ಶುಚಿ ರುಚಿ ಮನೆ ಊಟ ಅಮ್ಮನ ಅಡುಗೆಯ ಕೈ ರುಚಿ, ಮನಸ್ ಪೂರ್ತಿ ತೃಪ್ತಿ

ಶುಚಿ ರುಚಿ ಮನೆ ಊಟ

ಅಮ್ಮನ ಅಡುಗೆಯ ಕೈ ರುಚಿ, ಮನಸ್ ಪೂರ್ತಿ ತೃಪ್ತಿ

ತೊಟ್ಟಿಲು ತೂಗುವ ಕೈ ಜಗತ್ತನ್ನ ಆಳಬಲ್ಲಳು. ಮಹಿಳೆ ಇಂದು ಕುಟುಂಬವನ್ನು ಸರಿದೂಗಿಸುತ್ತ ಸಾಮಾಜದ ಅನೇಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ತಾನು ಅಬಳಲು ಅಲ್ಲ ಸಬಲಳು ಎಂಬುದನ್ನು ತೋರಿಸುತ್ತಿದ್ದಾಳೆ.

ಮಸ್ಕಿಯ ಸುಮನ್ ಸಿಂಗ್ ಎಂಬ ಮಹಿಳೆಯ ಯಶೋಗಾಥೆ ಇತರರಿಗೆ ಪ್ರೇರಣೆದಾಯಕವಾಗಿದೆ.

ಸುಮನ್ ಸಿಂಗ್ ಮೂಲತಃ ರಾಯಚೂರಿನವರು. ಓದಿದ್ದು 7 ತರಗತಿ. ಮದುವೆಯಾಗಿ ಮಸ್ಕಿ ಬಂದರು. ಸುಮನ್ ಅವರ ಪತಿ ಶಿವಕುಮಾರ್ ಸಿಂಗ್ ಕಿಲ್ಲಾ ಜೀವನ ನಡೆಸಲು ಅನೇಕ ಏರು ಪೇರುಗಳನ್ನು ದಾಟಬೇಕಾಯಿತು. ಕೂಡು ಕುಟುಂಬ. ಕುಟುಂಬ ನಿರ್ವಹಣೆಗಾಗಿ ಜೀವನವನ್ನೆ ಸವಿಸಿದರು. ಮಕ್ಕಳಿಬ್ಬರ ಶಿಕ್ಷಣಕ್ಕಾಗಿ ಶಿವಕುಮಾರ ಮತ್ತು ಸುಮನ್ ಹಗಲಿರುಳು ದುಡಿದು ಇತರರಿಗೆ ಮಾದರಿಯಾಗಿದ್ದಾರೆ.

ಎಲ್ಲಾ ಹೆಣ್ಣು ಮಕ್ಕಳಂತೆ ಸುಮನ್ ಮದುವೆಯಾದ ನಂತರ ಮನೆಯ ನಿರ್ವಹಣೆಗೆ ಸೀಮಿತರಾಗಿದ್ದರು. ದಿನಕಳೆದಂತೆ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಯಿತು. ಆಗ ಹೊಸ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.
ಸುಮನ್ ಅವರು ತಮ್ಮ ಮನೆಯಲ್ಲಿ ತಾಜ ಊಟ ತಯಾರಿಸಿ ಬ್ಯಾಂಕ್ ನೌಕರರಿಗೆ, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಅವರ ಕರ್ತವ್ಯಕ್ಕೆ ಹೋಗುವ ಮೊದಲೇ ಅಡುಗೆ ತಯಾರಿಸಿ ಅವರ ಮನೆಗಳಿಗೆ ಕಳಿಸುತ್ತಾರೆ.  ಖಾನವಳಿಯಲ್ಲಿ ಊಟ ಮಾಡುವದಕ್ಕಿಂತ ಕ್ಯಾಟರಿಂಗ್ ಊಟ ಹೆಚ್ಚು ಪ್ರಚಲಿತವಾಗಿದೆ.

ಯಾರ ಮನೆಯಲ್ಲಾದರೂ ವಿಶೇಷ ಕಾರ್ಯಕ್ರಮಗಳಿದ್ದು ೨೦೦ -೩೦೦ ಜನರಿಗೆ ಬೇಕಾಗುವ ವಿಶೇಷ ಅಡುಗೆ ತಯಾರಿಸಿ ಕೊಡುತ್ತಾರೆ.
ಸಂಘ ಸಂಸ್ಥೆಗಳ ಸಭೆಗಳಿಗೆ ಅವರು ಬಯಸಿದ ಊಟ ತಯಾರಿಸಿ ಕಳಿಸುತ್ತಾರೆ.

ಸುಮನ್ ಅವರು ಅಡುಗೆ ಮಾಡಿ ಕಳಿಸುವ ಈ ಕೆಲಸದಿಂದ ತಾವೊಬ್ಬರೆ ಬದುಕುತ್ತಿಲ್ಲ. ಅವರ ಗರಡಿಯಲ್ಲಿ ೪-೬ ಕುಟುಂಬಗಳಿವೆ. ಅವರಿಗೆಲ್ಲ ಅನ್ನಪೂರ್ಣೇಶ್ವರಿ ಆಗಿದ್ದಾರೆ ಸುಮನ್ ಅವರು.

ಮತ್ತೇಕೆ ತಡ. ನಿಮ್ಮ ಮನೆಯಲ್ಲಿ ವಿಶೇಷ ಕಾರ್ಯಕ್ರಮ ಇದ್ದರೆ ಸುಮನ್ ಅವರಿಗೆ ಹೇಳಿಬಿಡಿ. ನೀವು‌ ನಿಶ್ಚಿಂತೆಯಿಂದ ಇದ್ದು ಬಿಡಿ. ನಿಮ್ಮ ಮನೆಗೆ ಶುಚಿ ರುಚಿಯಾದ ಊಟ ರಡಿ.

ಸಂಪರ್ಕ ಕೊಂಡಿ

9945264195-ಸುಮನ್ ಸಿಂಗ್

9986261628-ಶಿವಕುಮಾರ ಸಿಂಗ್

Don`t copy text!