ಮರೀಲ್ಯಾಂಗ…

 

 

ಮರೀಲ್ಯಾಂಗ…

ಹೋದಾಗೊಮ್ಮೆ ಅಜ್ಜಿ ಊರಿಗೆ
ಹಣಿಕಿ ಹಾಕ್ತೀನಿ ಹಿತ್ತಲ ಖೋಲ್ಯಾಗ

ನೋಡಿಕೋತ ಅತ್ತ ಇತ್ತ
ಮೆಲ್ಲಗೆ ಒಳಗ ಹೊಕ್ಕೇಬಿಡ್ತೀನೀ

ಎಂಥಾ ಭಾರೀ ಭಾರೀ ಸಾಮಾನ
ನೋಡಿ ಬೆಪ್ಪ ಬೆರಗಾಗ್ತೇನಿ

ದೊಡ್ಡ ಹಂಡೆತಪೇಲಿ ರಂಜಣಗಿ
ಖಾರುಕಲ್ಲಬೀಸುಕಲ್ಲಛಂದಕೊಡಮಿಗಿ

ಸಣ್ಣುದೊಡ್ಡುಹಾರಿ ಹೂರಣ ಅರಿಯುಕಲ್ಲ
ಗೂಟಕಹಾಕಿದಸಿಂಬೆಬೆತ್ತದಬುಟ್ಟಿ..

ಮೂಲೀಗಿ ಬಿದ್ದೈತಿಕಡಗೋಲು
ಮುರದಬಿದ್ದೈತಿ ಕೆಂಪಾನ ಲ್ಯಾಂಪ್..

ಹೋಳಿಹುಣ್ಣಿವಿ ರಣಾಲಗೀತೂಗೇತ
ಗ್ವಾಡಿಗೀ ಕುಂತೈತಿ ದೊಡ್ಡ ಗಂಗಾಳ..

ನನ್ನ ನೋಡಿಗೊತ್ತಿಲ್ಲ ಅವುಖುಷಿಪಟ್ಟಾವೋ
ನನ್ನ ಕಣ್ತುಂಬ ಕಣ್ಣೀರಮಾತ್ರ ತುಂಬ್ಯಾವೋ….

ಹಮೀದಾ ಸಂಕೇಶ್ವರ

Don`t copy text!