ವೀರಶೈವರ ಇತಿಹಾಸವನ್ನು ಒಮ್ಮೆ ಅವಲೋಕಿಸಿರಿ.
ಲಿಂಗಾಯತ ಸ್ವತಂತ್ರ ಧರ್ಮವು ಹನ್ನೆರಡನೆಯ ಶತಮಾನದಿಂದಲೂ ಸನಾತನ ವೈದಿಕ ವ್ಯವಸ್ಥೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಸಾರ್ವಕಾಲಿಕ ಸಮಾನತೆ ಸಾರುವ ಶ್ರೇಷ್ಠ ವೈಚಾರಿಕ ಧರ್ಮವಾಗಿದೆ. ಇದು ಹಿಂದೂ ಧರ್ಮದಲ್ಲಿರುವ ಕರ್ಮ ಸಿದ್ಧಾಂತ ಪುನರ್ಜನ್ಮ ಮಾಟ ಮಂತ್ರ ಮೂಡ ನಂಬಿಕೆ ,ಪಂಚಾಂಗ ಜ್ಯೋತಿಷ್ಯ ,ಯಜ್ಞ ,ಯಾಗಾದಿ ಹವನ ಹೋಮ ಬಲಿಯಂತಹ ಅತ್ಯಂತ ಕ್ರೂರ ಪದ್ಧತಿಗಳನ್ನು ಕಟುವಾಗಿ ವಿರೋಧಿಸಿದ ಒಂದು ದಿಟ್ಟ ಚಳುವಳಿ ಆರಂಭಗೊಂಡಿತು .
ಅದರ ದಿಟ್ಟ ನಾಯಕನೇ ಬಸವಣ್ಣ.
ವೇದ ಶಾಸ್ತ್ರ ಪುರಾಣ ಆಗಮಗಳನ್ನು ಸಾರಾಸಗಟಾಗಿ ಧಿಕ್ಕರಿಸಿದ ದೇಶದ ಮೊದಲನೆಯ ಪ್ರಗತಿಪರ ಸಮಾಜವಾದ ಸಿದ್ಧಾಂತ .
ಸಾಮಾಜಿಕ ಆರ್ಥಿಕ ರಾಜಕೀಯ ಧಾರ್ಮಿಕ ಅಕ್ಷರ ಕ್ರಾಂತಿ ಆಧ್ಯಾತ್ಮಿಕ ಮಹಿಳಾ ಸ್ವಾತಂತ್ರ್ಯ ಅಸ್ಪ್ರಶ್ಯತೇ ನಿವಾರಣೆ ಹೀಗೆ ಸಂಪೂರ್ಣ ಪರಿವರ್ತನೆಗೆ ಮುನ್ನುಡಿ ಬರೆದರೂ ಕಲ್ಯಾಣ ಶರಣರು.
ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣ ನವರು ಮತ್ತು ಇತರ ದಲಿತ ಅಸ್ಪ್ರಶ್ಯ ಮಹಿಳೆಯರಿಂದ ಶೋಷಿತರಿಂದ ಕೂಲಿ ಕಾರ್ಮಿಕರಿಂದ ಹಿಂದುಯೇತರ ಅವೈದಿಕ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.
ಸಾರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ ,ಸಹ ಬಾಳ್ವೆ ,ಕಾಯಕ ದಾಸೋಹ ವೃತ್ತಿ ನಿಷ್ಠೆ , ದಾರ್ಶನಿಕತೆ ,ರಾಷ್ಟ್ರೀಯ ಏಕತೆಯಂತಹ ಅನೇಕ ಅಂಶಗಳನ್ನು ಶರಣರು ಪ್ರತಿ ಪಾದಿಸಿದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಂದೇಶ ನೀಡಿದ ಶರಣರು ದೇಶವು ಕಂಡ ಕ್ರಾಂತಿಕಾರರು ಪರಿವರ್ತನೆಯ ಹರಿಕಾರರು.
ಲಿಂಗಾಯತ ತತ್ವ ,ಸಂಸ್ಕೃತಿ ,ನೀತಿಗಳು ,ಆಚರಣೆಗಳು ಸಂಪೂರ್ಣ ಅವೈದಿಕ ಮತ್ತು ಹಿಂದುಯೇತರವಾಗಿದ್ದು ತನ್ನ ಧಾರ್ಮಿಕ ಅನನ್ಯತೆ ಏಕತೆ ಉಳಿಸಿಕೊಳ್ಳುವುದು ಮತ್ತು ಧಾರ್ಮಿಕ ಸಾಮಾಜಿಕ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಅಗತ್ಯ ಇಂದು ಲಿಂಗಾಯತ ಧರ್ಮಕ್ಕೆ ಪ್ರಸ್ತುತವೆನಿಸುತ್ತಿದೆ.
