.ಮಳೆಯ ಅಬ್ಬರ
ಕತ್ತಲ ಮುಸುಕಿದ ಕರಿ ಮೋಡದಲ್ಲಿ
ತಣ್ಣನೆಯ ತಂಪಾದ ತಂಗಾಳಿಯಲ್ಲಿ
ತುಂತುರು ಹನಿಗಳ ಮಳೆ ಹಗಲಿರುಳು ರಪರಪನೆ ಸುರಿಯುತ್ತಿದೆ
ಸುರಿದ ಮಳೆ ನೀರಿಗೆ
ಝರಿ ನೀರ ಸಾಗಿ ಕಾಲುವೆಗೆ
ಬತ್ತಿದ ಕಾಲುವೆ ಹಾಸುಗಟ್ಟಿ
ತುಂಬಿ ಹರಿಯುತ್ತಿದೆ ಕೆರೆಕಟ್ಟೆ
ಗಂಗೆಯ ಒಡಲ ಮೈದುಂಬಿ
ದುಮ್ಮು ದುಮ್ಮಕಿ ಹೊಲಗದ್ದೆಗಳೆಲ್ಲಾ ತುಂಬಿ
ಹುಲುಸಾಗಿ ಬೆಳೆದ ಪೈರಿನ ಫಲ
ನಾಶ ಮಾಡಿದ ಗಂಗೆಯ ಜಲ
ನೆರೆಯ ಪ್ರದೇಶ ಬರಡಾಗಿದೆ
ಜನರ ಜೀವನದ ಅಲೆದಾಟ ಸುರುವಾಗಿದೆ
ಬಯಲು ಬಿದಿಯಲ್ಲಿ ಉಪವಾಸ
ಹಗಲಿರುಳು ಸೋಸುವುದು ವನವಾಸ
–ಗಾಯಿತ್ರಿ ಬಡಿಗೇರ