ಶ್ರೀಮತಿ ಮಲ್ಲಮ್ಮ ಶಿಕ್ಷಕಿ ವಯೋನಿವೃತ್ತಿ

ಶ್ರೀಮತಿ ಮಲ್ಲಮ್ಮ ಶಿಕ್ಷಕಿ ವಯೋನಿವೃತ್ತಿ

e-ಸುದ್ದಿ ಮೆದಕಿನಾಳ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಶ್ರೀಮತಿ ಮಲ್ಲಮ್ಮ ಅವರು 34 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ  ಹೊಂದಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಭಾವುಕರಾಗಿ ಮಾತನಾಡಿದ ಶ್ರೀಮತಿ ಮಲ್ಲಮ್ಮ ಅವರು ಶಿಕ್ಷಣ ವೃತ್ತಿ ನನಗೆ ತುಂಬಾ ಖುಷಿ ತಂದಿದ್ದು ನಿಮ್ಮೆಲ್ಲಾ ಪ್ರೀತಿ ವಿಶ್ವಾಸ ಗೌರವಕ್ಕೆ ನಾನೆಂದೂ ಚಿರಋಣಿ ಎಂದು ಭಾವುಕರಾಗಿದ್ದರು ಮಾತನಾಡಿದರು.

ಇದೇ ಸಂದರ್ಭದಲ್ಲಿ ,ಶ್ರೀಮತಿ ಮಲ್ಲಮ್ಮ ಅವರಿಗೆ ಶಿಕ್ಷಕರ ಬಳಗದಿಂದ ಹಾಗೂ ಮಕ್ಕಳು ಎಸ್ಡಿಎಂಸಿ ಸದಸ್ಯರು ಮತ್ತು ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.

Don`t copy text!