ಹೂಗಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಮಸ್ಕಿ,ಹೂಗಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ 

e-ಸುದ್ದಿ ಮಸ್ಕಿ

ಮಸ್ಕಿ ತಾಲೂಕಿನ ಹೂಗಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಲೂಕು ಹೂಗಾರ ಸಂಘದಿಂದ ಸನ್ಮಾನಿಸಿ ಅಭಿನಂದಿಸ ಲಾಯಿತು.
ಪಟ್ಟಣದ ಗಚ್ಚಿನಮಠದಲ್ಲಿ ಸಂಘದಿಂದ ಹಮ್ಮಿಕೊಂಡ ಸಂಘದ ಸಭೆಯಲ್ಲಿ ಶ್ರೀ ಶರಣ ಹೂಗಾರ ಮಾದಯ್ಯನವರ ಪೂಜಾ ಕಾರ್ಯಕ್ರಮವನ್ನು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಸ್ವಾಮೀಜಿಯವರು ಪೂಜೆ ನೆರವೇರಿಸಿದರು.
ತಾಲೂಕಿನ ವಿವಿಧ ಗ್ರಾಮದ ಹೂಗಾರ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಐದು ಜನ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಮಸ್ಕಿ ತಾಲೂಕಾಧ್ಯಕ್ಷರಾಗಿ ಅಮರೇಶ ಹೂಗಾರ ಗೂಗೆಬಾಳ್, ಗೌರವಾಧ್ಯ ಕ್ಷರಾಗಿ ಬಸಣ್ಣ ಬೆಲ್ಲದಮರಡಿ, ಸಲಹೆಗಾರರಾಗಿ ನಾಗಪ್ಪ ದಿನ್ನಿ, ಉಪಾಧ್ಯಕ್ಷರಾಗಿ ಬಸವರಾಜ್ ಹೂಗಾರ್ ಮಾರಲದಿನ್ನಿ, ಜಂಬಣ್ಣ ಹೂಗಾರ್ ಅಮಿನಗಡ.
ಕಾರ್ಯದರ್ಶಿಯಾಗಿ‌ಅಮರೇಶ ಹೂಗಾರ್ ಉದ್ಬಾಳ್ ಯು,
ಕೋಶ್ಯಾಧ್ಯಕ್ಷರಾಗಿ ವೀರೇಶ್ ಹೂಗಾರ್ ಬಸಾಪುರ್ , ಸಂಘಟನಾ ಕಾರ್ಯದರ್ಶಿ ಯಾಗಿ ರವಿ ಹೂಗಾರ್ ಮಸ್ಕಿ & ಮಲ್ಲಯ್ಯ ಹೂಗಾರ್ ಹೂವಿನಬಾವಿ ಕಾರ್ಯಧ್ಯಕ್ಷರಾಗಿ ದೇವೇಂದ್ರಪ್ಪ ಹೂಗಾರ್ ಹುಲ್ಲೂರ್, ಸಹ ಕಾರ್ಯದರ್ಶಿಯಾಗಿ ವೀರೇಶ್ ಹೂಗಾರ್ ದಿನಸಮುದ್ರ ಹಾಗೂ ರಮೇಶ ಹೂಗಾರ್ ಮಸ್ಕಿ
ಜಂಟಿ ಕಾರ್ಯದರ್ಶಿಗಳಾಗಿ ಬಸವರಾಜ್ ಹೂಗಾರ್ ಮೆದಿಕಿನಾಳ ಬಸವರಾಜ್ ಹೂಗಾರ್ ಗೋನಾಳ ಅವರನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಈರಣ್ಣ ಹೂಗಾರ, ಉಪಾಧ್ಯಕ್ಷ ಲಿಂಗರಾಜ ಹೂಗಾರ ಸಿಂಧನೂರು, ಪಂಪಾಪತಿ ಹೂಗಾರ ಮಾತನಾಡಿ, ಸಮುದಾಯದ ಸರ್ವರನ್ನು ವಿಶ್ವಾಸಕ್ಕೆ ಪಡೆದು ಸಂಘಟಿಸಲು ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ಸೌಲಭ್ಯ ಪಡೆಯಲು ಶಿಕ್ಷಣ ಅಗತ್ಯವಾಗಿದ್ದು ಅದನ್ನು ಮರೆಯದೆ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸಿ ಎಂದು ಮನವರಿಕೆ ಮಾಡಿಕೊಡಲು ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಪ್ಪ ಹೂಗಾರ ಮುದಗಲ್, ಮಲ್ಲಿಕಾರ್ಜುನ ಹೂಗಾರ ಸಿರವಾರ, ಭೀಮಣ್ಣ ಹೂಗಾರ ಸಿಂಧನೂರು, ಮಲ್ಲಿಕಾರ್ಜುನ ಹೂಗಾರ ರಾಯಚೂರು,ಬಸಣ್ಣ ಮಸ್ಕಿ, ಪಂಪಾಪತಿ ಉದ್ಬಾಳ್ ,ಬಸವರಾಜ ಉಟಕನೂರು, ಶರಣಪ್ಪ ಮೆದಕಿನಾಳ ಸೇರಿದಂತೆ ಹಿರಿಯರು, ಯುವಕರು ಉಪಸ್ಥಿತರಿದ್ದರು.

Don`t copy text!