ಯಾರು ಈ ವೀರಶೈವರು?
–
ವೀರಶೈವರು ಆಂಧ್ರ ಮೂಲದ ಆರಾಧ್ಯ ಬ್ರಾಹ್ಮಣರು ವೈದಿಕ ಶೈವರು .ವಿಜಯನಗರದ ಆಸ್ಥಾನದಲ್ಲಿ ವಚನ ಸಾಹಿತ್ಯ ಮತ್ತು ಬಸವಪರ ಚಿಂತನೆ ಹೆಚ್ಚಾಗಿ ಕಂಡು ಬಂದು ಅಲ್ಲಿ ರಾಜ ಪ್ರೌಢ ದೇವರಾಯ ನೀಡುವ ಪ್ರೋತ್ಸಾಹಕ್ಕೆ ಮಾರು ಹೋಗಿ ಲಿಂಗಾಯತ ಚಳುವಳಿ ಮತ್ತು ವಚನ ಸಾಹಿತ್ಯವನ್ನು ತಮ್ಮ ಅಧ್ಯಯನ ಮಾಡಿಕೊಂಡು
ತಮ್ಮ ಶೈವ ಮೂಲದ ಆಚರಣೆಯನ್ನು ಲಿಂಗಾಯತ ಧರ್ಮದಲ್ಲಿ ಸೇರಿಸಿ ಮುಂದೆ ವಚನಗಳಲ್ಲಿ ಇಲ್ಲದ ವೀರಶೈವ ಮತ್ತು ಸಂಸ್ಕತ ಯುಕ್ತಿ ಸೇರ್ಪಡೆಯನ್ನು
ಮಾಡುತ್ತಾ ಆಗಮ ವೇದ ಶಾಸ್ತ್ರಗಳ ಸಾಲುಗಳನ್ನು ಸೇರಿಸಿದರು.
ಮೂರು ಶತಮಾನಗಳ ಕಾಲ ಸಮಯ ಲಿಂಗಾಯತ ಧರ್ಮ ಸಾಹಿತ್ಯ ಸಂಪೂರ್ಣ ಕಾಲ ಗರ್ಭದಲ್ಲಿ ತನ್ನ ವೈಚಾರಿಕತೆ ಕಳೆದು ಕೊಂಡಿತ್ತು.ವಿಜಯನಗರ ಸಾಮ್ರಾಜ್ಯದಲ್ಲಿ ಆಶ್ರಯ ಪಡೆದ ವೀರಶೈವ ಪಂಡಿತರು ಲಿಂಗಾಯತ ಧರ್ಮದ ಮೇಲೆ ತಮ್ಮ ಯಜಮಾನಿಕೆ ನಡೆಸಿ ಮೂಲ ವಚನಗಳಲ್ಲಿ ಕಲಬೆರಕೆ ಮಾಡಿ ಅವುಗಳನ್ನು ವಿರೂಪಗೊಳಿಸಿ ಪ್ರಕ್ಸಿಪ್ತ ಮಾಡಿ ಶರಣರ ಆಶಯಗಳಿಗೆ ಹೋಮ ನಡೆಸಿದರು.. ಪೌರೋಹಿತ್ಯ ಮತ್ತು ಯಜಮಾನಿಕೆ ಜೊತೆಗೆ ಲಿಂಗಾಯತ ಧರ್ಮದ ಮೂಲ ಉಗಮ ವೀರಶೈವ ಎಂದು ಹೇಳುವ ಮೂಲಕ ಸುಳ್ಳನ್ನು ಸಾಬೀತು ಪಡಿಸಲು ಮುಂದಾಗಿ ಯಶವ ಕಂಡರು. ಕಪೋಲ ಕಲ್ಪಿತ ಕಥೆ ಪುರಾಣ ಪವಾಡ ಹುಟ್ಟು ಹಾಕಿದ ವೀರಶೈವರು ಪೌರೋಹಿತ್ಯ ಜ್ಯೋತಿಷ್ಯ ವಾಸ್ತು ಯಂತ್ರ ತಂತ್ರ ಪೂಜೆ ಹವನ ಯಜ್ಞ ಯಾಗಾದಿಗಳನ್ನು ಲಿಂಗಾಯತ ಧರ್ಮದ ಆಚರಣೆ ಎಂದು ಪ್ರತಿಬಿಂಬಿಸುವ ಕುತಂತ್ರ ರೂಪಿಸುತ್ತ ಧರ್ಮದ ಮೂಲಕ ಸುಲಿಗೆ ಶೋಷಣೆಗೆ ಮುಂದಾದರು.
ವೀರಶೈವರು ಲಿಂಗಾಯತ ಧರ್ಮದ ಇತಿಹಾಸ ಮಸುಕು ಗಳಿಸುವಲ್ಲಿ ಯಶವ ಕಂಡ ಸನಾತನಿಗಳು
—ಡಾ.ಶಶಿಕಾಂತ ಪಟ್ಟಣ ರಾಮದುರ್ಗ, ಪುಣೆ