ನವಚೇತನ

 

ನವಚೇತನ

ಅಜ್ಞಾನಕ್ಕೆ ಬೆಳಕ ತೋರಿದ ರವಿಯ ರಶ್ಮಿಗಳು
ಅಂದದ ಬರಹದ ರೂಪಕ್ಕೆ ಮುನ್ನುಡಿ ಗಾರರು
ಅವಿವೇಕ ಅಳಿಸಿದ ವಿವೇಕ ಮಣಿಗಳು
ಕಲ್ಲರಳಿಸಿದ ಹೂ ಮನದ ಪ್ರತಿಮಾ ಕಾರರು

ವಿದ್ಯಾರ್ಥಿಗಳ ಹೃದಯ ಗೆದ್ದ ಹೃದಯವಂತರು
ನಿಷ್ಠೆ ನಿಯಮದ ಕರ್ತವ್ಯ ಪಾಲಕರು
ಸಹನೆ ಸ್ನೇಹದ ಅಳತೆ ಗೋಲಿಗೆ ಸಿರಿವಂತರು
ಶುಭ್ರ ಮನಸಿನ ಗುಣವಂತರು

ಸ್ಪರ್ಧಾತ್ಮಕ ವಿದ್ಯಾರ್ಥಿಗಳ ನಿರ್ಮಾಣಕಾರರು
ಛಲವನು ಬಿತ್ತಿ ಬೆಳೆದ ಚಾಣಕ್ಯ ಗಾರರು
ನವ ಅನ್ವೇಷಣೆಗೆ ಕಡಲ
ತೆರೆಗಳು
ಬಸವತತ್ವದ ನೀತಿ ತಿಳಿಸಿದ
ತತ್ವಕಾರರು

ಅಕ್ಷರ ಕಲಿಸಿದ ಪರಮ ಜ್ಯೋತಿ
ನೀವು
ಉತ್ಸಾಹ ತುಂಬಿ ಬೆಳೆಸುವ ಚಿಲುಮೆಯು ನೀವು
ವಿಶ್ವಾಸಕ್ಕೆ ಆತ್ಮವಿಶ್ವಾಸ ಬೆಳೆಸಿದ ನಾವಿಕ ನೀವು
ಚೇತನದಲ್ಲಿ ಅಡಗಿದೆ ಚೇತನಕ್ಕೆ ನವಚೇತನವಾದವರು ನೀವು

 

ಶೀಲಾ ಹಾಳಕೇರಿ

ಮುದುಗಲ್

Don`t copy text!