ನಾವು ತಲೆಯೆತ್ತಿ ಮಾತಾಡ್ತೀವಿ, ಅವರು ತಲೆ ತಗ್ಗಿಸಿ ಮಾತಾಡತ್ತಾರೆ
(ಗಮನಿಸಿ ನೋಡಿ. ಮೇಲಿನ ಚಿತ್ರ ಮಾತಾಡುತ್ತದೆ.)
ಯುದ್ಧದಲ್ಲಿ ಸೋತ ಪಾಕ್ ಜೊತೆ ಮಾತುಕತೆಗೆ ಹೊರಟ ಶಾಸ್ತ್ರಿಯವರನ್ನು ಅದೊಬ್ಬ ಪತ್ರಕರ್ತ ಕೀಟಲೆಯ ದನಿಯಲ್ಲಿ ಕೇಳಿದ್ದ, ಆಪ್ ಉನಸೇ ಕೈಸೇ ಬಾತ್ ಕರೇಂಗೆ? (ನೀವು ಅವರ ಹತ್ತಿರ ಹೇಗೆ ಮಾತಾಡ್ತೀರಿ? ).
ಆ ದನಿಯಲ್ಲೇ ಕುಹಕವಿತ್ತು. ಆರೂ ಕಾಲು ಫೂಟು ಎತ್ತರದ ಅಜಾನುಬಾಹು ಅಯೂಬ್ ಖಾನನ ಎದುರು ಕುಬ್ಜ ದೇಹದ ನೀವೇನು ಮಾಡಬಲ್ಲಿರಿ ಎಂಬ ದಾರ್ಷ್ಟ್ಯ…..
ತಮ್ಮ ಎಂದಿನ ಆತ್ಮ ವಿಶ್ವಾಸದ ದನಿಯಲ್ಲೇ ಶಾಸ್ತ್ರಿಯವರ ಬಾಯಿಂದ ಸಿಡಿಗುಂಡಿನಂತಹ ಮಾತೊಂದು ಚಿಮ್ಮಿತ್ತು.
ಹಮ್ ಸರ್ ಉಠಾಕರ್ ಬಾತ್ ಕರೇಂಗೆ, ಔರ್ ವೋ ಸರ್ ಝುಕಾಕರ್…..
ನಾವು ತಲೆಯೆತ್ತಿ ಮಾತಾಡ್ತೀವಿ, ಮತ್ತವರು ತಲೆ ತಗ್ಗಿಸಿ ಮಾತಾಡ್ತಾರೆ ಅಂತಂದರು.
ಎಲ್ಲಾ ಅರ್ಥಗಳಲ್ಲಿಯೂ ಭಾರತದ ಭಾವವನ್ನು ಧ್ವನಿಸಿದ ದಿಟ್ಟ ಉತ್ತರ ನೀಡಿದ ನಾಯಕ ಲಾಲ ಬಹದ್ದೂರ್ ಶಾಸ್ತ್ರಿ.
(ಚಿತ್ರ ನೋಡಿ, ಶಾಸ್ತ್ರಿಯವರ ಎದುರು ತಲೆ ತಗ್ಗಿಸಿನಿಂತ ಅಯೂಬ್ ಖಾನ್)
ಬಹಳ ದೊಡ್ಡ ಗಾಂಧೀವಾದಿ ಅವರು. ಸರಳತೆ ಮತ್ತು ಖಾದಿ ಅವರ ಜೀವನ ಮೌಲ್ಯಗಳು, ಗಾಂಧೀಜಿ ಶಾಸ್ತ್ರಿ ಅವರ ಬದುಕಿನ ಆದರ್ಶ.
ಶಾಸ್ತ್ರಿಯವರಿಗೆ ಅಹಿಂಸೆ ಮತ್ತು ಸ್ವಯಂ ರಕ್ಷಣೆಯ ನಡುವೆ ಗೊಂದಲಗಳಿರಲಿಲ್ಲ. ಅವರು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬ ಮನಸ್ಥಿತಿಯವರು…
ಯುದ್ಧದ ಹೊಸ್ತಿಲಲ್ಲಿ ನಿಂತ ದೇಶವನ್ನು ಮಣಿಸಲು ಅಮೇರಿಕಾ ಗುಟುರು ಹಾಕಿತ್ತು.
ಯುದ್ಧ ನಿಲ್ಲಿಸದಿದ್ರೆ ಗೋಧಿ ಸರಬರಾಜು ನಿಲ್ಲಿಸ್ತೀವಿ ಅಂತ.
