ದಿ ತಿಡಿದ ಕೊಂಚವು ಕೊಂಕಿರದ
ಚೆಂದದ ಚಿತ್ತಾರ ನೀನು ||
ಲತೆಬಳ್ಳಿಯಂತಹ ಲಾಲಿತ್ಯ ನಿನದು
ಮಧುಮಾಸದಂತಹ ಮಾಧುರ್ಯ ನಿನದು
ಒಲವು ಸೂಸುವಾ ವೈಯ್ಯಾರ ನಿನದು
ಚೆಲುವ ಮೈಮಾಟದಾ ಸಿಂಗಾರ ನಿನದು||
ಅಂದದಾ ಅರಗಿಣಿ ಚೆಂದದಾ ಗೊಂಬೆ
ಸುಗಂಧ ಸೂಸುವಾ ಮನಸೆಳೆವ ರಂಬೆ
ಎಳೆ ಚಿಗುರು ಹೂ ಹಣ್ಣಿನಾ ಕೊಂಬೆ
ಸೌಂದರ್ಯದ ಗಣಿಯೆ, ನೀನಗಾರು ಸರಿಯೆಂಬೆ||
–ಸವಿತಾ ಮಾಟೂರು ಇಲಕಲ್ಲ