ಗುಪ್ತ ಶರಣ

ಗುಪ್ತ ಶರಣ

ದೂರ ದೇಶದಿಂದ
ಬಂದ ಬಸವ ಭಕ್ತ
ಇಸ್ಲಾಮಿಯನಾದರೂ
ಶರಣ ತತ್ವವನು ಒಪ್ಪಿ
ಅಪ್ಪಿ ಬದುಕಿದವರು..
ಎನಗಿಂತ ಕಿರಿಯರಿಲ್ಲ
ಎಂಬುದ ನಂಬಿದ ಮಹಿಮರು…
ಬಸವಣ್ಣನವರ
ಮಹಾಮನೆಯ ಪ್ರಸಾದ
ಕುಂಡದ ಸನಿಹವಿದ್ದು
ಒಕ್ಕುದದ ಮಿಕ್ಕಿದ
ಸೇವಿಸಿ ಬದುಕಿದವರು…
ಅಲ್ಲಮರ ದರುಶನಕೆ
ಹನ್ನೆರಡು ವರುಷಗಳ ಕಾಲ
ಕಾದು ಕುಳಿತವರು..
ಅಲ್ಲಮರನು ಸಕಲ ದೈವ ,
ಗುರುವಾಗಿ ತಿಳಿದವರು;
ಬದುಕು ಸಾರ್ಥಕ ಗೊಳಿಸಿ
ಅವರೆದುರೇ ಬಯಲಾದವರು…
ತಮಗೆ ಮರುಳ ಎನ್ನಲೇ
ಸ್ವಯಂ ಶಿವನೆನ್ನಲೇ
ಮಹಾಮನೆಯ ಮಹಾಶರಣ
*ಮರುಳಶಂಕರದೇವರೇ*
ನಿಮ್ಮ ಪಾವನ ಸನ್ನಿಧಿಗೆ ಕೋಟಿ ಶರಣು..🙏

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!