ಅಂತರಂಗದ ಅರಿವು, ಬಹಿರಂಗದ ಕ್ರಿಯೆ
ಅಂತರಂಗದ ಅರಿವು, ಬಹಿರಂಗದ ಕ್ರಿಯೆ- ಈ ಉಭಯಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ. ಕೂಡಲಚೆನ್ನಸಂಗಯ್ಯನಲ್ಲಿ ಸಂಗವಾದುದು ಸರ್ವೇಂದ್ರಿಯ.
–ಚೆನ್ನಬಸವಣ್ಣ
ಚೆನ್ನಬಸವಣ್ಣ ಬಸವಣ್ಣನವರ ಸೋದರ ಅಳಿಯ ಅಕ್ಕ ನಾಗಮ್ಮ ಮತ್ತು ಶಿವದೇವ ಅಥವಾ ಶಿವಸ್ವಾಮಿ ಇವರ ಮಗ . ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಚೆನ್ನಬಸವಣ್ಣ ತಾಯಿ ಅಕ್ಕ ನಾಗಮ್ಮ ಮತ್ತು ಬಸವಣ್ಣನವರ ಆಶ್ರಯದಲ್ಲಿ ಬೆಳೆದರು. *ಬಿಜ್ಜಳನ ಆಸ್ಥಾನದಲ್ಲಿ ಅವರು ಚಿಕ್ಕದಂಡನಾಯಕನಾಗಿ ಕಾರ್ಯ ನಿರ್ವಹಿಸಿ ಅನುಭವ ಮಂಟಪದ ಮುಖ್ಯ ಸಚೇತಕರಾಗಿ ಕೆಲಸ ಮಾಡಿ ವಚನ ಸಾಹಿತ್ಯ ಸಂರಕ್ಷಣೆಯ ದಂಡನಾಯಕರಾಗಿ ಅಳಿವಿನ ಅಂಚಿನಲ್ಲಿರುವ ವಚನ ಸಾಹಿತ್ಯವನ್ನು ಉಳವಿ ಕೊಟ್ಟ ಷಟಸ್ಥಲ ಚಕ್ರವರ್ತಿ ಎಂಬ ಅಭಿದಾನ ಪಡೆದು ಕರಣ ಹಸಿಗೆ ಎಂಬ ಸಮ್ಮಗ್ರ ಆರೋಗ್ಯ ವಿಜ್ಞಾನದ ಬಗ್ಗೆ ಮಾಹಿತಿ ನೀಡುವ ಅಪರೂಪದ ವಚನೆತರ ಸಾಹಿತ್ಯವನ್ನು ರಚಿಸಿದ್ದಾರೆ.
ಅಂತರಂಗದ ಅರಿವು, ಬಹಿರಂಗದ ಕ್ರಿಯೆ
ಅರಿವು ಅಂತರಂಗದ ಸಹಜ ಪ್ರಕ್ರಿಯೆ ಸತ್ಯ ಶಾಂತಿ ಸಮತೆ ಪ್ರೀತಿ ಮಾನವ ಸಂಬಂಧಗಳ ಪ್ರಾಮಾಣಿಕ ನಿರ್ವಹಣೆಯ ಅಂತರ ಜ್ಞಾನವೇ ಅರಿವು. Conciousnes – knowledge of good conduct. ಅಂತರಂಗದ ಅರಿವು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಬಹಿರಂಗದ ಕ್ರಿಯೆ ಅಥವಾ ಆಚಾರ . ನಡೆ ನುಡಿಗಳ ಸಮನ್ವಯತೆ. ಶರಣರು ನುಡಿದು ನಡೆಯಲಿಲ್ಲ ಆದರೆ ನಡೆದು ನುಡಿದರು. ಸತ್ಯ ನಿತ್ಯ ಅನುಭವಿಸಿ ಅಂತಹ ದೈವಿ ಪ್ರಮಾಣಕರಿಸಿದ ಜ್ಞಾನ ಕ್ರಿಯೆಯಾಗಿ ಸತ್ಯ ಶುದ್ಧ ಮನಸ್ಸಿನಿಂದ ಕೂಡಿದ ಆಚರಣೆ ಅರಿವಿನ ಆಂದೋಲನದ ಪೂರಕವಾದ ಅರಿವಿನ ಪ್ರತಿರೂಪ ಬಹಿರಂಗದ ಕ್ರಿಯೆ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ.
ಈ ಉಭಯ ಸಂಪುಟ ಒಂದಾದ ಶರಣಂಗೆ ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ.
ಕೂಡಲಚೆನ್ನಸಂಗಯ್ಯನಲ್ಲಿ ಸಂಗವಾದುದು ಸರ್ವೇಂದ್ರಿಯ*.
ಅಂತರಂಗದ ಅರಿವಿನ ಪ್ರಜ್ಞೆ ಮತ್ತು ಬಹಿರಂಗದ ಸತ್ಯ ಶುದ್ಧ ಪ್ರಾಮಾಣಿಕ ಕ್ರಿಯೆ ನಡೆ ಇವೆರಡೂ ಮನುಷ್ಯನ ಭಕ್ತನ ಮೌಲ್ಯಗಳು ಅಂತಹ ಸಂಪುಟವನ್ನು ಹೊಂದಿದ ಶ್ರೇಷ್ಠ ಭಕ್ತನಿಗೆ ತನುವು ಸೂತಕವಿಲ್ಲ ಅಷ್ಟ ಸೂತಕವಿಲ್ಲ ಮನದ ಸೂತಕವಿಲ್ಲ. ಅಂದಿನ ವೈದಿಕ ಸಂಸ್ಕೃತಿಯ ಸೂತಕ ಪಾಪ ಪುಣ್ಯಗಳ ಮಾನವ ತಪ್ಪು ಗ್ರಹಿಕೆ ಸ್ವರ್ಗ ಮತ್ತು ನರಕ ಇವುಗಳ ಪರಿಕಲ್ಪನೆಯಿಂದ ಹೊರಗೆ ಬರುವ ಮಾರ್ಗ ನಡೆ ನುಡಿ ಮತ್ತು ಅರಿವು ಆಚಾರ ಕ್ರಿಯೆಗಳ ಸಮನ್ವಯತೆ ಎಂದು ಚೆನ್ನಬಸವಣ್ಣ ಹೇಳಿದ್ದಾರೆ.ಅಂತರಂಗದ ಸೂಕ್ಷ್ಮ ಮನಸ್ಸಿನ ಅರಿವು ಬಹಿರಂಗದ ಗಟ್ಟಿ ಮನಸ್ಸಿನ ಕ್ರಿಯೆಯಲ್ಲಿ ವ್ಯಕ್ತವಾಗುವ ಉದಾತ್ತ ಚಿಂತನೆಗಳ ಸಹಜ ಭಾವ. ಇಂತಹ ಒಳ ಅಂತರಂಗದ ಅರಿವು ಮತ್ತು ಹೊರ ಕ್ರಿಯೆಗಳ ಶುದ್ಧತೆ ಇದ್ದಲ್ಲಿ ಭಕ್ತನ ಸರ್ವಾಂಗ ಇಂದ್ರಿಯಗಳು ಪವಿತ್ರ ಪಾವನ ಸಂಗಮ ಎಂದಿದ್ದಾರೆ ಚೆನ್ನಬಸವಣ್ಣನವರು.
*ಡಾ.ಶಶಿಕಾಂತ ಪಟ್ಟಣ ರಾಮದುರ್ಗ