ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ,

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ, ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ, ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ
                                     ‌         –ಆಯ್ದಕ್ಕಿ ಲಕ್ಕಮ್ಮ

ಆಯ್ದಕ್ಕಿ ಲಕ್ಕಮ್ಮ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು. ಲಕ್ಕಮ್ಮನ ಗಂಡ ಮತ್ತು ಮಾರಯ್ಯ . ಕಾಯಕ ಆಯಗಾರರರು
ಕೂಲಿಕಾರರು . ಮಹಾ ಮನೆಗೆ ಬರುವ ಅಕ್ಕಿ ಗೋಧಿ ಜೋಳ ಮುಂತಾದ ದವಸ ಧಾನ್ಯಗಳ ಮೂಟೆಯನ್ನು ಗಂಡ ಮಾರಯ್ಯ ಹೊತ್ತು ಮಹಾ ಮನೆಯ ಉಗ್ರಾಣದಲ್ಲಿ ಇಡುತ್ತಿದ್ದ. ಅದೇ ಮಹಾ ಮನೆಯಲ್ಲಿ ದವಸ ಧಾನ್ಯಗಳನ್ನು ಕೇರಿ ಹಸನ ಮಾಡುವ ಕಾರ್ಯ ಮಡದಿ ಲಕ್ಕಮ್ಮನದು.
ಲಕ್ಕಮ್ಮ ಒಬ್ಬ ದಿಟ್ಟ ಪ್ರಾಮಾಣಿಕ ವಚನಕಾರ್ತಿ .ಇವಳ ಅನೇಕ ವಚನಗಳಲ್ಲಿ ಬಂಡಾಯದ ಧ್ವನಿ ಕೇಳಿ ಬರುತ್ತದೆ.

ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ,

ಅರಿವು ಆಚಾರ ಅನುಭಾವ ಶರಣರ ಮುಕ್ತಿ ಮಾರ್ಗದ ನೈಜ ಬದುಕು. ಗುರುವೆಂಬ ವ್ಯಕ್ತಿಯ ಹಂಗಿನಲ್ಲಿರದೆ . ಅರಿವಿನ ಅನುಸಂಧಾನಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಭಕ್ತಿ. ಇಲ್ಲಿ ಕಾಯಕ ಸತ್ಯ ಶುದ್ಧವಾಗಿರಬೇಕು. ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಲಿಂಗ ತತ್ವದ ಗಟ್ಟಿ ಮುಟ್ಟಾದ ಅರುಹಿನ ಕುರುಹಾದ ಇಷ್ಟಲಿಂಗವು ಇದನ್ನು ಅರಿವೆಯ ಅಂಗದಲ್ಲಿ ಕಟ್ಟಿ ಕೊಂಡು ಅಂಗದ ಮೇಲೆ ಅರುಹಿನ ಅರಿವರತ ಅರುವಿನಲ್ಲಿಯೆ ಲಿಂಗ ಪ್ರಜ್ಞೆ ಕಟ್ಟಿಕೊಂಡು ನಿತ್ಯ ಕಾಯಕ ಮಾಡಲು ಸೂಚಿಸುವಳು ಲಕ್ಕಮ್ಮ

ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ, ಕೊಂಡುಬಾರಯ್ಯಾ

ಶರಣರು ಕಂಡದ್ದು ಭಕ್ತ ಮತ್ತು ಭವಿ . ಸಮಗ್ರ ಜಂಗಮ ಚೇತನಕ್ಕೆ ಪ್ರಾಮಾಣಿಕವಾಗಿ ಇರುಳು ಹಗಲೆನ್ನದೆ ದುಡಿದ ಭಕ್ತ ನಿಸ್ವಾರ್ಥ ಸೇವೆಯಿಂದ ನಿವೃತ್ತಿ ಭಾವದಲ್ಲಿರುತ್ತಾನೆ ಆತನ ಬಯಕೆ ಎಂತಹ ಅನುಪಮ. ಕೈಗಳಿಗೆ ಕೆಲಸವನ್ನು ಅರಸಿಕೊಂಡು ಪ್ರಮಥರ ಅಂಗಳಕ್ಕೆ ಹೋಗಿ ಕೂಲಿ ಮಾಡಿ ಕೊಂಡು ಬಾರಯ್ಯ ಎಂದು ಭಿನ್ನವಿಸುತ್ತಾಳೆ. ಅರಿವು ಪ್ರಾಮುಖ್ಯತೆ ಹೊಂದಿದ ಶ್ರೇಷ್ಠ ಪ್ರಜ್ಞೆ ಅಂತಹ ಪ್ರಜ್ಞೆಯ ಪ್ರತೀಕವಾದ ಇಷ್ಟಲಿಂಗವನ್ನು ಬಟ್ಟೆಯಲ್ಲಿ ಅರುವೆಯ ಅಂಗದಲ್ಲಿ ಕಟ್ಟಿಕೊಂಡು ಕೇವಲ ಶರಣರ ಭಕ್ತರ ಮನೆಯ ಕಾರ್ಯಕ್ಕೆ ಅವರವರ ಅಂಗಳಕ್ಕೆ ಕೆಲಸವನ್ನು ಹುಡುಕಿಕೊಂಡು ಹೋಗು ಎನ್ನುತ್ತಾಳೆ.

ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ

ಇಂತಹ ಪ್ರಾಮಾಣಿಕ ದಿಟ್ಟ ಕಾರ್ಯಕ್ಕೆ ಮಾಡುವ ಕಾಯಕ ಅದು ಅಮರೇಶ್ವರ ಲಿಂಗಕ್ಕೆ ಮಾಡುವ ಸೇವೆ ಬೇಗ ಹೋಗಿ ಭಕ್ತರ ಪ್ರಮಥರ ಅಂಗಳಕ್ಕೆ ಹೋಗಿ ಅವರವರ ಕೆಲಸವನ್ನು ಕೊಂಡು ಬಾರಯ್ಯ ಎಂದಿದ್ದಾರೆ ಲಕ್ಕಮ್ಮ ಇಂತಹ ಪವಿತ್ರ ಕಾರ್ಯ ದೇವರ ಕಾರ್ಯವೆಂದು ನಂಬಿದ್ದಾಳೆ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!