ಸರ್ಕಾರಿ ನೌಕರರಿಗೆ ತುಟ್ಟಿ ಭತ್ತೆ ಬಿಡುಗಡೆ 

ಮುಖ್ಯಮಂತ್ರಿಗೆ ಪಂಪಾಪತಿ ಹೂಗಾರ್ ಅಭಿನಂದನೆ

 

e-ಸುದ್ದಿ ಮಸ್ಕಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 1ನೇ ಜುಲೈ 2022 ರಿಂದ ಬಾಕಿ ಇದ್ದ ತುಟ್ಟಿಭತ್ಯೆಯನ್ನು ಬಿಡುಗಡೆ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸರ್ಕಾರಿ ನೌಕರರ ಸಂಘದ ಮಸ್ಕಿ ತಾಲೂಕ ಅಧ್ಯಕ್ಷರಾದ ಪಂಪಾಪತಿ ಹೂಗಾರ್ ಬಳಗಾನೂರ ಅಭಿನಂದಿಸಿದ್ದಾರೆ.

ಅವರು ಈ ಕುರಿತು ಮಂಗಳವಾರ ಮಾತನಾಡಿ ತುಟ್ಟಿ ಭತ್ತೆ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ ನೌಕರರ ಸಂಘದಿಂದ ಸಿಎಂಗೆ ಮನವಿ ಸಲ್ಲಿಸಲಾಗಿತ್ತು, ಮನವಿಗೆ ಸ್ಪಂದಿಸಿದ ಸರ್ಕಾರ, ಸರ್ಕಾರಿ ನೌಕರರಿಗೆ ಶೇ. 3.75 ರಷ್ಟು ತುಟ್ಟಿ ಭತ್ತೆಯನ್ನು ಬಿಡುಗಡೆ ಮಾಡಿ ಮೂಲ ವೇತನ ಶೇ. 27.25 ರಿಂದ ಶೇ 31.00 ರಷ್ಟು ಮಾಡಿ.1ನೇ ಜುಲೈ 2022 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಮಂಜೂರು ಮಾಡಿ ಸರ್ಕಾರದ ಆದೇಶ ಹೊರಡಿಸಿದ್ದು, ಇದರಿಂದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 5.20ಲಕ್ಷ ಸರ್ಕಾರಿ ನೌಕರರು,ನಿಗಮ,ಮಂಡಳಿ, ಅನುದಾನಿತ ಸಂಸ್ಥೆಗಳು 3 ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದರು.

 

Don`t copy text!