ವೀರಶೈವರು ಹಿಂದುಗಳೇ ? ಹೌದು
ವೀರಶೈವರು ವೈದಿಕ ಪರಂಪರೆಯನ್ನು ಹೊಂದಿದ್ದು ಸನಾತನಕ್ಕೆ ಅತ್ಯಂತ ಸಾಮಿಪ್ಯದಲ್ಲಿರುವ ವೀರಶೈವರು ಕರ್ನಾಟಕಕೆ ಬಂದಿದ್ದು ಹದಿನೈದನೆಯ ಶತಮಾನದಲ್ಲಿ .
ವೀರಶೈವರು ಗುರು ಲಿಂಗ ಜಂಗಮ ತತ್ವಗಳಲ್ಲಿ ನಂಬಿಕೆ ಇಟ್ಟವರು ಆದರೆ ಅವು ಬಾಹ್ಯ ಭೌತಿಕ ಸಾಧನಗಳು. ಅಷ್ಟಾವರಣಗಳು ಲಿಂಗಾಯತ ಧರ್ಮದಲ್ಲಿ ಶರಣರ ಕಾಯ ಗುಣ . ಅರಿವೇ ಗುರು ಆಚಾರವೇ ಲಿಂಗ ಅನುಭಾವೇ ಜಂಗಮ . ಹೀಗಾಗಿ ಲಿಂಗಾಯತರ ಇಷ್ಟಲಿಂಗ ಜಂಗಮ ತತ್ವವನ್ನು ವೀರಶೈವರು ತಮ್ಮ ಅನಕೂಲಕ್ಕೆ ತಕ್ಕಂತೆ ಸಾಂಸ್ಥಿಕರಣಗೊಳಿಸಿದ್ದಾರೆ .ಬಸವಣ್ಣನವರ ಸಮಾಜವಾದದ ಆಶಯಗಳನ್ನು ಗಾಳಿಗೆ ತೂರಿ ಪೌರೋಹಿತ್ಯ ಮೂಲದ ಸಂಪ್ರದಾಯಗಳನ್ನು ಲಿಂಗಾಯತ ಧರ್ಮದಲ್ಲಿ ಕಲಬೆರಕೆಗೊಳಿಸಿ ವಿರೋಪಗೊಳಿಸಿದ್ದು ದುರಂತವೇ ಸರಿ .
1 ) ವೀರಶೈವರು – ವೇದ ಆಗಮ ಶಾಸ್ತ್ರ ಪುರಾಣ ಶ್ರುತಿಗಳನ್ನು ಮಾನ್ಯ ಮಾಡುತ್ತಾರೆ ಹೀಗಾಗಿ ವೀರಶೈವವು ಹಿಂದೂ ಧರ್ಮದ ಅವಿಭಾಜ್ಯ ಅಂಗ .
2 ) ವೀರಶೈವರಲ್ಲಿ -ಅಯ್ಯಾಚಾರ ಅಂದರೆ ಮುಂಜವಿ ಅಥವಾ ವೈದಿಕತನದ ಉಪನಯನಕ್ಕೆ ಸಂಪೂರ್ಣ ಹೋಲಿಕೆಯಿರುವ ಆಚರಣೆ ಇದೆ. ವೀರಶೈವರು ಹಿಂದೂಗಳು .
3 )ವೀರಶೈವರಲ್ಲಿ – ಕರ್ಮ ಸಿದ್ಧಾಂತ ,ಜಾತಿ ವ್ಯವಸ್ಥೆ ,ಸೂತಕ ಪಂಚಾಗ, ಮುಹೂರ್ತ ,ವಾಸ್ತು ಇತರ ಮೌಢ್ಯತನಕ್ಕೆ ಪೂರಕವಾಗುವ ಆಚರಣೆಗಳಿವೆ .
4 ) ವೀರಶೈವರಲ್ಲಿ- ಮೂರ್ತಿ ಪೂಜೆ ಇದೆ ನಂದಿ ವೀರಭದ್ರ ಗಣಪತಿ ಮುಂತಾದ ದೇವತೆಗಳ ಪೂಜೆ ಸಲ್ಲುತ್ತದೆ .
5 ) ವೀರಶೈವರಲ್ಲಿ-ರುದ್ರಾಭಿಷೇಕ ,ಕೋಟಿ ಬಿಲ್ವಾರ್ಚನೆ ,ಲಕ್ಷ ದೀಪೋತ್ಸವ ,ಬುತ್ತಿ ಪೂಜೆ ,ಬೆಂಕಿ ದಾಟುವುದು ಅಸ್ತ್ರಗಳನ್ನು ಚುಚ್ಚಿಕೊಳ್ಳುವಂತಹ ಅವೈಜ್ಞಾನಿಕ ಪದ್ಧತಿಗಳು ರೂಢಿಯಲ್ಲಿವೆ .
6 ) ವೀರಶೈವರಲ್ಲಿ-ಭಿಕ್ಷಾಟನೆ ಇದೆ. ಅಯ್ಯಾಚಾರವಾದ ನಂತರ ಸ್ವಾಮಿಯು ವಟುವು ಐದು ಮನೆ ಭಿಕ್ಷೆ ಎತ್ತಬೇಕು.
