ನಿನ್ನ ನಡೆ

ನಿನ್ನ ನಡೆ ದೇಶದೆಡೆಗೆ
ನಿನ್ನ ನಡೆ ಸಮತೆಯೆಡೆಗೆ
ನಿನ್ನ ನಡೆ ಶಾಂತಿಯೆಡೆಗೆ
ನಿನ್ನ ನಡೆ ನ್ಯಾಯದೆಡೆಗೆ
ನಿನ್ನ ನಡೆ ಮನುಷ್ಯನೆಡೆಗೆ
ನಿನ್ನ ನಡೆ ದಲಿತರಡೆಗೆ
ನಿನ್ನ ನಡೆ ಹಕ್ಕುಗಳೆಡೆಗೆ
ನಿನ್ನ ನಡೆ ಪ್ರಜೆಗಳೆಡೆಗೆ
ನಿನ್ನ ನಡೆಯೇ ಗಾಂಧೀಮಂತ್ರ
ನಿನ್ನ ನಡೆಯೇ ಜನತಂತ್ರ
ಸಮಗೊಳಿಸಿದೆ ಜಾತಿ ಕಂದರ
ಮುಚ್ಚಿ ಹಾಕಿದೆ ರಾಗ ಮತ್ಸರ
ಸ್ನೇಹ ಪ್ರೀತಿ ಹೆಚ್ಚಿತು
ದ್ವೇಷ ಕೋಪ ನೆಲೆ ಕಚ್ಚಿತು
ನಿನ್ನ ನಡೆ ಪ್ರಜಾಪ್ರಭುತ್ವ
ನಿನ್ನ ನಡೆ ಸಂವಿಧಾನ
ನಿನ್ನ ನಡೆ ಬುದ್ಧ ಬಸವ
ನಿನ್ನ ನಡೆ ಬಾಪು ಗಾಂಧೀ
ನಿನ್ನ ನಡೆ ಪುಲೆ ಅಂಬೇಡ್ಕರ್
ನಿನ್ನ ನಡೆ ಜೆಪಿ ಲೋಹಿಯಾ
ನಡೆ ನಡೆ ರಾಹುಲ
ನಿನ್ನ ಹಿಂದೆ ಈಗ ವಿಶ್ವ ಪಡೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!