ಹಿರಿಯ ನಾಗರಿಕರ ರಕ್ಷಣೆ ಮತ್ತು ಬಾಲ್ಯವಿವಾಹ ನಿಷೇದ ಕಾಯ್ದೆ

ಹಿರಿಯ ನಾಗರಿಕರ ರಕ್ಷಣೆ ಮತ್ತು ಬಾಲ್ಯವಿವಾಹ ನಿಷೇದ ಕಾಯ್ದೆ

e-ಸುದ್ದಿ ಕುಷ್ಟಗಿ

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ತಾಲೂಕು ವಕೀಲರ ಸಂಘ ಮತ್ತು ಕಾನೂನು ಸೇವಾ ಸಮಿತಿ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ರಕ್ಷಣೆ ಮತ್ತು ಬಾಲ್ಯವಿವಾಹ ನಿಷೇದ ಕಾಯ್ದೆ ಕುರಿತು ಶ್ರೀಮತಿ ಸುಭದ್ರಾ ದೇಸಾಯಿ ವಕೀಲರು ಉಪನ್ಯಾಸ ನೀಡಿದರು. ಕಾರ್ಯಕ್ರಮ ಉಧ್ಘಾಟಕರಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಮತಿ ಸರಸ್ವತಿ ದೇವಿಯವರು ಮಾತನಾಡಿ ಕಾನೂನು ಅರಿವು ಆ ಕುರಿತು ವಿಧ್ಯಾರ್ಥಿಗಳು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಬಾಲ್ಯದಲ್ಲಿ ವಿವಾಹವಾಗುವುದು ಅನೇಕ ಸಮಸ್ಯೆಗಳಿಗೆ ಮೂಲ ಬೀಜವೆಂದರು.
ಪ್ರಾಚಾರ್ಯರಾದ ಶ್ರೀ ಮತಿ ಮಾಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಕಾರ್ಯದರ್ಶಿ ಶ್ರೀ ಎಮ್. ಹೆಚ್.
ಗೋಡಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ರಾಯನಗೌಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ ಬಿ ಚೌಧರಿ ಸ್ವಾಗತಿಸಿದರು. ಸಂಜಯ ಬಡಿಗೇರ ಪ್ರಾರ್ಥನೆ ಮಾಡಿದರು. ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ನಾಗರಾಜ ಹೀರಾ ಇವರು ನಿರೂಪಿಸಿದರು ಕೊನೆಯಲ್ಲಿ ಶೇಖಬಾಬು ವಂದಿಸಿದರು.

Don`t copy text!