7 ) ವೀರಶೈವರಲ್ಲಿ-ಪುನರ್ಜನ್ಮ ಹಾಗು ಹಿಂದಿನ ಜನ್ಮ ಕರ್ಮಾ ಸಿದ್ಧಾಂತದ ಮೇಲೆ ನಂಬಿಕೆ ಇದೆ.
8 ) ವೀರಶೈವರಲ್ಲಿ-ಮಾಟ ಮಂತ್ರ ದೆವ್ವ ಪಿಶಾಚಿಗಳನ್ನು ನಂಬುತ್ತಾರೆ
9 ) ವೀರಶೈವರಲ್ಲಿ-ಮಹಿಳೆಗೆ ಯಾವುದೇ ಸ್ಥಾನಮಾನವಿಲ್ಲ -ಅವಳು ಮಲದ ಭಾಂಡ ಮಹಿಲ್ಯಾರು ಸ್ವತಂತ್ರ ವಂಚಿತರು .
10 )ವೀರಶೈವರಲ್ಲಿಯು ಶ್ರೇಣೀಕೃತ ವ್ಯವಸ್ಥೆಯಿದೆ- ಹಿರೇಮಠರು ಶ್ರೇಷ್ಠರು ಚಿಕಮಠ ಸಾಲಿಮಠ, ಗುರು ಮಠ, ಮಧ್ಯಮ, ಮಠಪತಿ ,ಗಣಾಚಾರಿ ಕನಿಷ್ಠರು
11 ) ವೀರಶೈವರಲ್ಲಿ ರಾಮಾಯಣ ಮಹಾಭಾರತದ ಪುರಾಣಗಳಿವೆ -ಅಗಸ್ತ್ಯ ಮುನಿ ರಾವಣ ವಿಭೀಷಣ ಹಣಮಂತ ಮುಂತಾದದವರ ಉಲ್ಲೇಖವಿದೆ .
12 ) ವೀರಶೈವರಲ್ಲಿ-ಮಡಿ ಹುಡಿ ಎಂಜಲು ಮುಂತಾದವುಗಳ ಆಚರಣೆ ಇವೆ.
13 ) ವೀರಶೈವರಲ್ಲಿ-ಗುರುಗಳಾದವರು ದುಡಿಯದೆ ಇನ್ನೊಬ್ಬರ ಶ್ರಮದಿಂದ ಬಂದ ಆದಾಯದಲ್ಲಿ ಬದುಕಬೇಕು.(ಬಹುತೇಕರು)
14 ) ವೀರಶೈವರಲ್ಲಿ- ವರ್ಗ ವರ್ಣ ಲಿಂಗ ತಾರತಮ್ಯವಿದೆ . ಆಶ್ರಮ ಮಾನ್ಯತೆಯನ್ನು ಮಾಡುವ ವೀರಶೈವರು ಹಿಂದೂಗಳು.
15 ) ವೀರಶೈವರಲ್ಲಿ-ಸ್ಥಾವರ ಲಿಂಗದ ಪೂಜೆ ಅಗ್ರವಾಗಿರುತ್ತದೆ .ಸ್ಥಾವರ ಲಿಂಗದ ಮೇಲೂ ತಮ್ಮ ಕಾಲನ್ನು ಇಡುವ ಪದ್ಧತಿ ಪಂಚಪೀಠದವರಲ್ಲಿದೆ .
16 ) ವೀರಶೈವರಲ್ಲಿ-ಪಾಪ ಪುಣ್ಯ ಸ್ವರ್ಗ ನರಕದ ಪರಿಕಲ್ಪನೆಗಳಿವೆ.
17 ) ವೀರಶೈವರಲ್ಲಿ-ದೇಶದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಉಪಾಸನೆ ಮಾಡುತ್ತಾರಲ್ಲದೆ ಅಲ್ಲಿ ನಡೆಯುವ ಕುಂಭ ಮೇಳದಲ್ಲಿಯೂ ಭಾಗವಹಿಸುತ್ತಾರೆ.
18 ) ಯಜ್ಞ ಹವನ ಹೋಮ ನವಗ್ರಹ, ಸಮಾರಾಧನೆ ,ಜ್ಯೋತಿಷ್ಯ ವೃತ ನೇಮ ಮುಂತಾದ ಅನೇಕ ವೈದಿಕ ಪದ್ದತಿಗಳು ಇವೆ
19 ) ವೀರಶೈವರ ಇಷ್ಟಲಿಂಗ ಪೂಜೆಯು ; ಬೆಳ್ಳಿ ಚಿನ್ನದ ತಟ್ಟೆ ಧೂಪ ದೀಪ ಮತ್ತು ವೈದಿಕ ಮಂತ್ರಗಳಿಂದ ಕೂಡಿರುತ್ತದೆ .
