ಬಸವ ಸ್ಮರಣ

ಬಸವ ಸ್ಮರಣ

ಅನುದಿನವೂ ಮಾಡುವೆವು
ನಿತ್ಯ ಬಸವ ಸ್ಮರಣ
ಇರಲಿ ಬಸವಣ್ಣ
ನಮ್ಮ ಮೇಲೆ ಕರುಣಾ

ಕಳೆದವು ಒಂಬತ್ತು ಶತಕ
ಮತ್ತೆ ಇಲ್ಲಿ ವೈದಿಕರ ಶೋಷಣೆ
ಧರ್ಮ ಕರ್ಮ ದೇವರ ಹೆಸರಲ್ಲಿ
ಉದರ ಪೋಷಣೆ

ಬಳಲಿ ಬೆಂಡಾದ ಜೀವ
ಬಡ ಜನರ ಬವಣೆ
ಸುಕ್ಕುಗಟ್ಟಿವೆ ಕನಸು
ಬೇಕು ನಿನ್ನಯ ಪ್ರೇರಣೆ

ಬಂದು ಬಿಡು ಬಸವಣ್ಣ
ಸಮ ಸಮಾಜದ ಕಣ್ಣ
ನಿನ್ನ ವಚನಗಳ ಅನುಭಾವ
ಲಿಂಗ ಭಕ್ತರ ಪ್ರಾಣ

ಸುಮಾ ಮಲಘಾಣ ಕಲಬುರ್ಗಿ

Don`t copy text!