ಗಾಂಧಿ ರೂಪ ಅಪರೂಪ

ಗಾಂಧಿ ರೂಪ ಅಪರೂಪ

ಮೊನ್ನೆ ಸಂಡೂರಲ್ಲಿ ಯುವಕರ ಗುಂಪೊಂದು ಗಾಂಧಿ ಮೂರ್ತಿಯ ಸುತ್ತ ಉಲ್ಲಾಸದಿಂದ ಫೋಟೋ ಕ್ಲಿಕ್ ನಲ್ಲಿ ತೊಡಗಿದ್ದರು. ಸಂಡೂರ ಗೆ ಗಾಂಧಿ ಬಂದಾಗ ಅಲ್ಲಿ ನಿಂತು ನಿಸರ್ಗ ನೋಡಿ ಸಂಡೂರ ಸೆಪ್ಟಂಬರ್ ದಲ್ಲಿ ನೋಡಲು ಸೊಗಸಾಗಿದೆ ಎಂದರಂತೆ. ಅದನ್ನು ಗಾಂಧಿ ವಿವ್ ಪಾಯಿಂಟ್ ಎಂದು ಕರೆದು ಆತನ ಮೂರ್ತಿ ನಿಲ್ಲಿಸಿದ್ದಾರೆ.

ಅಮೂರ್ತವಾಗಿ ಭಾರತದ ಜನ ಮಾನಸದಲ್ಲಿ ನೆಲೆನಿಂತ ವ್ಯಕ್ತಿತ್ವ ಗಾಂಧಿಯದು. 154 ವರ್ಷಗಳ ನಂತರ ಕೇವಲ 20-24 ವರ್ಷದ ಯುವಕರ ಗುಂಪು ಗಾಂಧಿಯನ್ನು ಜೊತೆ ಮಾಡಿಕೊಂಡು ಭಾವಚಿತ್ರ ದಲ್ಲಿ ಒಂದಾದರು.
ಗಾಂಧಿಯ ಹೋರಾಟ, ಉಪವಾಸ, ಜೈಲಿನ ಯಾತನೆ, ಬೂಟಿನ ಒದೆ ನೋಡದ ಯುವಕರು ತಮ್ಮೊಳಗೆ ಗಾಂಧಿಯನ್ನು ಸಂಧಿಸಬೇಕಿದೆ.
ಪ್ರಾಥಮಿಕ ಶಾಲೆಯಲ್ಲೇ ಇನ್ನೊಬ್ಬರನ್ನು ನೋಡಿ ಕಾಪಿ ಮಾಡದ ಗುಣ ಗಾಂಧಿಯ ಪ್ರಾರಂಭ.
ದಕ್ಷಿಣ ಆಫ್ರಿಕ ದ ಟ್ರೇನ್ ದಲ್ಲಿ ಹೊರ ದಬ್ಬಿಸಿಕೊಂಡ ನೋವು ಆತನನ್ನು ಹೋರಾಟಕ್ಕೆ ಹಚ್ಚಿದ ಸಂದರ್ಭ. ಅಪ್ಪನ ದುಡ್ಡು ಕದ್ದದ್ದು, ಸ್ನೇಹಿತರೊಂದಿಗೆ ಮಾಂಸ ತಿಂದದ್ದು ಎಲ್ಲದನ್ನೂ ತಪ್ಪೊಪ್ಪಿಗೆಯಂತೆ ಬರೆದದ್ದೇ ಆತ್ಮ ಕಥನ.
ದಕ್ಷಿಣ ಆಫ್ರಿಕಾದ ನೋವು ಭಾರತದ ನೋವು ಒಂದೇ ಎಂದು ತಿಳಿದಾಗ ಗಾಂಧಿ ಬಂದದ್ದು ಭಾರತಕ್ಕೆ.
1920 ರಿಂದ ಗಾಂಧಿ ಇನ್ನಿಲ್ಲ ವಾಗುವವರಗೆ ಆತನದೇ ಯುಗ. ಅವರ ಸೈರಣೆ, ಸಂಯಮ, ತ್ಯಾಗ, ಬದ್ಧತೆ, ಅವರನ್ನು ಮಹಾತ್ಮಾರನ್ನಾಗಿಸಿತು.
ಉಪ್ಪು- ಉಪವಾಸ- ಸತ್ಯಾಗ್ರಹ- ಜೈಲು ಗಾಂಧಿಯೊಂದಿಗೆ ಜೋಡು ಗೊಳ್ಳುವ ಪದಗಳು. ಅಸ್ತ್ರ ಹಿಡಿಯದೆ, ರಕ್ತ ಹರಿಸದೆ ಅಹಿಂಸೆ ಎಂಬ ಸೋಜಿಗದೊಂದಿಗೆ ಸ್ವಾತಂತ್ರದ ಕದ ತೆಗಿಸಿದಾತ.
ದೇಶ ಸುತ್ತುತ್ತ ಗಾಂಧಿ ಮೈಸೂರಿಗೆ ಬಂದಾಗ ಸೇರಿದ ಜನಸ್ತೋಮ ಕಂಡು ಕುವೆಂಪು ತಮ್ಮ ಕಾವ್ಯದಲ್ಲಿ ಹೀಗೆ ವರ್ಣಿಸಿದ್ದಾರೆ.
ಇವನು ಕಲ್ಲಿನ ರೊಟ್ಟಿ ಮಾಡಿಲ್ಲ, ಹುಲ್ಲಿನಲಿ ನಿಶಿತಾಸ್ಸ್ತ್ರವನು ಮಂತ್ರದಿಂದ ರಚಿಸಿ ದಾನವನ ಕೊಂ ದಿಲ್ಲ ;ಅರ್ಧ ನರ ಅರ್ಧ ಮೃಗ ರೂಪದಲಿ ಕಂಭವನೊಡೆದು ಗುಡು ಗುಡಿಸಿ ಮೂಡಿದವನಲ್ಲ ದಶಶಿರನ ಕೊಂದಿಲ್ಲ ;ಚಕ್ರಾಧರನೂ ಅಲ್ಲ
ಅದ್ಭುತ ಪವಾಡಗಳ, ಅಘಟಿತ ವಿಚಿತ್ರಗಳ ಗೋಜಿಗವನೆಂದಿಗೂ ಹೋಗುವಾತನೇ ಅಲ್ಲ, ಮತ್ತಾವ ದೇವತ್ವ ವೀಕ್ಷಣೆಗೆ ನೆರೆದಿಹರ್ ಇನಿತು
ಮನುವಂಶಜರ್?

ಇಂಥ ಗಾಂಧಿ, ನಮ್ಮ ಗಾಂಧಿ, ಲೋಕ ಕಂಡ ಸಂತ ಗಾಂಧಿಯನ್ನು ಚೆನ್ನ ವೀರ ಕಣವಿಯವರು
ಗಾಂಧಿ ರೂಪ ಅಪರೂಪ ಭಾರತವ ಬೆಳಗಿತಿಂತು.
ಎಂದಿದ್ದಾರೆ.

ಮಹಾಂತೇಶ ಮಸ್ಕಿ.

Don`t copy text!