20 ) ಪವಿತ್ರ ನದಿ ಸ್ನಾನ , ಗೃಹ ಶಾಂತಿ ,ಪೂಜೆಗೆ ಹಾಲು ಕುಂಬಳಕಾಯಿ ನಿಂಬೆ ಹಣ್ಣು ಹೆಚ್ಚುವುದು ,ಕುಂಕುಮ ಬಳಕೆಯಂತಹ ಆಚರಣೆಗಳಿವೆ .
21 ) ಗುರು ದಕ್ಷಿಣೆ ರೂಪದಲ್ಲಿ ಗುರುವಿಗೆ ಚಿನ್ನ ಬೆಳ್ಳಿಯ ಕಿರೀಟನೀಡಬೇಕು . ಸನಾತನ ಧರ್ಮದಲ್ಲಿನ ಬೆತ್ತ , ಪೂಜೆಯ ವೇಳೆಯಲ್ಲಿ ಘಂಟೆ ಜಾಂಗಟೆ ವಾದ್ಯಇವುಗಳು ವೀರಶೈವರ ಸಲಕರಣೆಗಳು .
22 )ವೀರಶೈವರಲ್ಲಿ ಗುರು ಶಿಷ್ಯರ ಸಂಬಂಧವು ದಾಸ್ಯತ್ವದಿಂದ ಕೂಡಿದ್ದು ಶ್ರೇಣೀಕೃತವಾಗಿದ್ದು ಅಸಮಾನತೆ ವ್ಯವಸ್ಥೆಯನ್ನು ಬಿಂಬಿಸುತ್ತದೆ.
23 ) ವೀರಶೈವ ವ್ಯವಸ್ಥೆಯಲ್ಲಿ ನಾಮಕರಣ ,ಗರ್ಭ ಸೀಮಂತ ಕಾರಣ ,ಮದುವೆ ಶವ ಸಂಸ್ಕಾರವು ಸಂಪೂರ್ಣ ವೈದಿಕಮಯವಾಗಿರುತ್ತದೆ
24 ) ವೀರಶೈವರಲ್ಲಿ-ವಿಧವೆಗೆ ಮರು ಮದುವೆ ನಿಷಿದ್ಧ ಆದರೆ ವಿಧುರ ಮಾತ್ರ ಮದುವೆ ಮಾಡಿಕೊಳ್ಳಬಹುದು
25 ) ) ವೀರಶೈವರಲ್ಲಿ ಒಂದೇ ಜಾತಿಯಲ್ಲಿರುವವರು. ವೀರಮಾಹೇಶ್ವರ ವರ್ಗಕ್ಕೆ ಸೇರಿದವರು ಮಾತ್ರ ಗುರುಗಳಾಗಬಹುದು
26 ) ವೀರಶೈವರಲ್ಲಿ -ಪೌರೋಹಿತ್ಯವಿದೆ ಉಚ್ಚ ನೀಚ ಅಸ್ಪ್ರಶ್ಯ ನೀತಿಯನ್ನು ಪಾಲಿಸುತ್ತಾರೆ
27 ) ಗುಡಿ ಸಂಪ್ರದಾಯದಲ್ಲಿ ಜಾತ್ರೆ ಕಳಶ ನಂದಿಕೋಲು ತೇರು ಉತ್ಸವ ಆಚರಣೆಗಳಿವೆ
28 ) ಶರನ್ನವರಾತ್ರಿ ಉಗಾದಿ ದೀಪಾವಳಿ ಹೀಗೆ ಎಲ್ಲ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ
ಇಂತಹ ಇನ್ನೂ ಅನೇಕ ಆಚರಣೆಗಳು ವೈದಿಕ ವೃತಗಳು ವೀರಶೈವರಲ್ಲಿ ಇರುವ ಕಾರಣ ವೀರಶೈವರು ಹಿಂದುಗಳು
–ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ.ಶಶಿಕಾಂತ ಪಟ್ಟಣ ಅವರು ಬೆಳಗಾವಿ ಜಿಲ್ಲೆ ರಾಮದುರ್ಗ ದವರು. ಈಗ ಪುಣೆಯಲ್ಲಿ ಇದ್ದಾರೆ. ಬಸವ ಅಂತರಾಷ್ಟ್ರೀಯ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಿ ವಚನಕಾರರ ಪರಿಚಯ, ವಚನ ವಿಶ್ಲೇಷಣೆ ಕುರಿತು ಅಕ್ಕನ ಅರಿವು ಗ್ರೂಪ್ ಮತ್ತು ಜೂಮ್ ಮೀಟ್ ಮೂಲಕ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಕುರಿತು ಲೇಖನ ಮಾಲೆ ಆರಂಭಿಸಿದ್ದಾರೆ. ಆಸಕ್ತರು ಈ ಲೇಖನಗಳ ಕುರಿತು ಚರ್ಚಿಸಲು ಇಚ್ಚಿಸುವವರು ಅವರ ದೂರವಾಣಿ ನಂ. ಸಂಪರ್ಕಿಸಬಹುದು.
ಡಾ.ಶಶಿಕಾಂತ ಪಟ್ಟಣ ಪುಣೆ
ದೂರವಾಣಿ ಸಂಖ್ಯೆ-95520 02338*
ಸಂಪಾದಕ