ಗೆಲುವು ನಿನದಾಗಲಿ

ಗೆಲುವು ನಿನದಾಗಲಿ

ನಿನ್ನ ಹೋರಾಟದ ಹಾದಿ
ಸುಲಭವಲ್ಲ ಮಗಳೆ

ಧರ್ಮದ ಗಲಭೆಗಳಿಗೆ
ಎಲ್ಲಾ ಪಕ್ಷದ ಪ್ರತಿಕ್ರಿಯೆಗಳಿವೆ
ಹಿಜಾಬ್ ಹಲಾಲ್ ಲೌಡಿಸ್ಪೀಕರ
ಈದ್ಗಾ ಮೈದಾನ…!
ಹೆಣ್ಣು ಮಗುವಿನ ಮಾನ
ಯಾವ ಲೆಖ್ಖ…?

ಸಾಮಾನ್ಯನಿಂದ
ದೌರ್ಜನ್ಯವಾದರೆ
ಹೆಣ್ಣು ಕುಲವೆ ಶಿಕ್ಷೆ
ನೀಡಲು ಮುಂದೆ
ಸಂಘ ಸಂಸ್ಥೆಗಳ ಬೆಂಬಲ
ಪ್ರತಿಭಟನೆ
ಬೀದಿಯಲ್ಲಿ ಮೆರವಣಿಗೆ
ಸಂತಾಪ ಹೇಳಿಕೆ
ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ ….!!

ನಿನ್ನದು ಕಾವಿಯ ವಿರುದ್ಧ
ಆರೋಪ
ನಂಬುವುದಿಲ್ಲ ನಿನ್ನ
ನೀ ನುಡಿವ ಸತ್ಯವ
ದನಿ ಎತ್ತುವುದಿಲ್ಲ
ಬೆನ್ನಿಗೆ ನಿಂತು ಧೈರ್ಯ ಹೇಳುವುದಿಲ್ಲ
ಚಳುವಳಿ ಹರತಾಳಗಳು
ನಡೆಯುವುದಿಲ್ಲ
ನಿನ್ನಿಂದ ಯಾವ ಪಕ್ಷಕ್ಕೂ
ಓಟಿನ ಲಾಭವಿಲ್ಲ….!

ನಾಯಿಯ ಸಾವಿಗಿಲ್ಲಿ
ಕಂಬನಿಯಿದೆ
ಹೆಣ್ಣಿನ ಮಾನಪ್ರಾಣಕ್ಕಿಲ್ಲ
ಹತ್ತಾರು ಹುನ್ನಾರಗಳ ಮಾಡಿ
ಬಾಯಿ ಮುಚ್ಚಿಸಬಹುದು ನಿನ್ನ
ಆಮಿಷಗಳ ಬೆಲೆ ಬೀಸಬಹುದು
ಜೀವ ಭಯ ಹುಟ್ಟಿಸಬಹುದು

ಹೆದರಿ ನಿನ್ನ ಕೈಯಾರೆ
ಸತ್ಯ ಸಾಯಿಸಬೇಡ ಮಗಳೆ
ಪಾಪಕ್ಕೆ ಹುರುಳಾಗಿ ಹರಿದುಬಿಡು
ಆಷಾಢಭೂತಿಗಳ ಮುಖವಾಡ
ಕಳಿಚಿಬೀಡು…
ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಗೆದ್ದು ಬಾ ಮಗಳೇ
ಈ ಸಂಘರ್ಷವನು ಗೆಲುವು
ನಿನ್ನದಾಗಲಿ…..

 


-ಡಾ. ನಿರ್ಮಲ ಬಟ್ಟಲ, ಬೆಳಗಾವಿ

Don`t copy text!