ಮೈಸೂರು ದಸರಾ 🐘

🐘 ಮೈಸೂರು ದಸರಾ 🐘

ಮೈಸೂರು ದಸರಾ ಹಬ್ಬದ ಸಂಭ್ರಮ
ನೋಡಲು ಕಣ್ಣೆರಡು ಸಾಲದ ವಿಹಂಗಮ
ಭಕ್ತರೆಲ್ಲ ಪಠಿಸುತಿಹೆ ದುರ್ಗಾದೇವಿಯ ನಾಮ
ಮೊಳಗಿದ ಕನ್ನಡನಾಡಹಬ್ಬದ ಪರಂಧಾಮ

ಅವತರಿಸಿಹಳು ದುರ್ಗಿಯು ನವ ಅವತಾರಗಳಲ್ಲಿ
ನವ ರಕ್ಕಸರ ಕೊಂದು ವಿಜಯೋತ್ಸವ ವಿಜ್ರಂಭಿಸುತಲಿ
ಮೈಸೂರಿನ ರಾಜಮನೆತನದ ಮನೆದೇವತೆಯಾಗಿ ಪೂಜಿಪಳಲ್ಲಿ
ಚಾಮುಂಡೆಶ್ವರಿಯಾಗಿ ಕಂಗೊಳಿಸಿಹಳು ಆನೆಅಂಬಾರಿಯಲ್ಲಿ

ಧಳಕು ಬೆಳಕಿನ ಸದ್ದುಗದ್ದಲ ಚಾಮುಂಡಿಯ ಬೆಟ್ಟದಲಿ
ಭಕ್ತಜನಸಾಗರ ಸೇರಿಹರು ದೇವಿಯ ಪೂಜಾರ್ಪಣೆಯಲ್ಲಿ
ಮನರಂಜಿಸುವ ಜಂಬೂಸವಾರಿ ಮೆರವಣಿಗೆ ನೋಡುವಲ್ಲಿ
ವಿಧವಿಧ ಪ್ರತಿಭೆ ತೋರಿಹರು ಕಲಾಮೇಳದ ಕಲಾವಿಧರಲ್ಲಿ

ಬಣ್ಣಬಣ್ಣದ ವಿದ್ಯುತ್ ಅಲಂಕಾರ ಅರಮನೆಯ ಸಿರಿಯಲ್ಲಿ
ನಾಡ ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮ ಜರಗುತಲಿ
ವಿದೇಶಿಗರನ್ನೂ ಸ್ವಾಗತಿಸುತಿಹೆ ಮೈಸೂರಿನ ಮೆರಗಿನಲ್ಲಿ
ಕಂಡರು ಜಾತ್ರೆ ಮೇಳಗಳು ದಸರಾ ಹಬ್ಬದ ವಿಶೇಷತೆಯಲ್ಲಿ

✍️ ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

Don`t copy text!