ಸ್ನೇಹ ಹಸಿರು ತೋರಣ
ಎಂದೋ ಮೂಡಿದ ಸ್ನೇಹ ಇಂದಿನವರೆಗೂ
ಉಳಿಯಿತೆಂದರೆ ಅದು ಹೇಗೆ
ಜಾತಿ,ಮತ ಕುಲ ಗೋತ್ರಗಳನ್ನು
ಕೇಳದ ಈ ಸ್ನೇಹದ ಪರಿಯಾದರೂ ಏನು..?
ತನುಗಳು ಬೆಸೆಯದಿದ್ದರೂ
ಮನಗಳು ಗಾಢ ಬೆಸೆದು ನಿಂತು
ಅನುಪಮ ಬಾಂಧವ್ಯದ ಅನಾವರಣ
ಮೂಡಿಸಿದ್ದಿದ್ದಾದರೂ ಎನಿತು…?
ಕೇವಲ ಫೋನ್ ಕರೆಗಳಲ್ಲೇ
ಅದೇಷ್ಟೋ ನಂಬಿಕೆ ಭರವಸೆ
ಕಷ್ಟ ಸುಖಗಳಲ್ಲಿ ಸ್ಪಂದಿಸುವಿಕೆ
ಆರೋಗ್ಯದ ಕಾಳಜಿ ವಹಿಸುವ
ಒಲವಿನ ಸ್ನೇಹಕ್ಕೆ ಏನಂತು ಹೇಳಲಿ…
ಪ್ರೀತಿಸಿದವರು ಮೋಸ ಮಾಡಬಹುದು
ಆದರೆ ಜೀವಕ್ಕೆ ಜೀವ ಕೊಡುವ
ಎಲ್ಲಾ ಸಂಬಂಧಗಳನ್ನು ಮೀರಿದ
ಈ ಸ್ನೇಹ ನನ್ನ ಪಾಲಿಗೆ ಎಂದೆಂದಿಗೂ
ನಿತ್ಯ ನೂತನ ಹಸಿರುತೋರಣ
–ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