ಬದುಕೆಂಬ ಸಂತೆಯಲ್ಲಿ ಕಾಲಾತೀತನು

 

ಅಡವಿ ll ಯಂಗಡಿಯಕ್ಕ

ನಡುಗಡಲll ನೆಲೆಯಕ್ಕು

ತೊಡಕುವ llಮಾರಿಯ

ಅಪಮೃತ್ಯುll ಶಿವ ಭಕ್ತರ
ಒಡಲು llನಿನ್ನೊಡಲೆಂದು
ಮುಟ್ಟಲಮ್ಮವು ll ಕಾಣಾ ರಾಮನಾಥ

ಸಂಸಾರವೆಂಬ ಪರಿಕಲ್ಪನೆಯಲ್ಲಿ ಭವಾರಣ್ಯ ವನ್ನು ವಾಸ್ತವಿಕ ಬದುಕಿನ ಶೋಧದ ಮೂಲಕ ಎಚ್ಚರಿಸುವ ಮಾತುಗಳಿವು.
ಅಡವಿ ಯಂಗಡಿ ಎನ್ನುವುದೇ ಆಧ್ಯಾತ್ಮಿಕ ಮನೋಭಾವದ ಮನಸ್ಥಿತಿಯದು. ಈ ಭವವೆಂಬ ಅಂಗಡಿಯಲ್ಲಿ
ದ್ವೇಷ ಅಸೂಯೆ ಮೋಸಅ ನೀತಿಗಳಿಂದ ಕೂಡಿದ ಕಾಲ ವ್ಯಾಗ್ರನು ಅಡಗಿಹನು. ನಮ್ಮ
ವಾಸ್ತವ ಬದುಕನ್ನು ಮರೆಮಾಡುವ ಹಂತದಲ್ಲಿ ಭ್ರಮೆಯ ಬದುಕು ನಮ್ಮ ಬೆನ್ನಟ್ಟಿದಾಗ ಸಾವು-ಬದುಕಿನ
ಘರ್ಷಣೆಗಳು ತೀವ್ರವಾಗಿ ಕಾಡಲು ಪ್ರಾರಂಭಿಸುತ್ತವೆ.

ಸಂಸಾರದಲ್ಲಿ ಅಡ್ಡಿ-ಆತಂಕಗಳು ಹೆಚ್ಚಿ ಕಿರಿಕಿರಿಗಳು ಉಂಟಾದಾಗ ಮನುಷ್ಯ ಮೃತ್ಯುವಿಗೆ ಮೊರೆಹೋಗುತ್ತಾನೆ. ಜೇಡರ ದಾಸಿಮಯ್ಯನು ಹೇಳುವಂತೆ
ಬದುಕೆಂಬ ಸಂತೆಯಲ್ಲಿ ಕಾಲಾತೀತ ನು ಸಾವಿನ ಕಟುಸತ್ಯವನ್ನು ಎಚ್ಚರಿಸುತ್ತಾನೆ. ಭವವೆಂಬ ಅಹಂಕಾರವು ಬ್ರಮೆ ಯಾದಾಗ ಶಿವ ಸಾಮಿಪ್ಯದ ಪೂಜೆ ಅಂತರಂಗದ ಪೂಜೆಯಾಗಬೇಕು. ಶಿವಭಕ್ತರ ಒಡಲಲ್ಲಿ ಶಿವ ಪ್ರಭೆ ಕಾಣುವ ಅನುಭಾವದ
ಲೋಕವದು. ಒಡಲೆಂಬ ಕಾಯದಲ್ಲಿ ಶರಣರ ಸೂಳ್ ನುಡಿಗಳನ್ನು ಶಿವಮುಕ್ತ ಮನಸ್ಸಿನಿಂದ ಹಂಚಿಕೊಂಡಾಗಲೇ ಭಕ್ತಿಯ ಸಿದ್ಧಿಯನ್ನು ಕಾಣಲು ಸಾಧ್ಯ.
ಅಂತರಂಗ ಮತ್ತು ಬಹಿರಂಗ ಪೂಜೆಯಲ್ಲಿ ಶಿವಭಕ್ತರು ಒಡಲು ನಿನ್ನೊಡಲೆoದು ಹೇಳುವಲ್ಲಿ ಅನುಭಾವಿಕ ಮನಸ್ಥಿತಿಯ ಶಿವೈಕ್ಯ ಮನಸ್ಥಿತಿ ಯಾಗಿದೆ.ಶಿವ ಭಕ್ತರ ಸೂಳ್ನುಡಿಯ ಅನುಸಂಧಾನದಲ್ಲಿ ಶರಣರ ಸಾಮಿಪ್ಯವು ಮುಕ್ತವಾದ
ಪ್ರವೇಶವನ್ನು ಬಯಸುತ್ತದೆ.

ಡಾ.ಸರ್ವಮಂಗಳ ಸಕ್ರಿ
ರಾಯಚೂರು.

Don`t copy text!