ಹೆಣ್ಣುಮಕ್ಕಳು ಪುಣ್ಯದ ಫಲಗಳು

ಸ್ವಾತಂತ್ರ ಭಾರತ ನಾರಿಯರೆಲ್ಲಾ
ಕೇಳಿರಿ ನೀವು ಇಲ್ಲೊಮ್ಮೆ
ಅಂತರಾಷ್ಟ್ರೀಯ ಮಹಿಳಾ ದಿನವಾ ಆಚರಿಸ ಬನ್ನಿ ಎಲ್ಲೆಲ್ಲೂ

ಹೆಣ್ಣುಮಕ್ಕಳು ಪುಣ್ಯದ ಫಲಗಳು
ಕೊಲ್ಲಬೇಡಿರಿ ಜೀವಗಳ
ಭ್ರಾಂತಿಯ ಬಿಟ್ಟು ಕುಟುಂಬದಲ್ಲಿ ಶಾಂತಿಯ ಪಡೆಯಿರಿ ನೀವುಗಳು

ವಿದ್ಯೆಯ ಕಲಿತು ಸಾಧನೆ ತೋರಿ
ಆರ್ಥಿಕ ಸಬಲತೆ ಹೊಂದುವೆವು
ಪ್ರಗತಿಯ ಹಾದಿ ಸುಸ್ಥಿರವಾಗಿ
ಬೆಳೆಯಲಿ ವಿಶ್ವದಿ ಭಾರತವು

ಹೆಣ್ಣು ಗಂಡು ಸಮಾನವೆಂದು
ಸಾರಿರಿ ನೀವು ಅನುದಿನವೂ
ಸಮಾನತೆ ಪ್ರೀತಿ ಗೌರವ ಮೊಳೆಯಲಿ
ನಮ್ಮಯ ನೆಲೆಯ ಆಳದಲಿ

ಬೆಳೆಯುವ ದಾರಿ ಕಂಡೆವು ನಾವು ಜ್ಞಾನದ ಬೆಳಕಿನ

ಬಿಂಬದಲಿ
ಸತ್ಯ ನ್ಯಾಯದಿ ನೆಮ್ಮದಿ ಹರಸಿ ಹೋರಾಡಿ ಬಂದೆವು

ಕಾಲುಕಿತ್ತು

ಅನ್ಯಾಯವನು ಮೆಟ್ಟಿನಿಲ್ಲಿರಿ
ಗಟ್ಟಿತನದ ದನಿಯಲ್ಲಿ
ಸ್ವಾತಂತ್ರ ಎಂಬುದು ಭಿಕ್ಷೆಯು ಅಲ್ಲ
ಧಕ್ಕಿಸಿಕೊಳ್ಳಿರಿ ಜಗದಲ್ಲಿ

ನೀವು ಮೇಲು ನಾವು ಕೀಳು ಎಂಬ ತರತಮ ಇನ್ನೇಕೆ
ಮೌಢ್ಯವನಳಿದು ಕೀಳಿರಿಮೆ ಕಳೆದು ವಿಚಾರ ಮೊಳೆಯಲಿ ಲೋಕದಲಿ

-ಡಾ.ಸುಜಾತ ಅಕ್ಕಿ

Don`t copy text!