ಸ್ನೇಹವೆಂಬುದು ಸುಂದರ

ಸ್ನೇಹವೆಂಬುದು ಸುಂದರ
ಸಂಕೋಲೆ
ಒಬ್ಬರನೊಬ್ಬರು ಅರಿತು
ಬದುಕುವ ಕಲೆ

ಯಾರು ಗೊತ್ತಿಲ್ಲ
ಎಲ್ಲಿಯವರು ತಿಳಿದಿಲ್ಲ
ಆದರೂ ಜೊತೆ ಜೊತೆಗೆ
ಒಡನಾಟವಿದೆಯಲ್ಲ

ಮಾತು ಕತೆ ಸುಂದರ
ಜೊತೆಗೆ ಒಡನಾಡುವ
ಸ್ನೇಹದ ಹಂದರ, ಸುಂದರ
ಪ್ರೀತೀ ಕರುಣೆಯ ಮಂದಾರ

ಸ್ನೇಹಿತರಿರೆ ಸಹ್ಯಬದುಕು
ಅವರಿಂದಲೇ ಬಾಳಿಗೆ ಬೆಳಕು
ಅದಕೆ ಜೊತೆಗೆ ಸ್ನೇಹಿತರಿರಬೇಕು
ಅವರಿಂದ ಸಂತೋಷ ನಮ್ಮ ಬದುಕು

✍️ರೇಖಾ. ಮುತಾಲಿಕ್
H/o S. G. ಕನ್ನೂರ್
4th ಕ್ರಾಸ್, ವಿದ್ಯಾಗಿರಿ
ಬಾಗಲಕೋಟ

Don`t copy text!