ಗುರು ನಮನ
ಜ್ಞಾನ ದೀವಿಗೆ ಹಿಡಿದು
ದೂರದಲಿ ಬರುತಿರುವ
ಶತಮಾನಗಳ ಶಾಪ
ಕತ್ತಲೆಯ ಕಳೆಯಲಿಕೆ
ಅವಿವೇಕದ ಕುರುಡ
ಕಣ್ಣುಗಳ ಬೆಳಗಲಿಕೆ
ಅಜ್ಞಾನದ ಕರಿಯ
ಪರದೆಯನು ಸರಿಸಿ
ವಿನಯ ಪ್ರೀತಿಗಳ
ಬೆಳಕನು ಬೀರಿ
ಸ್ನೇಹ ವಿಶ್ವಾಸಗಳ
ಕಿರಣಗಳ ಸೂಸಿ
ಬಾಳ ಬಟ್ಟೆಗೆ ಮಾರ್ಗದರ್ಶಿಯಾಗಿ
ಜೇವನದ ಸಾಧನೆಗೆ
ನಾಂದಿಯಾಗಿ
ಚೈತನ್ಯ ತುಂಬಿರುವ
ಕಲಶವಾಗಿ..
ನಮ್ಮ ಗುರು ನಮಗಾಗಿ …!
ನಮನಗಳು ಗುರು ಚರಣಗಳಿಗೆ..🙏🙏
–ಹಮೀದಾಬೇಗಂ ದೇಸಾಯಿ ಸಂಕೇಶ್ವರ