ಯಾರು ಈ ವೀರಶೈವರು??
ಕಾಳಾಮುಖಿ ಲಕುಲೀಶ ಪಾಶುಪತ ಕಾಪಾಲಿಕ ಎಂಬ ಶೈವ ಪ್ರಭೇದಗಳಲ್ಲಿ ಹುಟ್ಟಿದ ಒಂದು ಉಪಪ್ರಭೇದ ವೃತವೇ ವೀರಶೈವ -ವೀರಮಾಹೇಶ್ವರ ಆಂಧ್ರ ಮೂಲದ ಕೊಲ್ಲಿಪಾಕಿಯಿಂದ 15 ನೇಶತಮಾನದಲ್ಲಿ ಬಂದು ವಿಜಯನಗರದಲ್ಲಿ ತಮಗೆ ಪೈಪೋಟಿ ನೀಡಬಹುದಾದ ವೈಷ್ಣವರ ವಿರುದ್ಧ ಲಿಂಗಾಯತ ಧರ್ಮದ
ಆಶ್ರಯ ಪಡೆದು ಆದಿಲಶಾಹಿ ಬಹುಮನಿ ರಾಜರ ದಾಳಿಯ ಸಂದರ್ಭದಲ್ಲಿ ಕೇವಲ ವೈಷ್ಣವ ದೇವತೆಗಳ ಮೂರ್ತಿಗಳಾದ ಉಗ್ರ ನರಸಿಂಹ ಮತ್ತು ವಿಜಯ ವಿಠ್ಠಲ ಮಂದಿರವನ್ನು ದ್ವಂಸ ಮಾಡಿದ ವೀರಶೈವರು ,ಲಿಂಗಾಯತ ಬಸವ ತತ್ವವ ಹಾಳು ಮಾಡಲು ಬಂದ ಪೂರ್ವ ನಿಯೋಜಿತ ವೈದಿಕರು. ಲಿಂಗಾಯತ ಐತಿಹಾಸಿಕ. ವೀರಶೈವ ಪೌರಾಣಿಕ.
ವೀರಶೈವರು ಸ್ಥಾವರ ಪೂಜಕರು
ವೀರಶೈವರಲ್ಲಿ ಗಣೇಶ ನಂದಿ ಪಾರ್ವತೀ ವೀರಭದ್ರ ಶಿವ ಸ್ಥಾವರ ಶಿವಲಿಂಗ ಮುಂತಾದ ಅನೇಕ ದೇವರ ಪೂಜೆ ನಡೆಯುತ್ತದೆ. ಲಿಂಗಾಯತ ಚಳುವಳಿ ಇದನ್ನು ವಿರೋಧಿಸಿ ಹುಟ್ಟಿಕೊಂಡ ಕನ್ನಡ ನೆಲದ ಧರ್ಮವಾಗಿದೆ. ಬಸವಣ್ಣನವರು ನೀಡಿದ ಇಷ್ಟಲಿಂಗ ಅರುಹಿನ ಕುರುಹು ಮಾತ್ರ . ಇಷ್ಟಲಿಂಗಕ್ಕೂ ವೀರಶೈವರ ಸ್ಥಾವರ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಶ್ರೀಶೈಲ ಉಜನಿ ಕೇದಾರ ಕಾಶಿ ಬಾಳೆಹೊನ್ನೂರು ಮುಂತಾದ ಕಡೆಗಳಲ್ಲಿ ಈಗಲೂ ಸ್ಥಾವರ ಶಿವಲಿಂಗದ ಪೂಜೆ ಸಲ್ಲುತ್ತದೆ.ಅಷ್ಟೇ ಅಲ್ಲ ಇಂತಹ ಕ್ಷೇತ್ರಗಳಲ್ಲಿ ಲಕ್ಷಾಂತರ ಶಿವಲಿಂಗ ಸ್ಥಾಪನೆ ಮಾಡಿ ತಾವು ಶೈವ ಧರ್ಮಿಗಳೆಂದು ಹೇಳಿಕೊಳ್ಳುತ್ತಾರೆ .ಸ್ಥಾವರ ಒಪ್ಪುವ ವೀರಶೈವರಿಗೆ ಲಿಂಗಾಯತ ಎಂದು ಹೇಳಿಕೊಳ್ಳುವ ಯಾವ ನೈತಿಕ ಹಕ್ಕು ಅಧಿಕಾರ ಇದೆ. ಅತ್ಯಂತ ಶ್ರೇಣೀಕೃತ ವ್ಯವಸ್ಥೆಯ ವೀರಶೈವ ಪಂಥವು ಶೈವಧರ್ಮದ ಭಾಗವಾಗಿದ್ದು ಅದಕ್ಕೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಬಸವಣ್ಣ ಮತ್ತು ಶರಣರ ತತ್ವಗಳನ್ನು ಒಪ್ಪಿ ಬರುವ ಯಾವುದೇ ಸಮುದಾಯದದವರು ಲಿಂಗಾಯತರಾಗುವಂತೆ ಅನೇಕ ವೀರಶೈವರು ಬಸವಣ್ಣನವರನ್ನು ಅವರ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ವೀರಶೈವರು ಲಿಂಗಾಯತ ಧರ್ಮದ ಒಳಪಂಗಡವೆಂದು ಪರಗಣಿಸಿ ಒಪ್ಪಿಕೊಂಡಿದೆ.
