ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ ಅಸ್ಥಿತ್ವಕ್ಕೆ
ಗಾಂಧಿಜಿ ಬದಕು ಅನುಸರಿಸಿ-ಡಾ.ಬಸವರಾಜ ಕೊಡುಗುಂಟಿ
e -ಸುದ್ದಿ ಮಸ್ಕಿ
ಹುಟ್ಟು ಶ್ರೀಮಂತರಾಗಿದ್ದ ಗಾಂಧೀಜಿ ಪಕೀರನಂತೆ ತುಂಡು ಬಟ್ಟೆ ಹುಟ್ಟುಕೊಂಡು ಬದಲಾದ ಚಿತ್ರಣವನ್ನು ಗಮನಿಸಬೇಕಾಗಲಿ, ಗಾಂಧಿಜಿಯ ಬಗ್ಗೆ ಇಲ್ಲ ಸಲ್ಲದ ಅಪವಾದಗಳು ಬೇಡ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಪಕ ಡಾ.ಬಸವರಾಜ ಕೊಡುಗುಂಟಿ ಹೇಳಿದರು.
ಪಟ್ಟಣದ ಅಭಿನಂದನ್ ಸ್ಪೂರ್ತಿಧಾಮದಲ್ಲಿ ಕಸಾಪ ಮತ್ತು ಅಕ್ಷರ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಗಾಂಧೀ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಾಂಧೀಜಿಯಂತೆ ವೇಷ ಹಾಕುವುದು, ಪ್ರತಿ ಗ್ರಾಮದಲ್ಲಿ ಗಾಂಧಿ ಮೂರ್ತಿ ಮಾಡುವದರಿಂದ ಯಾವುದೇ ಪ್ರಯೋಜನವಿಲ್ಲ. ಗಾಂಧಿತತ್ವಗಳನ್ನು ಅನುಸರಿಸಿದಾಗ ಮಾತ್ರ ಗಾಂಧಿಜಿ ಅರ್ಥವಾಗಲು ಸಾಧ್ಯ. ಗಾಂಧಿಜಿಯನ್ನು ಎಡ ಮತ್ತು ಬಲ ಪಂಥಿಯರು ಟೀಕಿಸುತ್ತಿದ್ದಾರೆ. ಆದರೆ ಗಾಂಧಿಜಿಯ ದೂರದೃಷ್ಟಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ವೀರೇಶ ಸೌದ್ರಿ ಮಾತನಾಡಿ ಸಹಕಾರ ತತ್ವದಲ್ಲಿ ಅಡಿಯಲ್ಲಿ ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘವನ್ನು ಸ್ಥಾಪಿಸಿದ್ದು ಈ ಭಾಗದ ಲೇಖಕರ ಪುಸ್ತಕಗಳ ಪ್ರಕಟಣೆ ಮತ್ತು ರಿಯಾಯಿತಿ ದರದಲ್ಲಿ ಓದುಗರಿಗೆ ತಲುಪಿಸುವ ಉದ್ದೇಶ ಹೊಂದಿದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಪ್ರಕಾಶನ ಸಂಸ್ಥೆಗಳು ಬೆರಳಣಿಕೆಯಷ್ಟು ಇದ್ದು ಪ್ರಕಾಶನ ಸಂಸ್ಥೆಯನ್ನು ಬೆಳೆಸುವಂತೆ ಮನವಿ ಮಾಡಿದರು.
ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘದ ಮಾಹಿತಿ ಪತ್ರಿಕೆಯನ್ನು ಬಿಡುಗಡೆ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಾಹಾಂತೇಶ ಮಸ್ಕಿ ಮಾತನಾಡಿ ವಾಟ್ಸ್ಆಪ್‌ನಲ್ಲಿ ಗಾಂಧಿಯನ್ನು ಕುರಿತು ಬರುತ್ತಿರುವ ಮಾಹಿತಿಗಳನ್ನು ನಂಬುವ ಇಂದಿನ ಯುವ ಜನಾಂಗ ಗಾಂಧಿ ಕುರಿತು ತಪ್ಪು ಅಭಿಪ್ರಾಯ ಪಡುತ್ತಿರುವುದು ನೋವಿನ ಸಂಗತಿ. ಗಾಂಧೀಜಿಯನ್ನು ವಿದೇಶಿಗರು ಅರ್ಥಮಾಡಿಕೊಂಡಷ್ಟು ಭಾರತೀಯರಾದ ನಾವು ಅರ್ಥ ಮಾಡಿಕೊಳ್ಳದಿರುವುದು ದುರದುಷ್ಟಕರ ಎಂದರು.
ಮಸ್ಕಿ ತಾಲ್ಲೂಕು ಕಸಾಪ ಅಧ್ಯಕ್ಷ ಆದಪ್ಪ ಹೆಂಬಾ, ಅಕ್ಷರ ಸಾಹಿತ್ಯ ವೇದಿಕೆ ಅಧ್ಯಕ್ಷ ಗುಂಡುರಾವ್ ದೇಸಾಯಿ, ಶಿಕ್ಷಕ ಮಹೇಶ ಶಟ್ಟರ್, ಅಭಿನಂದನ್ ಸಂಸ್ಥೆಯ ಗೌರವಧ್ಯಕ್ಷ ಶಿವಪ್ರಸಾದ ಕ್ಯಾತ್ನಟ್ಟಿ ಮಾತನಾಡಿದರು. ಸಿಂಧನೂರು ತಾಲ್ಲೂಕು ಕಸಪ ಅಧ್ಯಕ್ಷ ಪಂಪಯ್ಯ ಸ್ವಾಮಿ ಅಂತರಗAಗಿ, ಶಂಕರ್ ಸಕ್ರಿ, ಬಾಲಯ್ಯ ನಾಯಕ, ಕಾಮಾಕ್ಷಿ ತೋಟದ್, ಷೇಖಖಾಜಿ, ದೇವರಾಜ ಗಂಟಿ ಗಾಂಧಿ ಕುರಿತು ಕವಿತೆಗಳನ್ನು ವಾಚಿಸಿದರು. ಅಭಿನಂದನ್ ಸಂಸ್ಥೆಯ ಅನಾಥ ಮಕ್ಕಳ ನಡೆಸಿದ ರೂಪಕಗಳು ಮನಸೊರೆಗೊಂಡವು.