ಸಂತ್ರಸ್ತ ಮಕ್ಕಳ ಭವಿಷ್ಯ ಮುಖ್ಯ -ತಪ್ಪು ಯಾರೇ ಮಾಡಿರಲಿ ಶಿಕ್ಷೆಯಾಗಲಿ
ಎರಡು ಮೂರೂ ದಿನಗಳಿಂದ ಟಿವಿ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿರುವ ಮುರುಘಾಶ್ರೀಗಳ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಬಸವ ಪರಂಪರೆಯ ಶ್ರೀ ಮಠದಲ್ಲಿ ನಡೆದಿರುವ ಅಧಿಕಾರದ ಘರ್ಷಣೆ ಎಲ್ಲವೂ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಡಾ ಮುರುಘಾ ಶರಣರ ಮೇಲಿನ ಆರೋಪ ಸುಳ್ಳು ಎಂದು ಅವರು ಸಿದ್ಧಪಡಿಸಲಿ ಅವರು ಸಂಪೂರ್ಣ ನ್ಯಾಯಾಂಗ ತನಿಖೆಗೆ ಮುಂದಾಗಲಿ . ಮುರುಘಾ ಶರಣರು ತಪ್ಪು ಮಾಡಿಲ್ಲವೆಂದರೆ ಅವರು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಅವರ ವಿರುದ್ಧ ಪಿತೂರಿ ಷಡ್ಯಂತ್ರ ನಡೆದಿದ್ದರೆ ಮಾಡಿದ್ದವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಿ . ಹಾಗಿದ್ದಲ್ಲಿ ಇಡೀ ಬಸವ ಭಕ್ತರು ಅವರೊಂದಿಗೆ ನಿಲ್ಲುತ್ತೇವೆ .
ಒಂದು ವೇಳೆ ನ್ಯಾಯಾಂಗ ತನಿಖೆಯಲ್ಲಿ ಶ್ರೀಗಳು ಮತ್ತು ಎಲ್ಲಾ ಆರೋಪಿಗಳು ತಪ್ಪಿಸ್ಥರು ಎಂದಾದರೆ ಬಸವ ಭಕ್ತರು ಇದನ್ನು ಖಂಡಿಸಬೇಕಾಗುತ್ತದೆ. ನ್ಯಾಯ ಕಾನೂನು ಎಲ್ಲರಿಗೂ ಸಮಾನ .ಸಂತ್ರಸ್ತ ಮಕ್ಕಳ ಭವಿಷ್ಯ ಮುಖ್ಯ -ತಪ್ಪು ಯಾರೇ ಮಾಡಿರಲಿ ಶಿಕ್ಷೆಯಾಗಲಿ. ಮಾನವ ಹಕ್ಕುಗಳು ಅದರಲ್ಲಿಯೂ ಮುಗ್ಧ ಮಕ್ಕಳ ಮೇಲೆ ಅನ್ಯಾಯವಾಗುವದನ್ನು ಯಾರು ಸಹಿಸಲಾರರು. ಪ್ರಕರಣ ಪೋಕ್ಸೋ ಅಡಿಯಲ್ಲಿ ದಾಖಲಾದ ಕಾರಣ ಆರೋಪಿಗಳು ತಮ್ಮ ಪಾತ್ರವಿರದ ಬಗ್ಗೆ ಅಥವಾ ಅಂತಹ ಕೃತ್ಯ ತಾವು ಮಾಡಿಲ್ಲವೆಂದು ಸಾಬೀತು ಪಡಿಸಲಿ.
ಬಸವರಾಜನ್ ,ರಶ್ಮಿ ಮುರುಘಾ ಶ್ರೀಗಳ ಅಧಿಕಾರ ತಿಕ್ಕಾಟದಲ್ಲಿ ಎಳೆಯ ದಲಿತ ಕಂದಮ್ಮಗಳ ಭವಿಷ್ಯ ಸ್ಮಶಾನವಾಗದಿರಲಿ. ನೆಲದ ಕಾನೂನಿನಂತೆ ಶ್ರೀಗಳ ಮತ್ತು ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕಾನೂನು ತನಿಖೆ ಮತ್ತು ಕ್ರಮ ಕೈಗೊಳ್ಳಬೇಕು .ಒಂದು ವೇಳೆ ಶ್ರೀಗಳು ತಪ್ಪಿಸ್ಥರಲ್ಲವೆಂದು ಸಿದ್ಧವಾದರೆ ಇಂತಹ ಕುತಂತ್ರವನ್ನು ಯಾರೇ ಮಾಡಿರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಿ. ಪೊಲೀಸರು ಲ್ಲಿ ನಿರ್ಭಿತಿಯಿಂದ ತಮ್ಮ ಕಾರ್ಯ ನಿರ್ವಹಿಸಲಿ.
ಮಾನವ ಮತ್ತು ಮಕ್ಕಳ ಹಕ್ಕುಗಳ ಹೋರಾಟಕ್ಕೆ ಮುಂದೆ ಬಂದಿರುವ ಮೈಸೂರಿನ ಒಡನಾಡಿ ಸಂಸ್ಥೆಯವರಿಗೆ ಬಸವ ಭಕ್ತರ ಅನಂತ ಶರಣು.
–ಡಾ ಶಶಿಕಾಂತ ಪಟ್ಟಣ
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭೆ ,
ಅಧ್ಯಕ್ಷರು ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