ಚತುರಾಚ್ಯಾರ್ಯರು ವೀರಶೈವರು
ಶ್ರೀಶೈಲ ಕೇದಾರ ಬಾಳೆಹೊನ್ನೂರು ಉಜ್ಜಯಿನಿ ಇವು ಮಾತ್ರ ಹದಿನೇಳನೆಯ ಶತಮಾನದಲ್ಲಿ ಚಿತ್ರದುರ್ಗ ಶಾಖಾಮಠ ಆಗಿದ್ದು ಅದಕ್ಕೆ ಬೇಕಾದ ದಾಖಲೆಗಳಿವೆ.
ಇನ್ನು ಉಜನಿ ಮಠವು ಬಳ್ಳಾರಿ ಜಿಲ್ಲೆಯ ಮರುಳ ಶಂಕರ ದೇವರ ಪೀಠವಾಗಿದ್ದು ಅದು ಸಂಪೂರ್ಣ ಲಿಂಗಾಯತ ಮಠವಾಗಿದೆ. ಅದನ್ನು ಹತೋಟಿಗೆ ತೆಗೆದುಕೊಂಡ ವೀರಶೈವರು ತಮ್ಮ ಮುದ್ರೆ ಒತ್ತಿದರು.ಬಾಳೆ ಹೊನ್ನೂರು ಪೀಠವು ಹದಿನೇಳನೆಯ ಶತಮಾನದಲ್ಲಿ ಚಿತ್ರದುರ್ಗ ಮಠದ ಶಾಖಾ ಮಠವಾಗಿದೆ .
ಇದೆ ರೀತಿ ಕೇದಾರ ಪೀಠವು ಸವದತ್ತಿ ತಾಲೂಕಿನ ಹೂಲಿಯ ಮಠವಾಗಿದ್ದುಅದಕ್ಕೆ ಯಾವ ಪರಂಪರೆಯಿಲ್ಲ ಶ್ರೀಶೈಲ ಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ಸಮಕಾಲೀನರಾಗಿದ್ದು ಅವರ ವಚನಗಳಲ್ಲಿ ಬಸವಣ್ಣನವರು ತನ್ನ ದೈವವೆಂದಿದ್ದಾರೆ.
ವಸ್ತು ಸ್ಥಿತಿ ಹೀಗಿರುವಾಗ ಹತ್ತಂಬೊತ್ತನೆಯ ಶತಮಾನದ ಅಂತ್ಯಕ್ಕೆ ಕಾಶಿಯ ಗೋಸಾವಿ ಮಠವು ಪಂಚ ಪೀಠಗಳಲ್ಲಿ ಸೇರಿಕೊಂಡಿತು . ಉತ್ತರ ಭಾರತದ ಉಜ್ಜಯಿನಿ ಕೇದಾರ ಆಂಧ್ರ ಪ್ರದೇಶದ ಕೊಲ್ಲಿಪಾಕಿ ಮಧ್ಯ ಪ್ರದೇಶದ ಉಜ್ಜಯನಿಯವರೆಂದು ಹೇಳುವ ಇವರು ಅಲ್ಲಿ ಏಕೆ ರಾವಳ ಅಂದರೆ ಪೂಜಾರಿ ಎಂದೆನಿಸಿಕೊಳ್ಳುತ್ತಾರೆ .
ವೀರಶೈವರು ಬೇಡ ಜಂಗಮರೆಂದು ಶೂದ್ರರ ಸಾಲಿನಲ್ಲಿರುವಾಗ ಅವರು ಹೇಗೆ ಗುರುಗಳಾಗುತ್ತಾರೆ.?
