ಪುಟ್ಟರಾಜ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ರೇಣುಕಾ ಕೊಡುಗುಂಟಿ ಆಯ್ಕೆ
e-ಸುದ್ದಿ ಮಸ್ಕಿ
ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಕೊಡುವ ಪುಟ್ಟರಾಜ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ಮಸ್ಕಿ ಪಟ್ಟಣದ ರೇಣುಕಾ ಕೊಡಗುಂಟಿ ಅವರ ‘ ನಿಲುಗನ್ನಡಿ’ ಕಥಾ ಸಂಕಲನ ಆಯ್ಕೆಯಾಗಿದೆ.
ಅ. 30 ರಂದು ದಾವಣಗೆರೆಯ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ 5ನೇ ರಾಜ್ಯ ಮಟ್ಟದ ಭಕ್ತಿ ಸಮ್ಮೇಳನದ ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪುಟ್ಟರಾಜ ಸೇವಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪ್ರೋ. ಮಂಜುಶ್ರೀ ಹಾವಣ್ಣನವರ ತಿಳಿಸಿದ್ದಾರೆ.
ನನ್ನ ಕಥಾ ಸಂಕಲನಕ್ಕೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದು ಕಥಾ ಸಂಕಲನದ ಲೇಖಕಿ ರೇಣುಕಾ ಕೊಡಗುಂಟಿ ಹರ್ಷ ವ್ಯಕ್ತಪಡಿಸಿದ್ದಾರೆ.