ಕನ್ನಡದ ಜ್ಯೋತಿ…🪔

ಕನ್ನಡದ ಜ್ಯೋತಿ…🪔

ವಿಜೃಂಭಿಸಿ ದಶದಿಕ್ಕುಗಳಲಿ
ಪಸರಿಸಿ ಜಗದುದ್ದಗಲಕೆ
ನಾಡ ಹಿರಿಮೆ ಗರಿಮೆ ಸಾರಿ
ಬೆಳಗಲಿ *ಕನ್ನಡದ ಜ್ಯೋತಿ..*

ಶೌರ್ಯ ಸಾಹಸಗಳ ವನಿತೆ
ಸ್ನೇಹ ಬಂಧುತ್ವದ ಸಂಪ್ರೀತೆ
ಸುಜಲ ಸುಫಲಗಳ ಜೀವದೊರತೆ
ಹೆಮ್ಮೆಯ ಕನ್ನಡದ ಮಾತೆ..

ಶುದ್ಧ ಭಾವದ ಹಣತೆಯಲಿ
ನಿಷ್ಕಲ್ಮಷ ಪ್ರೇಮ ತೈಲವೆರೆದು
ಅಜ್ಞಾನದ ಬತ್ತಿ ಉರಿದು
ಬೆಳಗಿತದೋ ಕನ್ನಡದ ಜ್ಯೋತಿ..

ಜಾತಿ ಮತಗಳ ಎಲ್ಲೆ ಮೀರಿ
ಸಾಮರಸ್ಯ ಬೆರೆತು ಇಲ್ಲಿ
ಎಲ್ಲರೊಂದೆ ಎಂದುಸುರುತ
ಬೆಳಗುತಿದೆ ಕನ್ನಡದ ಜ್ಯೋತಿ…!

 

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 🙏

Don`t copy text!