ಬಸವಣ್ಣನವರ ತತ್ವಗಳನ್ನು ವಿರೋಧಿಸುವ ಇವರು ಒಪ್ಪದ ಇವರು ಬಸವಣ್ಣನವರ ಭಾವ ಚಿತ್ರವನ್ನೇಕೆ ಬಳಸುತ್ತಾರೆ ?
ವೀರಶೈವರ ಬಳಿ ಪುರಾವೆ ದಾಖಲೆ ಇದ್ದರೆ ಅವರು ಕೇವಲ ವೀರಶೈವ ಎಂದು ಧಾರ್ಮಿಕ ಮಾನ್ಯತೆ ಪಡೆದುಕೊಳ್ಳಲಿ ಲಿಂಗಾಯತ ಧಾರ್ಮಿಕ ಮಾನ್ಯತೆಗೆ ಅಡ್ಡಿಪಡಿಸುವುದು ಕಾನೂನಾತ್ಮಕ ಅಪರಾಧವಾಗಿದೆ .
ಬಿಸಿಲು ಬಂದ ಕಡೆಗೆ ಕೊಡೆ ಹಿಡಿಯುವ ಕೆಟ್ಟ ಚಾಳಿಯನ್ನು ವೀರಶೈವರು ಕೈ ಬಿಡಲಿ. ಬಸವ ತತ್ವ ಒಪ್ಪಿ ಲಿಂಗಾಯತರೆನಿಸಿಕೊಂಡರೆ ಅವರಿಗೆ ಗೌರವ ಇಲ್ಲದಿದ್ದರೆ ಅವರ ವೀರಶೈವ ಧರ್ಮ ಮಾತ್ರ ( ಲಿಂಗಾಯತ ಮತ್ತು ಬಸವಣ್ಣ ಹೊರತು ಪಡಿಸಿ ) ಧಾರ್ಮಿಕ ಮಾನ್ಯತೆ ಪಡೆಯಲಿ .
ಕಪೋಲ ಕಲ್ಪಿತ ಪುರಾಣಗಳನ್ನು ಸರಕಾರ ಕಾನೂನು ನ್ಯಾಯಾಲಯ ಒಪ್ಪುವದಿಲ್ಲ . ವೀರಶೈವರು ಇದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಒಳ್ಳೆಯದು. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳುತ್ತಾ ಮಾನವರ ಹೆಗಲ ಮೇಲೆ ಅಡ್ಡಪಲ್ಲಕ್ಕಿ ಮಾಡಿಸಿಕೊಳ್ಳುವುದು ಎಷ್ಟ ಸರಿ. ?
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ, ಪುಣೆ
ಡಾ.ಶಶಿಕಾಂತ ಪಟ್ಟಣ ಅವರು ಬೆಳಗಾವಿ ಜಿಲ್ಲೆ ರಾಮದುರ್ಗ ದವರು. ಈಗ ಪುಣೆಯಲ್ಲಿ ಇದ್ದಾರೆ. ಬಸವ ಅಂತರಾಷ್ಟ್ರೀಯ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಿ ವಚನಕಾರರ ಪರಿಚಯ, ವಚನ ವಿಶ್ಲೇಷಣೆ ಕುರಿತು ಅಕ್ಕನ ಅರಿವು ಗ್ರೂಪ್ ಮತ್ತು ಜೂಮ್ ಮೀಟ್ ಮೂಲಕ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಕುರಿತು ಲೇಖನ ಮಾಲೆ ಆರಂಭಿಸಿದ್ದಾರೆ. ಆಸಕ್ತರು ಈ ಲೇಖನಗಳ ಕುರಿತು ಚರ್ಚಿಸಲು ಇಚ್ಚಿಸುವವರು ಅವರ ದೂರವಾಣಿ ನಂ. ಸಂಪರ್ಕಿಸಬಹುದು.
ಡಾ.ಶಶಿಕಾಂತ ಪಟ್ಟಣ ಪುಣೆ
ದೂರವಾಣಿ ಸಂಖ್ಯೆ-95520 02338
(ಇಲ್ಲಿ ಪ್ರಕಟವಾಗುವ ಲೇಖನಗಳಿಗೆ ಆಯಾ ಲೇಖಕರೆ ಹೊಣೆಗಾರರು. ಲೇಖನದ ಅಭಿಪ್ರಾಯಗಳು ಲೇಖಕರದೇ ಆಗಿರುತ್ತವೆ)
-ಸಂಪಾದಕ