ಬಲು ಸುಂದರಿ ನಾನು..
ಬಲು ಸುಂದರಿ ನಾನು..
ಬಲು ಸುಂದರಿ ನಾನು…
ಕಣ್ಣು ಮೂಗು ತುಟಿಯ ಕನ್ನಡಿಯೊಳು ನೋಡಿದರೆ, ನಾಚಿತು ಕನ್ನಡಿ….
ಬಲು ಸುಂದರಿ ನಾನು..
ಬಲು ಸುಂದರಿ ನಾನು..
ಅಂದ ಚಂದದಲ್ಲಿ ಯಾರಿಗಿಂತ ಕಮ್ಮಿ ಇಲ್ಲ..
ಬಣ್ಣವೇನು ಕಮ್ಮಿಯಲ್ಲ, ತುಂಬಾ ಹೆಚ್ಚೇನಿಲ್ಲ..
ಬಲು ಸುಂದರಿ ನಾನು..
ಬಲು ಸುಂದರಿ ನಾನು…
ನೋಡಲು ಸಣ್ಣಕಿಲ್ಲ, ದಪ್ಪವೇನು ಅಲ್ಲ..
ಎತ್ತರ ಕುಳ್ಳಗಿಲ್ಲ, ಒಂಟೆನೂ ಅಲ್ಲ..
ಬಲು ಸುಂದರಿ ನಾನು..
ಬಲು ಸುಂದರಿ ನಾನು..
ಅಂದ ಚಂದ ನನ್ನೊಳಗಿಲ್ಲ.. ಇಟ್ಟಿಹನು ಆ ದೇವ ನಿಮ್ಮ ಕಣ್ಣಿನಲ್ಲಿ ,
ನಿಮ್ಮದೇ ಕಣ್ಣಿನಲ್ಲಿ….
ಆದರೂ ಹೇಳುವೆ, ನಿಜವನ್ನೇ ಹೇಳುವೆ!! …
ಬಲು ಸುಂದರಿ ನಾನು..
ಬಲು ಸುಂದರಿ ನಾನು…..
–ಶ್ವೇತಾ ಪಟ್ಟಣಶೆಟ್ಟಿ.
ಬಾದಾಮಿ
Now it’s nice to read and listen, But if it was written by others to you, It will be fantastic