ನಿಮ್ಮ ಆಹಾರ ನಿಮಗೆಷ್ಟು ಗೊತ್ತು – ಗೋಧಿ
(ವಾರದ ವಿಶೇಷ ಲೇಖನ)
ಸಾಮಾನ್ಯವಾದ ದವಸ ಧಾನ್ಯಗಳು ಅಕ್ಕಿ, ರಾಗಿ ಜೋಳ ಗೋಧಿ ಇವುಗಳು ಪ್ರಪಂಚದ ಬಹಳಷ್ಟು ಕಡೆಯ ದಿನ ನಿತ್ಯದ ಆಹಾಯವಾಗಿದೆ. ಪ್ರಪಂಚದಲ್ಲಿ ಅತೀ ಹೆಚ್ಚು ಬಳಸುವ ಧಾನ್ಯಗಳಲ್ಲಿ ಗೋಧಿಯು ಮೂರನೇ ಸ್ಥಾನವನ್ನು ಪಡೆದಿದೆ. ಅಕ್ಕಿ ಮತ್ತು ಜೋಳಕ್ಕಿಂತ ಹೆಚ್ಚಿನ ಪ್ರೋಟಿನ್ ಹೊಂದಿರುವ ಧಾನ್ಯವಾಗಿದೆ. ಗೋಧಿಯಲ್ಲಿ. ಪ್ರಪಂಚದಾದ್ಯಂತ 545 ಮಿಲಿಯನ್ ಹೆಕ್ಟೆರ್ ಪ್ರದೇಶದಲ್ಲಿ ಗೋಧಿಯನ್ನು ಬೆಳೆಯಲಾಗುತ್ತದೆ. ಗೋಧಿಯ 20 ವಿಧಗಳು 7 ತಳಿಗಳನ್ನು ನಾಉ ನೋಡಬಹುದಾಗಿದೆ. ಗೋಳಧಿಯ ಅತೀ ದೊಡ್ಡ ಉತ್ಪಾದಕರು ಚೀನಾ ಆದರೆ ಭಾರತವು ಎರಡನೇ ಸ್ಥಾನದಲ್ಲಿದೆ. ಗೋಧಿಯ ವೈಜ್ಞಾನಿಕ ಹೆಸರು ಟ್ರಿಟಿಕಮ್ ಭಾರತದಲ್ಲಿ ಟ್ರಿಟಿಕಮ್ ಎಸ್‌ಪಿಪಿ ಎನ್ನುತ್ತಾರೆ. ಹುಲ್ಲಿನ ರೂಪದಲ್ಲಿ ಬೆಳೆಯುವ ಗಿಡದ ಧಾನ್ಯವಾಗಿದೆ. ಒಂದು ನೂರು ಗ್ರಾಂ ಗೋಧಿಯಲ್ಲಿ 340 ಕ್ಯಾಲರಿ, ೧೧% ನೀರು, 13.2 ಗ್ರಾಂ ಪ್ರೋಟಿನ್ 72 ಗ್ರಾಂ ಕಾರ್ಬೋಹೈಡ್ರೆಡ್, 0.4ಗ್ರಾಂ ಸಕ್ಕರೆ, 10.7 ಗ್ರಾಂ ಫೈಬರ್, 2.5ಗ್ರಾಂ ಫ್ಯಾಟ್ ಇರುತ್ತದೆ. ಇದರೊಂದಿಗೆ ಕ್ಯಾಲ್ಶಿಯಮ್ ಕೂಡ ಇರುತ್ತದೆ ಗೋಧಿಯಿಂದ ರವಾ ಮೈದಾಗಳನ್ನು ಮಾಡುತ್ತಾರೆ. ರವಾ ಉಪಯೋಗ ಹಾನಿಕರವಲ್ಲ, ಆದರೆ ಮೈದಾದ ಅತೀ ಉಪಯೋಗ ಆರೋಗ್ಯಕ್ಕೆ ಹಾನಿಕರ
ಕಾರ್ಬೋಹೈಡ್ರೆಡ್ ಇರುವ ಕಾರಣ ನಿಧಾನವಾಗಿ ಜೀರ್ಣವಾಗುವ ಕಾರಣದಿಂಧ ರಕ್ತದ ಸಕ್ಕರೆಯ ಪ್ರಮಾಣ ಹೆಚ್ಚಾಗದಂತೆ ಕಾಪಾಡುತ್ತದೆ. ಗೋಧಿಯಲ್ಲಿ ವಿಟಮಿನ್ ಬಿ ಮತ್ತು ಇ ಜೊತೆಗೆ ಕಬ್ಬಿಣ, ಜಿಂಕ್ , ಸಲ್ಫರ್, ಮ್ಯಾಂಗನೀಸ್, ಸಿಲಿಕಾನ್, ಕ್ಲೋರಿನ್, ಆರ್ಸೆನಿಕ್‌ನ ಅಂಶಗಳೂ ಇವೆ.
ನಿಯಮಿತವಾದ ಗೋಧಿಯ ಬಳಕೆ ಟೈಪ್ 2 ಮಧುಮೇಹದಿಂದ ಕಾಪಾಡುತ್ತದೆ. ಮಹಿಳೆಯರ ಗ್ಯಾಸ್ಟ್ರೋ ಇಂಟಸ್ಟೈನ್ ಆರೋಗ್ಯವನ್ನು ಕಾಪಡುತ್ತದೆ, ಕರೋನರಿ ಸಮಸ್ಯೆಗಳಿಂದ ಕಾಪಾಡುತ್ತದೆ. ದೇಹದ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ತೂಕದ ಹೆಚ್ಚಳವನ್ನು ತಡೆಯುತ್ತದೆ, ಸತತವಾಗಿ ಕಾಣಿಸಿಕೊಳ್ಳುವ ಸೋಂಕನ್ನು ತಡೆಯುತ್ತದೆ, ಬ್ರೆಸ್ಟ್ ಕ್ಯಾನ್ಸರ್‌ನ್ನು ತಡೆಗಟ್ಟಲು ಸಹಾಕವಾಗಿದೆ. ಇಷ್ಟೆ ಅಲ್ಲದೇ ಸಣ್ಣ ಮಕ್ಕಳಲ್ಲಿ ಬರುವ ಅಸ್ತಮಾವನ್ನು ತಡೆಗಟ್ಟುತ್ತದೆ ಮತ್ತು ಋತುಬಂಧದ ನಂತರದಲ್ಲಿ ಮಹಿಳೆಯರ ಆರೋಗ್ಯವನ್ನು ಕಾಪಡುತ್ತದೆ.
ಇಂದಿನ ದಿನದಲ್ಲಿ ಗ್ಲುಟೇನ್ ಇರುವುದರಿಂದ ಗೋಧಿಯನ್ನು ಹೆಚ್ಚು ಬಳಸಬಾರದು ಎಂದರೂ ಕೂಡ ಗೋಧಿ ಪ್ರಪಂಚದಲ್ಲಿ ಹೆಚ್ಚು ಬೆಳೆಯುವ ಮತ್ತು ಬಳಸುವ ಪದಾರ್ಥವಾಗಿದೆ
–ಮಾಧುರಿ ಬೆಂಗಳೂರು