ಕವಿ ನಮನ- ಗುರುಗಳೆಂದರೆ ಮಾಂತ್ರಿಕರೇ!!??
ಚಿಗುರೊಡೆಯಲು ಚೈತನ್ಯ ನೀಡುವರು
ಹೂವಾಗಿ ಹರಡಲು ಹುಮ್ಮಸ್ಸು ಹೂಡುವರು,
ಬೀಳಲು ಬಿಡದೇ ಎಳೆ ಎಳೆಯಾಗಿ ಎಬ್ಬಿಸುವರು
ಗುರುಗಳೆಂದರೆ ಮಾಂತ್ರಿಕರೇ?
ಬರಡು ಭೂಮಿಯಲೂ ಬೆಳೆಯುವವರು!!
ಪಠ್ಯವನ್ನಷ್ಟೇ ಅಲ್ಲ ಬಾಳಿನ ಪಾಠ ಕಲಿಸುವರು
ಪರೀಕ್ಷೆಯಂತೆ ಬದುಕಿನ ಸಿದ್ಧತೆ ಮಾಡಿಸುವರು,
ತಾವು ಎಡವಿದ ಸಂಧಿಗಳಿಂದ ಸಂರಕ್ಷಿಸುವರು
ಗುರುಗಳೆಂದರೆ ಮಾಂತ್ರಿಕರೇ?
ಕನಸುಗಳ ನನಸುಗೊಳಿಸುವ ನೇಕಾರರು!!
ಸತ್ಕಾರ, ಸಂಸ್ಕಾರ, ಸನ್ನಡತೆಯ ಸಂಸ್ಧಾಪಕರು
ಸಮ್ಮಾನದಿ, ಸಹಬಾಳ್ವೆ ಸಾಗಿಸುವವರು,
ಸಂಬಳಕ್ಕಲ್ಲ, ಸುಧಾರಣೆಗೆಲ್ಲಾ ಶ್ರಮಿಸುವರು
ಗುರುಗಳೆಂದರೆ ಮಾಂತ್ರಿಕರೇ?
ಮೃಗ ಮನಗಳನ್ನೂ ಮೃದುವಾಗಿಸುವರು!!
ಭೇದ ಭಾವಗಳಿಲ್ಲದೇ ಬೋಧಿಸುವವರು
ಪ್ರತಿಭೆಗಳನ್ನು ಪರಿಪಕ್ವಗೊಳಿಸುವರು,
ಪರಿಶ್ರಮ, ಪರಿವರ್ತನೆಗಳ ಪೋಷಕರು!!
ಗುರುಗಳೆಂದರೆ ಮಾಂತ್ರಿಕರೇ?
ಹೆತ್ತು ಹೊತ್ತವರಿಗಿಂತ ಹತ್ತಿರವಾದವರು!!
–ಫರ್ಹಾನಾಜ್. ಮಸ್ಕಿ
ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು ನೆಲಮಂಗಲ