ನಿಮ್ಮ ಹಂಗಿನ ಮುಗ್ಗುಲು ಗೋಧಿಗಿಂತ ಉಪವಾಸ ಇದ್ದೇವು ಅಂತ ಉತ್ತರ ಹೋಗತ್ತೆ.
ಮತ್ತೆ ಗುಟುರು ಹಾಕಿದ ಅಮೇರಿಕಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆದರಿಸತ್ತೆ. ಯುದ್ಧಕ್ಕಿಂತ ಹೆಚ್ಚು ಜನ ಹೊಟ್ಟೆಗಿಲ್ಲದೆ ಸಾಯಬಹುದು, ಯೋಚಿಸಿ ಅಂತ.
ಆತ, ದೇಶದ ಜನರಿಗೆ ಕರೆ ಕೊಡ್ತಾರೆ. ಇನ್ಮುಂದೆ ದೇಶದ ಜನ ವಾರದ ಒಪ್ಪತ್ತು ದೇಶಕ್ಕಾಗಿ ಉಪವಾಸ ಮಾಡೋಣ… ಬಹುತೇಕ ಇಡೀ ದೇಶದ ಆ ಒಂದು ತಲೆಮಾರು, ಅದೊಂದು ಮಾತಿಗಾಗಿ ತಮ್ಮಿಡೀ ಬದುಕು ಸೋಮವಾರ ಒಪ್ಪತ್ತಿನ ಉಪವಾಸ ಮಾಡಿದ್ದಾರೆ.
ಅಂತಹ ಧೀಶಕ್ತಿಯ ವ್ಯಕ್ತಿ ಯಾರು?
ಎಲ್ಲಿಯೋ ಸಿಕ್ಕಿದ ಕೋಟ್ ತಗಲಾಕಿ ಕೊಂಡಂತೆ ವಂಶಗಳ ನಕಲಿ ಹೆಸರಲ್ಲದೆ, ಕಾಶಿಯ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರಾಧ್ಯಯನ ಮಾಡಿ ಶಾಸ್ತ್ರಿ ಆದವರು ಲಾಲ್ ಬಹದ್ದೂರ್ ಶಾಸ್ತ್ರಿ.
ಮೇಲೆ ಹೇಳಿದ್ನಲ್ವಾ, ಯುದ್ಧ ಅಂತ…ಸೈನಿಕರ ಕೈಲಿದ್ದ ಬಂದೂಕಿನ ನಳಿಗೆಯಲ್ಲಿ ಗುಬ್ಬಿ ಗೂಡು ಕಟ್ಟಲೆಂಬ ಕವನದ ಕನಸಲಿ ಕೂರದ ಪ್ರಧಾನಿ ಆತ.
ಭಾರತದ ಮೇಲೆ ನುಗ್ಗಿ ಬಂದ ಪಾಕ್‌ನ ಒಳಗೇ ನುಗ್ಗಿ ಆ ದುಷ್ಟ ರಾಷ್ಟ್ರವನ್ನು ಬಗ್ಗುಬಡೆಯಲು ಸೇನೆಗೆ ಆದೇಶ ನೀಡಿದಾತ.
ಪಾಕಿಸ್ತಾನಕ್ಕೆ ಬಿದ್ದ ಈ ಅನಿರೀಕ್ಷಿತ ಹೊಡೆತ,ಬಸವಳಿದು ಮಣಿದಿತ್ತು ಭಾರತದೆದುರು. ಆಗ ನಡೆದ ಶಾಂತಿ ಮಾತುಕತೆ ಎಂಬ ಜಾಗತಿಕ ಷಡ್ಯಂತ್ರ. ಸೈನಿಕರು ದೇಶಕ್ಕೆ ಗೆದ್ದು ಕೊಟ್ಟ ಗೆಲುವಿಗೆ ಸಂಭ್ರಮಿಸಲೂ ಸಮಯವಿಲ್ಲದೆ ರಷಿಯಾದಲ್ಲಿ ಅನೂಹ್ಯವಾಗಿ ಮೃತರಾಗಿ ಮರಳಿದರು. ಮನೆ ಕಳ್ಳರನ್ನು ಮಹೇಶ್ವರನೂ ಹಿಡಿಯಲಾರನಂತೆ. ಅದಿರಲಿ, ಇನ್ನೊಮ್ಮೆ ವಿವರವಾಗಿ ಚರ್ಚಿಸುವ.
ಹದಿನೆಂಟು ತಿಂಗಳು ಮಾತ್ರ ದೇಶದ ಕರ್ಣಧಾರತ್ವ ಮಾಡಿದ ದಿಟ್ಟನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ.″